ಕುತೂಹಲ ಹೆಚ್ಚಿಸಿದ ಪಿಯುಸಿ ಫಲಿತಾಂಶ

Posted By:

ಮೇ 10 ಅಥವಾ 11 ರಂದು ಪಿಯುಸಿ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದ್ದು, ಅದಕ್ಕಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಭಾರಿ ತಯಾರಿ ನಡೆಸಿದೆ. ಈ ಹಿಂದೆ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಮೇ 10 ಕ್ಕೆ ಫಲಿತಾಂಶ ಪ್ರಕಟಿಸವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿತ್ತು.

ಈ ಬಾರಿಯ ಪಿಯುಸಿ ಫಲಿತಾಂಶವು ಸಾಕಷ್ಟು ಕುತೂಹಲಗಳನ್ನು ಹುಟ್ಟಿಸಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ಬಿಗಿ ಭದ್ರತೆ ನಡುವೆ ಅತ್ಯಂತ ಕಟ್ಟುನಿಟ್ಟಿನಿಂದ ಪರೀಕ್ಷೆಗಳನ್ನು ನಡೆಸಲಾಗಿತ್ತು. ಮಾರ್ಚ್‌ 9 ರಿಂದ 27ರ ತನಕ ಪಿಯುಸಿ ಪರೀಕ್ಷೆಗಳು ನಡೆದಿದ್ದವು. 988 ಪರೀಕ್ಷಾ ಕೇಂದ್ರದಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಸುಮಾರು 6.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಮೊದಲಿಗೆ ಪಿಯುಸಿ ಫ‌ಲಿತಾಂಶ ಪ್ರಕಟಿಸಲು ಬೇಕಾದ ಎಲ್ಲಾ ಸಿದ್ಧತೆಯನ್ನು ಇಲಾಖೆಯ ಅಧಿಕಾರಿಗಳು ಮಾಡಿಕೊಳ್ಳುತಿದ್ದು, ವೆಬ್ಸೈಟ್ ನಲ್ಲಿ ಮೊದಲು ಪ್ರಕಟಿಸಲಾಗುವುದು.

ಪಿಯುಸಿ ಫಲಿತಾಂಶ

ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳ ವಿಷಯವಾರು ಅಂಕ, ಒಟ್ಟು ಅಂಕ, ಹಾಗೂ ಶ್ರೇಣಿ ಇತ್ಯಾದಿ ಎಲ್ಲವನ್ನು ಕ್ರೋಢೀಕರಿಸಿ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವ ಕಾರ್ಯ ನಡೆಯುತ್ತಿದೆ. ಸರ್ಕಾರದ ಅಧಿಕೃತ ವೆಬ್‌ಸೈಟ್‌ ಹೊರತುಡಿಸಿ ಬೇರ್ಯಾವ ಖಾಸಗಿ ವೆಬ್‌ಸೈಟ್‌ನಲ್ಲೂ ಫ‌ಲಿತಾಂಶ ಪ್ರಕಟಿಸದಂತೆ ನಿಯಮ ರೂಪಿಸಲಾಗಿದೆ.

ವಿದ್ಯಾರ್ಥಿಗಳು ಪಡೆದ ಅಂಕದ ಮಾಹಿತಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವಾಗ ಕಣ್‌ತಪ್ಪಿನಿಂದಲೂ ಸಣ್ಣಪುಟ್ಟ ವ್ಯತ್ಯಾಸ ಆದಂತೆ ಎಚ್ಚರ ವಹಿಸಬೇಕಾಗುತ್ತದೆ. ಅಲ್ಲದೇ, ಫ‌ಲಿತಾಂಶದ ನಂತರ ಉತ್ತರ ಪತ್ರಿಕೆಯ ಫೋಟೋ ಕಾಪಿ ಇತ್ಯಾದಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಫ‌ಲಿತಾಂಶಕ್ಕಾಗಿ ಹೊಸ ಸಾಫ್ಟ್ವೇರ್‌ ಸಿದ್ಧಪಡಿಸಿದ್ದು, ಅದಕ್ಕೆ ವಿದ್ಯಾರ್ಥಿಗಳ ಹೆಸರು, ಕಾಲೇಜಿನ ಹೆಸರಿನ ಮಾಹಿತಿಯ ಅಪ್‌ಲೋಡ್‌ ಆರಂಭಿಸಿದ್ದೇವೆ ಎಂದು ಹೇಳಿದರು.

ಒಂದು ವಾರದಲ್ಲಿ ಎಸ್ಸೆಸ್ಸೆಲ್ಸಿ ಫ‌ಲಿತಾಂಶ

ಪಿಯುಸಿ ಫ‌ಲಿತಾಂಶ ಪ್ರಕಟವಾದ ಒಂದು ವಾರದೊಳಗೆ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಹೊರಬೀಳಲಿದೆ. ಎಸ್ಸೆಸ್ಸೆಲ್ಸಿ ಬೋರ್ಡ್‌ ಅಧಿಕಾರಿಗಳು ಫ‌ಲಿತಾಂಶ ಪ್ರಕಟಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಪಿಯುಸಿ ಫ‌ಲಿತಾಂಶದ ನಂತರವೇ ಎಸ್ಸೆಸ್ಸೆಲ್ಸಿ ಫ‌ಲಿತಾಂಶದ ದಿನಾಂಕ ಪ್ರಕಟಿಸಲಿದ್ದೇವೆ.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫ‌ಲಿತಾಂಶ ಒಂದೇ ದಿನ ಪ್ರಕಟಿಸುವುದರಿಂದ ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರಲ್ಲಿ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ ಮತ್ತು ಮಾಧ್ಯಮದವರಿಗೂ ಇದರಿಂದ ಕಿರಿಕಿರಿಯಾಗಲಿದೆ. ಹೀಗಾಗಿ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಪ್ರತ್ಯೇಕವಾಗಿಯೇ ಪ್ರಕಟಿಸಲಾಗುತ್ತದೆ ಎಂದು ಬೋರ್ಡ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಚ್‌ 30ರಿಂದ ಏ.12ರ ತನಕ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದಿದ್ದು, 2770 ಕೇಂದ್ರದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

English summary
he Karnataka board is going to release the Karnataka 2nd PUC Result 2017 on 10th May 2017 (Tomorrow) on the official website.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia