ಚೀನಾದಲ್ಲಿ ಉನ್ನತ ಶಿಕ್ಷಣ... ಜಾಬ್ ಗ್ಯಾರಂಟಿ ಜತೆ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

Written By: Nishmitha B

ವಿದೇಶದಲ್ಲಿ ಉನ್ನತ ಶಿಕ್ಷಣ ಮಾಡಬೇಕೆಂದಿದ್ದರೆ ಚೀನಾದಲ್ಲಿ ಮಾಡುವುದು ಬೆಸ್ಟ್‌. ನೀವು ಚೀನಾಕ್ಕೆ ಭೇಟಿ ನೀಡಿದಾಗ ಯಾಕೆ ಚೀನಾದಲ್ಲಿ ವಿದ್ಯಾಭ್ಯಾಸ ಮಾಡಬೇಕು, ಅದರಿಂದ ಏನು ಪ್ರಯೋಜನ ಎಂಬುವುದು ನಿಮಗೆ ತಿಳಿಯುತ್ತದೆ. ಯಾಕೆಂದ್ರೆ ಚೀನಾದಲ್ಲಿ ಅಷ್ಟೊಂದು ಫೆಸಿಲಿಟಿಗಳಿವೆ. ಹೊರ ದೇಶದಲ್ಲಿ ನೀವು ಸ್ಟಡಿ ಮಾಡಬೇಕೆಂದು ಡಿಸೈಡ್ ಮಾಡಿದ್ರೆ ನೋ ವರಿ ಚಿನಾದತ್ತ ಮುಖ ಮಾಡಿ. ಚೀನಾದಲ್ಲಿಯೇ ಸ್ಟಡಿ ಯಾಕೆ ಮಾಡಬೇಕು ಎಂದು ನಾವು ಹೇಳ್ತೇವೆ ಕೇಳಿ

ನೋಡುವಂತದ್ದು ತುಂಬಾ ಇದೆ:

ಚೀನಾದಲ್ಲಿ ನೋಡುವಂತಹ ತಾಣ ತುಂಬಾ ಇದೆ. ಹಾಗಾಗಿ ವಿದ್ಯಾಭ್ಯಾಸದ ಜತೆ ನೀವು ಚೀನಾದ ಇತಿಹಾಸ ಹೊಂದಿರುವ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಬಹುದು. ಚೀನಾದಲ್ಲಿ ಜೀವನ ಸಾಗಿಸಲು ಉತ್ತಮ ವಾತಾವರಣವಿದೆ. ನೀವು ಟ್ರಾವೆಲ್ ಪ್ರಿಯರಾಗಿದ್ದರೆ ನಿಮಗೆ ಚೀನಾ ಬೆಸ್ಟ್. ಚೀನಾದಲ್ಲಿ ಇತಿಹಾಸ ಪ್ರಾಮುಖ್ಯತೆ ಹೊಂದಿರುವ ಅನೇಕ ತಾಣಗಳು ಇವೆ. ಅಷ್ಟೇ ಅಲ್ಲ ಹಳೆಯ ಕಾಲದ ಶಿಲ್ಪಕಲೆಗಳನ್ನು ನೀವು ನೋಡಬಹುದು. ೫೦೦೦ ವರ್ಷ ಹಿಂದಿನ ಇತಿಹಾಸವನ್ನ ಹೊಂದಿದೆ ಚೀನಾ. ಉದಾಹರಣೆ ಗ್ರೇಟ್ ವಾಲ್ ಆಫ್ ಚೀನಾ, ಶಾಂಘೈನ ಗಗನಚುಂಬಿ ಕಟ್ಟಡಗಳು, ಬೀಜಿಂಗ್‌ನ ಒಲಂಪಿಕ್ ಬರ್ಡಸ್ ನೆಸ್ಟ್ ಇದನ್ನೆಲ್ಲಾ ನೀವು ನೋಡಬಹುದು

ಜಾಲಿಯಾಗಿರುತ್ತೆ ನೈಟ್ ಲೈಫ್

ಇನ್ನೂ ಇಲ್ಲಿಗೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಹೆಚ್ಚಾಗಿ ಬರಲು ಕಾರಣ ಇಲ್ಲಿನ ನೈಟ್ ಲೈಫ್ ಸ್ಟೈಲ್. ಇಲ್ಲಿ ಅತೀ ಹೆಚ್ಚು ಪಬ್ ಗಳಿವೆ. ಅಷ್ಟೇ ಅಲ್ಲ ಮನೋರಂಜನೆಗೆ ಇಲ್ಲಿ ಯಾವತ್ತೂ ಕೊರತೆ ಇರುವುದಿಲ್ಲ. ಅಕ್ರೋಬ್ಯಾಟಿಕ್ ಪ್ರದರ್ಶನಗಳು, ಕ್ಯಾರಿಯೋಕೆ, ಡಿಸ್ಕೋ ನೃತ್ಯ ಇಲ್ಲಿನ ಆಕರ್ಷಕ ಶೋಗಳಾಗಿವೆ. ವಿದೇಶಿ ಶೈಲಿಯ ಬಾರ್‌ಗಳು, ಪಬ್ಗಳು, ಚೈನೀಸ್ ಒಪೆರಾ ಡಿನ್ನರ್ ಶೋ ಇಲ್ಲಿನ ಆಕರ್ಷಕ ಬಿಂದುಗಳು

ಹವಾಮಾನ:

ಚೀನಾ ಪ್ರದೇಶವು ವಿವಿಧ ಹವಾಮಾನಗಳು, ಸಂಸ್ಕೃತಿಗಳು ಮತ್ತು ಭೂದೃಶ್ಯಗಳನ್ನ ಒಳಗೊಂಡಿದೆ. ಚೀನಾದ ಈಶಾನ್ಯದಲ್ಲಿ ನೀವು ಐಸ್ ಫೆಸ್ಟಿವಲ್ ಎಂಜಾಯ್ ಮಾಡಬಹುದು. ಗಗನಚುಂಬನ ಕಟ್ಟಡದ ಮೇಲ್ಭಾಗದಲ್ಲಿ ನಿಂತರೆ ನಿಮ್ಮ ಕಣ್ಣ ರೆಪ್ಪೆ ಸುತ್ತ ನೀರಿನ ಹನಿಗಳು ಮೂಡುತ್ತದೆ. 25 ಡಿಗ್ರಿ ಸೆಲ್ಸಿಯಸ್ ಟೆಂಪ್ರೇಚರ್ ಅಲ್ಲಿರುತ್ತದೆ. ಇನ್ನು ದಕ್ಷಿಣ ಭಾಗದಲ್ಲಿ ಟ್ರೋಪಿಕಲ್ ಬೀಚ್ ಇರುತ್ತದೆ. ಫ್ರೀ ಇದ್ದಾಗ ಇಲ್ಲಿಗೆ ಭೇಟಿ ನೀಡಿ ಎಂಜಾಯ್ ಮಾಡಬಹುದು

ಕಡಿಮೆ ಖರ್ಚುವೆಚ್ಚ:

ಇತರ ಯೂರೋಪಿಯನ್ ದೇಶಗಳಿಗೆ ಹೋಲಿಸಿದ್ರೆ ಚೀನಾ ತುಂಬಾ ಕಡಿಮೆ ಖರ್ಚು ವೆಚ್ಚವಿರುವ ದೇಶವಾಗಿದೆ. ಇಲ್ಲಿನ ಟ್ಯೂಶನ್ ಪೀಸ್ 1000 ಯುಎಸ್ ಡಾಲರ್‌ಗಿಂತ ಹೆಚ್ಚಿರುವುದಿಲ್ಲ. ಇನ್ನು ಕೆಲವು ಅಲ್ಪಾವಧಿಯ ಲಾಂಗ್ವೇಜ್ ಕೋರ್ಸ್ ಗಳ ಫೀಸ್ ತುಂಬಾ ಕಡಿಮೆ ಇರುತ್ತದೆ. ಫುಡ್ ಖರ್ಚು ವೆಚ್ಚವೆಲ್ಲಾ ಕಮ್ಮಿ ಇರುತ್ತದೆ. ನೀವು ಮಾಂಸಹಾರಿಯಾಗಿದ್ದರೆ ಚೀನಾ ನಿಮಗೆ ಬೆಸ್ಟ್‌

ಉದ್ಯೋಗ:

ಇನ್ನು ಚೀನಾದಲ್ಲಿ ಉನ್ನತ ಶಿಕ್ಷಣ ಮಾಡುವುದರಿಂದ ಮುಖ್ಯ ಲಾಭ ಉತ್ತಮ ಉದ್ಯೋಗವಕಾಶ. ಚೀನಾ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಹಾಗಾಗಿ ಇಲ್ಲಿ ಅತೀ ಹೆಚ್ಚಿನ ಉದ್ಯೋಗವಕಾಶವಿರುತ್ತದೆ. ನಿಮಗೆ ಇಲ್ಲಿ ಕಲಿತ ಕೂಡಾಲೇ ಉದ್ಯೋಗ ಸಿಗುವ ಅವಕಾಶ ಜಾಸ್ತಿಯೇ ಇರುತ್ತದೆ. ಉತ್ತಮ ಸಂಬಳವಿರುವ ಉದ್ಯೋಗದ ಆಯ್ಕೆ ನೀವು ಮಾಡಿಕೊಳ್ಳಬಹುದು

ಗೊತ್ತಾಯಿತ್ತಲ್ಲ ಚೀನಾದಲ್ಲಿ ಸ್ಟಡಿ ಮಾಡುವುದರಿಂದ ಏನೆಲ್ಲಾ ಲಾಭವಿದೆಯೆಂದು.ಹಾಗಾಗಿ ನೀವು ವಿದೇಶದಲ್ಲಿ ಸ್ಟಡಿ ಮಾಡಬೇಕು ಎಂದು ಆಲೋಚಿಸಿದ್ದರೆ ಚೀನಾದಲ್ಲಿ ಟ್ರೈ ಮಾಡಿ. ಹಾ ಚೀನಾಕ್ಕೆ ಪಯಣ ಬೆಳೆಸಿದ ನಂತರ ನಿಮ್ಮ ಅನುಭವ ನಮ್ಮ ಜತೆ ಹಂಚಿಕೊಳ್ಳಲು ಮರೆಯದಿರಿ

 

English summary
Studying in China could be one of the most rewarding experiences of studying abroad. If you are new to the place and wondering what the country has in store for you then here it is

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia