Pariksha Pe Charcha 2022 Registration : ಅರ್ಜಿ ಸಲ್ಲಿಕೆ ಅವಧಿ ಜ.27ರ ವರೆಗೆ ವಿಸ್ತರಣೆ

2022ನೇ ಸಾಲಿನ ಪರೀಕ್ಷಾ ಪೇ ಚರ್ಚಾ 2022 ಮಾತುಕತೆಗೆ ಭಾಗವಹಿಸಲು ಅರ್ಜಿ ಸಲ್ಲಿಕೆಯ ಅವಧಿಯನ್ನು ಜನವರಿ 27,2022ರ ವರೆಗೆ ವಿಸ್ತರಿಸಲಾಗಿದೆ.

ಪರೀಕ್ಷಾ ಪೇ ಚರ್ಚಾ 2022 : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಸಲಾಗುವ ಪರೀಕ್ಷಾ ಪೇ ಚರ್ಚಾ ದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯ ಬಗೆಗೆ ಇರುವ ಒತ್ತಡ ಮತ್ತು ಆತಂಕವನ್ನು ದೂರ ಮಾಡಿಕೊಳ್ಳುವ ಕುರಿತು ಸಂವಾದ ನಡೆಸಬಹುದು. ಈ ಸಂವಾದದಲ್ಲಿ ಭಾಗವಹಿಸಲು ಡಿಸೆಂಬರ್ 28 ರಿಂದ ಜನವರಿ 20,2022ರ ವರೆಗೆ ನೊಂದಣಿ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದ್ದು, ಆಸಕ್ತರು 27,2022ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

2021ರಲ್ಲಿ ಆನ್‌ಲೈನ್ ಮೋಡ್‌ನಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಅದರಂತೆಯೇ ಈ ಭಾರಿಯೂ ಆನ್‌ಲೈನ್ ಮೋಡ್ ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ 9 ರಿಂದ 12ನೇ ತರಗತಿಯ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಭಾಗವಹಿಸಬಹುದಾಗಿದ್ದು, ಅಭ್ಯರ್ಥಿಗಳನ್ನು ಆನ್‌ಲೈನ್ ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಆಸಕ್ತರು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://innovateindia.mygov.in/ppc-2022/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ವಿಷಯದ ಕುರಿತು ಉತ್ತರಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿಯವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯುತ್ತದೆ.

ಈ ಭಾರಿ ವಿದ್ಯಾರ್ಥಿಗಳು ಮಾತ್ರವಲ್ಲದೇ ಅವರ ಪೋಷಕರು ಮತ್ತು ಶಿಕ್ಷಕರು ಸಹ ನೋಂದಾಯಿಸಿಕೊಳ್ಳಬಹುದು ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಇಲ್ಲಿಯವರೆಗೆ ಪರೀಕ್ಷಾ ಪೇ ಚರ್ಚಾ 2022 ಕಾರ್ಯಕ್ರಮಕ್ಕೆ 9.35 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ವರ್ಷದ ಈವೆಂಟ್‌ಗೆ 2.15 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಸಹ ನೋಂದಾಯಿಸಿಕೊಂಡಿದ್ದಾರೆ.

ಪರೀಕ್ಷಾ ಪೇ ಚರ್ಚಾ 2022ಗೆ ನೋಂದಾಯಿಸಲು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರನ್ನು ಒತ್ತಾಯಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಈ ಉಪಕ್ರಮವು ಭಾರತದ ಕ್ರಿಯಾತ್ಮಕ ಯುವಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಶಿಕ್ಷಣದ ಜಗತ್ತಿನಲ್ಲಿ ಉದಯೋನ್ಮುಖ ಪ್ರವೃತ್ತಿಯನ್ನು ಕಂಡುಹಿಡಿಯಲು ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದ್ದರು.

ಕಳೆದ ವರ್ಷ ಈ ಕಾಯಕ್ರಮವು ಏಪ್ರಿಲ್ 7 ರಂದು ನಡೆಸಲಾಗಿತ್ತು. ಈ ಭಾರಿ ಫೆಬ್ರವರಿ ತಿಂಗಳಿನಲ್ಲಿ ನಡೆಸುವ ಸಾಧ್ಯತೆ ಇದೆ.

ಪರೀಕ್ಷಾ ಪೇ ಚರ್ಚಾ 2022ರಲ್ಲಿ ಭಾಗವಹಿಸಲು ಅರ್ಹತೆಗಳೇನು ?:

ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಒಂಭತ್ತನೇ ತರಗತಿ ವಿದ್ಯಾರ್ಥಿಗಳಿಂದ ಹಿಡಿದು ದ್ವಿತೀಯ ಪಿಯುಸಿ ವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳಿಗೆ ಮಹತ್ತರ ಘಟ್ಟಗಳಾದ ಬೋರ್ಡ್‌ ಪರೀಕ್ಷೆಗಳಲ್ಲಿ ಎದುರಾಗುವ ಗೊಂದಲ ಮತ್ತು ಆತಂಕಗಳ ಬಗೆಗೆ ಚರ್ಚಿಸುವ ಈ ಸುವರ್ಣಾವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬಹುದು.

ಪರೀಕ್ಷಾ ಪೇ ಚರ್ಚಾ 2022ರ ಥೀಮ್ ಗಳು ಹೀಗಿವೆ :

ಕೋವಿಡ್-19 ಸಮಯದಲ್ಲಿ ಪರೀಕ್ಷಾ ಒತ್ತಡ ನಿರ್ವಹಣೆ ತಂತ್ರಗಳು, ಆಜಾದಿ ಕಾ ಅಮೃತ್ ಮಹೋಸ್ತವ್, ಸ್ವಾವಲಂಬಿ ಭಾರತಕ್ಕಾಗಿ ಸ್ವಾವಲಂಬಿ ಶಾಲೆ, ಸ್ವಚ್ಛ ಭಾರತ, ಹಸಿರು ಭಾರತ, ತರಗತಿಗಳಲ್ಲಿ ಡಿಜಿಟಲ್ ಸಹಯೋಗ, ಮತ್ತು ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ಸ್ಥಿತಿಸ್ಥಾಪಕತ್ವ.

ಪರೀಕ್ಷಾ ಪೇ ಚರ್ಚಾ 2022 ರಿಜಿಸ್ಟರ್ ಮಾಡುವುದು ಹೇಗೆ :

ಸ್ಟೆಪ್ 1 : ವಿದ್ಯಾರ್ಥಿಯು ಅಧಿಕೃತ ವೆಬ್‌ಸೈಟ್‌ https://www.mygov.in/ ಗೆ ಭೇಟಿ ನೀಡಿ

ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಪರೀಕ್ಷಾ ಪೇ ಚರ್ಚಾ 2022 ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ಅಭ್ಯರ್ಥಿಗಳು 'Participate Now' ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4: ಅಲ್ಲಿ ಕೇಳಲಾಗಿರುವ ವಿಷಯಗಳ ಕುರಿತು ನಿಮ್ಮ ಪ್ರತಿಕ್ರಿಯೆಯನ್ನು ನೀಡಿ

ಸ್ಟೆಪ್ 5: ನಂತರ ವಿದ್ಯಾರ್ಥಿಗಳು ಏನಾದರು ಪ್ರಶ್ನೆಗಳನ್ನು ಕೇಳುವುದಿದ್ದಲ್ಲಿ 500 ಪದಗಳಿಗೆ ಮೀರದಂತೆ ಬರೆದು ಸಬ್‌ಮಿಟ್ ಮಾಡುವ ಮೂಲಕ ಜನವರಿ 27,2022ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
Pariksha pe charcha 2022 : Registration date extended to january 27, Candidates can apply now.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X