ಆ‍ರ್‍ಆರ್‍ ಬಿ ನೇಮಕಾತಿ 2019: ಜ್ಯೂನಿಯರ್ ಇಂಜಿನಿಯರ್ ಮತ್ತು ಮೆಟೀರಿಯಲ್ ಸೂಪರಿಂಟೆಂಡೆಂಟ್ ಹುದ್ದೆಗಳು

By Kavya L

ರೈಲ್ವೆ ಸಚಿವಾಲಯವು ರೈಲ್ವೆ ನೇಮಕಾತಿ ಮಂಡಳಿಗಳ ಮೂಲಕ 14,033 ಖಾಲಿ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ. ರೈಲ್ವೆ ವಲಯದ ವಿವಿಧ ವಿಭಾಗಗಳು ಮತ್ತು ಉತ್ಪಾದನಾ ಘಟಕಗಳಿಗೆ ಅಭ್ಯರ್ಥಿಗಳ ನೇಮಕಾತಿಗೆ ಮುಂದಾಗಿದೆ. ಭಾರತೀಯ ಜನಾಂಗದ ಆಸಕ್ತ ಅಭ್ಯರ್ಥಿಗಳು ಜ್ಯೂನಿಯರ್ ಇಂಜಿನಿಯರ್ಸ್, ಡಿಪೋಟ್ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಜನವರಿ 31,2019 ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಜನವರಿ 1,2019ಕ್ಕೆ 18 ರಿಂದ 33 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆರ್ ಆರ್ ಬಿ ಅಧಿಕೃತ ವೆಬ್‍ಸೈಟ್‍ನಲ್ಲಿ ಸಿಇಎನ್ ನಲ್ಲಿ ವಿವಿರಿಸಿರುವಂತೆ ವಿವಿಧ ವರ್ಗಗಳಿಗೆ ವಿನಾಯಿತಿಯನ್ನು ನೀಡಿರುತ್ತದೆ.

ಆ‍ರ್‍ಆರ್‍ ಬಿ ನೇಮಕಾತಿ 2019: ಜ್ಯೂನಿಯರ್ ಇಂಜಿನಿಯರ್ ಮತ್ತು ಮೆಟೀರಿಯಲ್ ಸೂಪರಿಂಟೆಂಡೆಂಟ್ ಹುದ್ದೆಗಳು

 

CRITERIA DETAILS
Name Of The Posts ಜ್ಯೂನಿಯರ್ ಇಂಜಿನಿಯರ್, ಜ್ಯೂನಿಯರ್ ಇಂಜಿನಿಯರ್ (IT), ಡಿಪೋಟ್ ಮೆಟೀರಿಯಲ್ ಸೂಪರಿಂಟೆಂಡೆಂಟ್( DMS ), ಕೆಮಿಕಲ್ ಮತ್ತು ಮೆಟಲ್ಲರ್ಜಿಕಲ್ ಅಸಿಸ್ಟಾಂಟ್ (CMA)
Organisation ರೈಲ್ವೆ ನೇಮಕಾತಿ ಮಂಡಳಿ
Educational Qualification ಬಿಇ/ಬಿಟೆಕ್,ಡಿಪ್ಲೊಮಾ/ಪಿಜಿಡಿಸಿಎ/ಬಿಎಸ್ಸಿ
Skills Required ದೈಹಿಕ ಸಧೃಡ
Job Location ಭಾರತದೆಲ್ಲೆಡೆ
Salary Scale ತಿಂಗಳಿಗೆ 35,400ರೂ (6ನೇ ಹಂತದ ಪೇ ಮ್ಯಾಟ್ರಿಕ್ಸ್) + ಮತ್ತಿತರ ಭತ್ಯೆ
Industry ರೈಲ್ವೆ
Application Start Date January 2, 2019
Application End Date January 31, 2019

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಶುಲ್ಕ

ಅಭ್ಯರ್ಥಿಗಳು ಆರ್ ಆರ್ ‍ಬಿಯ ಅಧಿಕೃತ ವೆಬ್‍ಸೈಟ್‍ನಲ್ಲಿ ತಿಳಿಸಿರುವಂತೆ ಜನವರಿ2,2019 ರಿಂದ ಜನವರಿ 31,2019ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸಾಮಾನ್ಯ ಗುಂಪಿನವರಿಗೆ 500ರೂ ಇದ್ದು,ಮಹಿಳೆ,ಎಸ್‍ಸಿ/ಎಸ್‍ಟಿ,ಓಬಿಸಿ,ಪಿಡಬ್ಲೂಡಿ ಮತ್ತು ಮಾಜಿ ಸೈನಿಕರಿಗೆ ಶುಲ್ಕ 250ರೂ ಇರುತ್ತದೆ. ಶುಲ್ಕವನ್ನು ಬ್ಯಾಂಕ್(ಎಸ್‍ಬಿಐ ಚಲನ್/ಪೋಸ್ಟ್ ಆಫಿಸ್ ಚಲನ್) ಅಥವಾ ಆನ್‍ಲೈನ್(ನೆಟ್ ಬ್ಯಾಂಕಿಂಗ್/ ಕ್ರೆಡಿಟ್/ಡೆಬಿಟ್/ಯುಪಿಐ) ಮೂಲಕ ಪಾವತಿಸಬಹುದು.

ಖಾಲಿ ಇರುವ 13,044 ಜ್ಯೂನಿಯರ್ ಹುದ್ದೆಗಳಲ್ಲಿ DMS (456) ಮತ್ತು CMA(494) ಸ್ಥಾನಗಳು ಮತ್ತು ಉಳಿದ ಸ್ಥಾನಗಳು JE ಐಟಿ ವಿಭಾಗ ಜ್ಯೂನಿಯರ್ ಇಂಜಿನಿಯರ್ ಪೋಸ್ಟ್‍ಗಳ ನೇಮಕಾತಿಯನ್ನು ಮಾಡಲಾಗುತ್ತದೆ

ಖಾಲಿ ಹುದ್ದೆಗಳ ವಿವರ:

Post Name

No. Of Vacancies

Junior Engineer

13,034
Junior Engineer (Information Technology)

 

49
Depot Material Superintend (DMS)456

Chemical and Metallurgical Assistant (CMA)494
Total

14,033

ವಿದ್ಯಾರ್ಹತೆ:

  • ಜ್ಯೂನಿಯರ್ ಇಂಜಿನಿಯರ್: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆರ್‍ಆರ್‍ಬಿಯ ಅಧಿಕೃತ ವೆಬ್‍ಸೈಟ್‍ನ ಸಿಇಎನ್ ನಲ್ಲಿ ಪ್ರಕಟಿಸಿರುವಂತೆ ಇಂಜಿನಿಯರಿಂಗ್‍ನಲ್ಲಿ ಪದವಿ/ಡಿಪ್ಲೊಮ ಶಿಕ್ಷಣವನ್ನು ಪಡೆದಿರಬೇಕು.
  • ಜ್ಯೂನಿಯರ್ ಇಂಜಿನಿಯರ್(ಐಟಿ)-ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳುವ ಕಂಪ್ಯೂಟರ್ ಸೈನ್ಸ್‍ನಲ್ಲಿ ಪಿಜಿಡಿಸಿಎ/ಬಿಎಸ್ಸಿ ಪದವಿ ಅಥವಾ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಬಿಸಿಎ/ಬಿಟೆಕ್ ಅಥವಾ ಕಂಪ್ಯೂಟರ್ ಸೈನ್ಸ್‍ನಲ್ಲಿ ಬಿಟೆಕ್ ಪದವಿಯನ್ನು ಪಡೆದಿರಬೇಕು.
  • ಡೆಪೂಟ್ ಮೆಟೀರಿಯಲ್ ಸೂಪರಿಂಟೆಂಡೆಂಟ್- ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಂಜಿನಿಯಂಗ್‍ನಲ್ಲಿ ಪದವಿ/ಡಿಪ್ಲೊಮ ಶಿಕ್ಷಣವನ್ನು ಹೊಂದಿರಬೇಕು.
  • ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸ್ಟಿಟೆಂಟ್- ಈ ಹುದ್ದೆಗೆ ಅರ್ಜಿಸಲ್ಲಿಸಲು ವಿಜ್ಞಾನ (ಫಿಸಿಕ್ಸ್ ಮತ್ತು ಕೆಮಿಸ್ಟ್ರಿ)ದಲ್ಲಿ ಶೇ45%ರಷ್ಟು ಅಂಕಗಳೊಂದಿಗೆ ಪದವಿಯನ್ನು ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ ಮತ್ತು ಸಂಬಳದ ವಿವರ:

ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲನೆಯದಾಗಿ ನೇರ ಸಂದರ್ಶನ ಮತ್ತು ವೈದ್ಯಕೀಯ ಪರಿಶೀಲನೆ ಮೂಲಕ ಮಾಡಲಾಗುತ್ತದೆ. ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಭಾರತೀಯ ರೈಲ್ವೆಯ ವಿವಿಧ ವಲಯಗಳು (ಅಹಮದಾಬಾದ್, ಅಜ್ಮಿರ್, ಅಲ್ಲಹಾಬಾದ್,ಬೆಂಗಳೂರು, ಭೋಪಾಲ್, ಬುಭನೇಶ್ವರ್, ಬಿಲಾಸ್‍ಪುರ್, ಚಂಧಿಗರ್,ಚೆನ್ನೈ,ಕೊಲ್ಕತ್ತ,ಮುಂಬೈ,ಪಾಟ್ನಾ,ರಾಂಚಿ ತಿರುವನಂತಪುರಂ ಮತ್ತು ಮತ್ತು ಇನ್ನಿತರ ವಲಯಗಳು) ಕೆಲಸ ನಿರ್ವಹಿಸಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 6ನೆ ಹಂತದ ಪೇ ಮ್ಯಾಟ್ರಿಕ್ಸ್ ಅನುಸಾರ ತಿಂಗಳಿಗೆ 35,400ರೂ ಸಂಬಳ ಮತ್ತು ಇನ್ನಿತರ ಭತ್ಯೆಗಳನ್ನು ನೀಡಲಾಗುತ್ತದೆ.

ಆರ್ ಆರ್ ಬಿ 14,033 ಹುದ್ದೆಗಳ ನೇಮಕಾತಿಯ ಬಗೆಗೆ ಅಭ್ಯರ್ಥಿಗಳು ಮತ್ತಷ್ಟು ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Candidates seeking application for various posts must have turned 18 years as on 01 January 2019, and not exceeded 33 years, with an exception granted to various categories as detailed in the CEN published on the official regional RRBs website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more