ಎಎಲ್ ಪಿ ಮತ್ತು ಟೆಕ್ನಿಶನ್ ಹುದ್ದೆಯ ಪರೀಕ್ಷೆ ದಿನಾಂಕ ಇದೀಗ ಮುಂದೂಡಲಾಗಿದ್ದು, ಪರೀಕ್ಷೆ ದಿನಾಂಕವನ್ನ ಡಿಸಂಬರ್ 24, 2018 ರಂದು ಮರು ನಿಗಧಿಗೊಳಿಸಲಾಗಿದೆ. ಈ ಮೊದಲು ಡಿಸಂಬರ್ 12, 2018 ರಂದು ಪರೀಕ್ಷೆಯನ್ನ ನಿಗಧಿಗೊಳಿಸಲಾಗಿತ್ತು.

ಆರ್ಆರ್ ಬಿ ಎಎಲ್ ಪಿ ಮತ್ತು ಟೆಕ್ನಿಶನ್ ಪರೀಕ್ಷೆಯ ಎರಡನೇ ಸ್ಟೇಜ್ ಕಂಪ್ಯೂಟರ್ ಬೇಸ್ಡ್ ಪರೀಕ್ಷೆಯು ಡಿಸಂಬರ್ 24, 2018 ರಂದು ನಡೆಯಲಿದೆ. ಹಾಗೂ ಅಡ್ಮಿಟ್ ಕಾರ್ಡ್ ರಿಲೀಸ್ ದಿನಾಂಕವೂ ಬದಲಾಗಲಿದೆ ಎಂದು ಆಫೀಶಿಯಲ್ ಪ್ರಕಟಣೆಯಲ್ಲಿ ತಿಳಿದುಬಂದಿದೆ. ಈ ಮೊದಲು ಡಿಸಂಬರ್ 2, 2018 ರಂದು ಅಡ್ಮಿಟ್ ಕಾರ್ಡ್ ರಿಲೀಸ್ ಆಗಲಿದೆ ಎಂದು ತಿಳಿಸಲಾಗಿತ್ತು.
ಸಿಬಿಟಿ ಹಾಗೂ ಸಿಇಎನ್ ಅಥವಾ ಅಕಾಡೆಮಿಕ್ ಪರೀಕ್ಷೆಗಳು ಕ್ಲ್ಯಾಶ್ ಆಗುವ ಸಂಭವವಿರುವುದರಿಂದ ಹಾಗೂ ಈ ಬಗ್ಗೆ ಹಲವಾರು ಪತ್ರಗಳು ಬಂದಿದ್ದರಿಂದ ಆರ್ಆರ್ ಬಿ ಎಎಲ್ ಪಿ ಮತ್ತು ಟೆಕ್ನಿಶನ್ ಪರೀಕ್ಷೆಯ ಎರಡನೇ ಸ್ಟೇಜ್ ಕಂಪ್ಯೂಟರ್ ಬೇಸ್ಡ್ ಪರೀಕ್ಷೆಯನ್ನ ಮುಂದೂಡುವ ನಿರ್ಧಾರವನ್ನ ಬೋರ್ಡ್ ಕೈಗೊಂಡಿದೆ. ಇದೀಗ ಪರೀಕ್ಷೆಯನ್ನ ಮುಂದೂಡಿದುದರ ಕುರಿತು ಬೋರ್ಡ್ ಆಫೀಶಿಯಲ್ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಕೂಡಾ ಹೊರಡಿಸಿದೆ.
ಪರೀಕ್ಷೆಗೆ 4 ದಿನಗಳು ಬಾಕಿ ಇದ್ದಾಗ ಈ-ಕಾಲ್ ಲೆಟರ್ ಪ್ರಕಟಸಿಲಾಗುವುದು. ಹಾಗೂ ಈ ಕುರಿತು ಅಭ್ಯರ್ಥಿಗಳಿಗೆ ಎಸ್ಎಂಎಸ್ ಮೂಲಕ ಸಂದೇಶ ಕೂಡಾ ರವಾನಿಸಲಾಗುವುದು. ಸಂದೇಶ ಬಂದ ಕೂಡಲೇ ಅಭ್ಯರ್ಥಿಗಳು ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ ಇ-ಕಾಲ್ ಲೆಟರ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
64,371 ಅಸಿಸ್ಟೆಂಟ್ ಲೋಕೋ ಪೈಲಟ್ಸ್ ಮತ್ತು ಟೆಕ್ನಿಶನ್ಸ್ ಹುದ್ದೆಗಳನ್ನ ಭರ್ತಿ ಮಾಡುವ ಉದ್ದೇಶದಿಂದ ಈ ಪರೀಕ್ಷೆ ಆಯೋಜಿಸಲಾಗಿದ್ದು, ಈಗಾಗಲೇ ಆಗಸ್ಟ್ 9,2018 ರಿಂದ ಸೆಪ್ಟಂಬರ್ 4,2018 ರವರೆಗೆ ಫಸ್ಟ್ ಸ್ಟೇಜ್ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಸುಮಾರು 36 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.


Click it and Unblock the Notifications











