ಕಲಾಂಸ್ಯಾಟ್ ನಿರ್ಮಿಸಿದ ಭಾರತೀಯ ರಿಫತ್ ಸಾಧನೆಗೆ ತಲೆಬಾಗಿದ ನಾಸಾ

Posted By:

ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತೀಯರ ಸಾಧನೆ ಜಗತ್ತನ್ನೇ ಬೆರಗುಗೊಳಿಸುವಂತದ್ದು, ಈಗ ಮತ್ತೊಂದು ಸಾಧನೆ ಮೂಲಕ ಭಾರತೀಯರು ವಿಶ್ವದಾಖಲೆ ಬರೆಯುವುದರ ಜೊತೆಗೆ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಜಗತ್ತಿನ ಅತ್ಯಂತ ಚಿಕ್ಕ ಉಪಗ್ರಹ 'ಕಲಾಂಸ್ಯಾಟ್' ನಿರ್ಮಿಸಿ ವಿಶ್ವದಾಖಲೆ ಮಾಡಿದ ಸಾಧನೆ ಈಗ ಭಾರತೀಯರ ಹೆಸರಿನಲ್ಲಿದೆ. ಅಷ್ಟಕ್ಕೂ ಈ ಪುಟ್ಟ ಉಪಗ್ರಹವನ್ನು ನಿರ್ಮಿಸಿರುವುದು ಯಾವುದೇ ದೊಡ್ಡ ವಿಜ್ಞಾನಿಗಳಲ್ಲ, ಕೇವಲ ಹದಿನೆಂಟು ವರ್ಷದ ಪೋರ ರಿಫತ್ ಶಾರೂಖ್.

ಸಾಮಾನ್ಯವಾಗಿ ಉಪಗ್ರಹವೆಂದರೆ ನಮ್ಮ ಕಣ್ಣ ಮುಂದೆ ದೊಡ್ಡ ಚಿತ್ರಣವೇ ಬಂದು ಹೋಗುತ್ತದೆ. ಅಲ್ಲದೇ ಆ ಉಪಗ್ರಹಗಳು ಒಂದೂವರೆ ಸಾವಿರ ಕೆ.ಜಿ ಯಿಂದ ಮೂರುವರೆ ಸಾವಿರ ಕೆ.ಜಿ ಭಾರವಿರುತ್ತದೆ. ಆದರೆ ರಿಫತ್ ಶಾರೂಖ್ ನಿರ್ಮಸಿರುವ ಈ ಉಪಗ್ರಹದ ತೂಕ ಕೇವಲ 64 ಗ್ರಾಂ.

ಕಲಾಂಸ್ಯಾಟ್ ಮೂಲಕ ದಾಖಲೆ ಬರೆದ ರಿಫತ್

ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಹೆಸರಲ್ಲಿ ನಿರ್ಮಿಸಲಾಗಿರುವ ಕೇವಲ 64 ಗ್ರಾಂ ತೂಕದ ಉಪಗ್ರಹವು ನಾಸಾ ಸಂಸ್ಥೆಯ ರಾಕೆಟ್‌ ಮೂಲಕ ಯಶಸ್ವಿಯಾಗಿ ಕಕ್ಷೆ ಸೇರಿದೆ.

ಕಲಾಂಸ್ಯಾಟ್‌ ಮಿಷನ್‌ ಒಟ್ಟು ಅವಧಿ 240 ನಿಮಿಷಗಳಾಗಿದ್ದು, ಉಪಗ್ರಹವು ಅತಿ ಕಡಿಮೆ ಗುರುತ್ವ ವಾತಾವರಣದ ಉಪ-ಕಕ್ಷೆಯಲ್ಲಿ 12 ನಿಮಿಷಗಳ ವರೆಗೂ ಕಾರ್ಯನಿರ್ವಹಿಸಲಿದೆ. ಕಾರ್ಬನ್‌ ಫೈಬರ್‌ 3ಡಿ ಪ್ರಿಂಟ್‌ ಮೂಲಕ ರೂಪಿಸಲಾಗಿರುವ ಉಪಗ್ರಹದ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಪರೀಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಪಲ್ಲಪಟ್ಟಿಯ ರಿಫತ್‌ ವಿವರಿಸಿದ್ದಾರೆ.

ರಿಫತ್ ಪರಿಚಯ

ರಿಫತ್ ಶಾರೂಖ್ ತಮಿಳುನಾಡಿನ ಪಲ್ಲಪಟ್ಟಿ ನಿವಾಸಿ, 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಿಫತ್ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆಯೋಜಿಸಿದ್ದ ಸ್ಪರ್ಧೆಯೊಂದಕ್ಕಾಗಿ ಈ ಸ್ಯಾಟಲೈಟ್ ತಯಾರಿಸಿದ್ದ. ರಿಫತ್‌ ಸಾಧನೆಗೆ ಆತನ ಆರು ಸಹಪಾಠಿಗಳು ಕೈ ಜೋಡಿಸಿದ್ದರು.

ನಾಸಾ ಮತ್ತು ಐ ಡೂಡಲ್‌ ಲರ್ನಿಂಗ್‌ ಸಂಸ್ಥೆಗಳ 'ಕ್ಯೂಬ್ಸ್‌ ಇನ್‌ ಸ್ಪೇಸ್‌' ಸ್ಪರ್ಧೆಯ ಮೂಲಕ ರಿಫತ್‌ ಅವರ 64 ಗ್ರಾಂ ಉಪಗ್ರಹ ಆಯ್ಕೆಯಾಗಿತ್ತು.

English summary
Rifath sharook sets global space record when his invention, named KalamSat,which entered space after launched by a NASA

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia