ಯುವ ನಿರ್ದೇಶಕರ ಎರಡನೇ ತರಬೇತಿ ಶಿಬಿರಕ್ಕೆ ರಂಗಶಂಕರ ಸಿದ್ದತೆ

ರಂಗಭೂಮಿಯಲ್ಲಿ ಯುವ ನಿರ್ದೇಶಕರನ್ನು ತಯಾರು ಮಾಡುವ ಉದ್ದೇಶದಿಂದ ಟೈಟನ್ ಸಹಯೋಗದಲ್ಲಿ ಕನ್ನಡದ ಯುವ ನಿರ್ದೇಶಕರ ಎರಡನೇ ತರಬೇತಿ ಶಿಬಿರಕ್ಕೆ ರಂಗಶಂಕರ ಅರ್ಜಿ ಆಹ್ವಾನಿಸಿದೆ.

ರಂಗಶಂಕರ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ

 

ರಂಗಶಂಕರ

ದಿವಂಗತ ಶಂಕರನಾಗ್ ರ ಕನಸುಗಳಲ್ಲಿ ಒಂದಾದ ರಂಗಶಂಕರ ರಂಗಭೂಮಿಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅರುಂದತಿ ನಾಗ್ ರ ದೃಢ ಸಂಕಲ್ಪದಿಂದ  2004 ರಲ್ಲಿ ಶುರುವಾದ ರಂಗಶಂಕರ ದಿನೇ ದಿನೇ ತನ್ನ ವ್ಯಾಪ್ತಿಯನ್ನು ಹೆಚ್ಚೆಸುತ್ತಾ ಸಾಗಿದೆ. ಎಲ್ಲಾ ಭಾಷೆಗಳ ನಾಟಕಗಳನ್ನು ಪ್ರೋತ್ಸಾಹಿಸುತ್ತ ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಅವಕಾಶ ನೀಡುತ್ತಿರುವ ರಂಗಶಂಕರ ಯುವ ಪೀಳಿಗೆಯನ್ನು ರಂಗಭೂಮಿಯತ್ತ ತಿರುಗಿ ನೋಡುವಂತೆ ಮಾಡಿದೆ. ಪ್ರತಿವರ್ಷ ನಾಟಕೋತ್ಸವಗಳನ್ನು ಆಯೋಜಿಸುತ್ತ ಬರುತ್ತಿರುವ ರಂಗಶಂಕರ ಯುವ ಪ್ರತಿಭೆಗಳನ್ನು  ಗುರುತಿಸಿ ಪ್ರೋತ್ಸಾಹಿಸಲು ಅನೇಕ ಶಿಬಿರಗಳನ್ನು ಏರ್ಪಡಿಸುತ್ತದೆ. ಶಿಬಿರಾರ್ಥಿಗಳಿಗೆ ನುರಿತ ರಂಗಕರ್ಮಿಗಳಿಂದ ಮಾರ್ಗದರ್ಶನ ನೀಡಲಾಗುತ್ತಿದೆ. ಹೊಸ ಹೊಸ ಪ್ರಯೋಗಗಳಿಂದ ಎಲ್ಲರನ್ನು ತನ್ನತ್ತ ಸೆಳೆದಿರುವ ರಂಗಶಂಕರ ಕನ್ನಡ ರಂಗಭೂಮಿ ಸೇರಿದಂತೆ ಭಾರತೀಯ ರಂಗಭೂಮಿಗೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ.

ಶಿಬಿರದ ವಿವರ

ನಗರದ ಹೊರವಲಯದಲ್ಲಿರುವ ಎಕ್ಯುಮೆರಿಕಲ್ ಕ್ರಿಶ್ಚಿಯನ್ ಸೆಂಟರ್‌ನಲ್ಲಿ ಜೂನ್ 6ರಿಂದ ಜುಲೈ 2ರವರೆಗೆ ಒಟ್ಟು 28 ದಿನಗಳ ಕಾಲ ಶಿಬಿರ ನಡೆಯಲಿದ್ದು, ಶಿಬಿರಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ.ಅರ್ಜಿ ಸಲ್ಲಿಕೆಗೆ ಏಪ್ರಿಲ್ 30 ಕಡೆಯ ದಿನ.

ವಯೋಮಿತಿ

ಈ ಮೂಲಕ ರಾಜ್ಯದಾದ್ಯಂತ 30 ವರ್ಷದೊಳಗಿನ 20 ಶಿಬಿರಾರ್ಥಿಗಳನ್ನು ಆಯ್ಕೆಮಾಡಲು ರಂಗಶಂಕರ ಮುಂದಾಗಿದೆ.

ನುರಿತ ರಂಗಕರ್ಮಿಗಳಿಂದ ತರಬೇತಿ

ಪ್ರಕಾಶ್ ಬೆಳವಾಡಿ, ಪ್ರಸನ್ನ, ಕೆ.ವಿ.ಅಕ್ಷರ, ಪ್ರದೀಪ್ ವೈದ್ಯ ಸೇರಿದಂತೆ ಇತರ ರಂಗಭೂಮಿ ದಿಗ್ಗಜರಿಂದ ನಾಟಕ ರಚನೆ, ತಾಂತ್ರಿಕತೆ, ನಿರ್ದೇಶನ ಸೇರಿದಂತೆ ರಂಗಭೂಮಿಯ ಹಲವು ಕ್ಷೇತ್ರಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಹೊಂದಿದ ಬಳಿಕ ಪ್ರತಿ ಯುವ ನಿರ್ದೇಶಕನೂ ಒಂದೊಂದು ನಾಟಕವನ್ನು ಆಯ್ದುಕೊಳ್ಳಬೇಕು. ಆಯ್ದುಕೊಂಡ ನಾಟಕದ ಪ್ರಸ್ತುತಿ ಮತ್ತು ಈ ನಾಟಕ ತನಗೆ ಅರ್ಥವಾದ ಬಗೆಯ ಕುರಿತು ರಂಗ ಶಂಕರದ ತಜ್ಞ ಸಮಿತಿಯ ಮುಂದೆ ಪ್ರಸ್ತುತ ಪಡಿಸಬೇಕು.

ಶಿಬಿರದ ನಂತರ

ಶಿಬಿರದ ಬಳಿಕ, ಯುವ ನಿರ್ದೇಶಕರು ತಮ್ಮ ಊರುಗಳಲ್ಲಿ, ತಾವು ಆಯ್ದು ಕೊಂಡ ನಾಟಕದ ಪ್ರದರ್ಶನವನ್ನು ನಡೆಸಬೇಕಾಗುತ್ತದೆ. ಇದಕ್ಕಾಗಿ ರಂಗಶಂಕರವು ಪ್ರತಿ ನಿರ್ದೇಶಕನಿಗೂ ತಲಾ ₹30 ಸಾವಿರ ಸಹಾಯ ಧನ ನೀಡಲಿದೆ.ರಂಗಶಂಕರದ ತಜ್ಞ ಸಮಿತಿಯೊಂದು ಕರ್ನಾಟಕದಾದ್ಯಂತ ಪ್ರವಾಸ ಮಾಡಿ ಯುವ ನಿರ್ದೇಶಕರ ಎಲ್ಲ ನಾಟಕಗಳನ್ನು ವೀಕ್ಷಣೆ ಮಾಡುತ್ತದೆ. ಅಂತಿಮವಾಗಿ ಆರು ನಾಟಕಗಳನ್ನು ಆಯ್ಕೆ ಮಾಡಿ, ರಂಗಶಂಕರದ ಯುವ ನಾಟಕೋತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ರಂಗಶಂಕರ, ನಂಬರ್ 36/2, 8ನೇ ಅಡ್ಡರಸ್ತೆ, ಜೆ.ಪಿ.ನಗರ ಎರಡನೇ ಹಂತ, ಬೆಂಗಳೂರು-560078.

ಇ-ಮೇಲ್: programming@rangashankara.in

Also read: 2017 -18ನೇ ಸಾಲಿಗಾಗಿ ಲಲಿತ ಕಲಾ ಅಕಾಡೆಮಿ ಶಿಷ್ಯವೇತನ

For Quick Alerts
ALLOW NOTIFICATIONS  
For Daily Alerts

    English summary
    rangashankara invites application for 28 days workshop.

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more