ರೈತ ಆತ್ಮಹತ್ಯೆ ಕುಟುಂಬದ ಮಕ್ಕಳಿಗೆ ಆರ್ ಟಿ ಇ 2ನೇ ಹಂತದ ಪ್ರಕ್ರಿಯೆಯಲ್ಲಿ ಆದ್ಯತೆ

ಪ್ರಸಕ್ತ ವರ್ಷದಿಂದ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ) ಅಡಿ ವಿಶೇಷ ಸೌಲಭ್ಯ ನೀಡಲಾಗಿದ್ದು, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು, ವಿಶೇಷ ಆಗತ್ಯಯುಳ್ಳ ಮಕ್ಕಳು, ಬೀದಿ ಮಕ್ಕಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ

ಪ್ರಸಕ್ತ ವರ್ಷದಿಂದ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ) ಅಡಿ ವಿಶೇಷ ಸೌಲಭ್ಯ ನೀಡಲಾಗಿದ್ದು, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು, ವಿಶೇಷ ಆಗತ್ಯಯುಳ್ಳ ಮಕ್ಕಳು, ಬೀದಿ ಮಕ್ಕಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಆದರೆ ಇವರಿಗೆ ಎರಡನೇ ಹಂತದ ಪ್ರಕ್ರಿಯೆಯಲ್ಲಿ ಆದ್ಯತೆ ನೀಡಲಾಗಿದೆ.

ಮಾರ್ಚ್ 1 ರಿಂದ ಅರ್ಜಿ ಸಲ್ಲಿಕೆ ಆರಂಭ
ತಾಂತ್ರಿಕ ಕಾರಣದಿಂದ ಒಂದೂವರೆ ತಿಂಗಳು ವಿಳಂಬವಾಗಿದ್ದ ಶಿಕ್ಷಣ ಹಕ್ಕು ಕಾಯ್ದೆಯ ನೈಜ ಪ್ರಕ್ರಿಯೆ ಮಾರ್ಚ್ 01 , 2017 ರಿಂದ ಆರಂಭವಾಗಲಿದೆ. ಈಗಾಗಲೇ ಪ್ರಾಯೋಗಿಕ ಹಂತದಲ್ಲಿ ಅರ್ಜಿ ಸಲ್ಲಿಸಿರುವವರು ಮತ್ತೆ ಸಲ್ಲಿಸಬೇಕಾಗಿಲ್ಲ, ಅವಶ್ಯವಿದ್ದರೆ ತಿದ್ದುಪಡಿ ಮಾಡಬಹುದು.

ಈ ವರ್ಷ ಸುಮಾರು 1 .30 ಲಕ್ಷ ಲಭ್ಯವಿದ್ದು , ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಪ್ರಾಯೋಗಿಕ ಹಂತದಲ್ಲಿ 1440 ಅರ್ಜಿ ಸಲ್ಲಿಕೆಯಾಗಿದ್ದು ಇವರು ಮತ್ತೆ ಅರ್ಜಿ ಸಲ್ಲಿಸುವ ಅವಶಕತೆ ಇಲ್ಲ. ಅರ್ಜಿ ಸಲ್ಲಿಸುವ ವೇಳೆ ತಪ್ಪಾಗಿದ್ದಲ್ಲಿ ಅದನ್ನು ತಿದ್ದಿಕೊಳ್ಳುವ ಅವಕಾಶ ನೀಡಲಾಗಿದೆ.
ಆಧಾರ್ ಸಂಖ್ಯೆ ಮತ್ತು ಪಿನ್ಕೋಡ್ ಮುಖ್ಯವಾಗಿದ್ದು ಆಧಾರ್ ಕಾರ್ಡ್ ಇಲ್ಲವಾದಲ್ಲಿ ಆಧಾರ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಸಂಖ್ಯೆ ಪಡೆದು ಸಲ್ಲಿಸಬಹುದು. ವಿಳಾಸ ಬದಲಾಗಿದ್ದರು ಅರ್ಜಿ ನೀಡಬಹುದಾಗಿದೆ.

ದಾಖಲೆಗಳ ಪರಿಶೀಲನೆ

ಪಾಲಕರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಶಾಲೆ ಇರುವ ಬಡಾವಣೆ ಮತ್ತು ವಾಸದ ಬಡಾವಣೆ ಪರೀಕ್ಷಿಸಿಕೊಳ್ಳಬೇಕು. ಕಂದಾಯ ಇಲಾಖೆ, ಆಧಾರ್ ನಂಬರ್ ಸೇರಿ ದಾಖಲೆಗಳು ಅಸಲಿಯಾಗಿದ್ದರೂ ಒಮ್ಮೊಮ್ಮೆ ಕನ್ನಡ ಮತ್ತು ಇಂಗ್ಲಿಷ್ ಅಕ್ಷರಗಳಲ್ಲಿನ ಇನಿಷಿಯಲ್ ಹೊಂದಾಣಿಕೆಯಾಗದೆ ತಿರಸ್ಕಾರವಾಗುವ ಸಾಧ್ಯತೆಗಳಿರುತ್ತವೆ. ಹೀಗಾದಲ್ಲಿ ಆನ್ಲೈನ್ ಮೂಲಕ ದೂರು ಸಲ್ಲಿಸಿದರೆ 48 ಗಂಟೆಗಳ ಒಳಗೆ ಸರಿಪಡಿಸಲಾಗುವುದು. ಇದರ ಜೊತೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ವಾರ್ಡ್ಗಳಲ್ಲಿನ ಬಡಾವಣೆಗಳು ಆಧಾರ್ ನಿಂದ ಕೈಬಿಟ್ಟಿದ್ದರೆ ಅಂಥವುಗಳ ಮಾಹಿತಿಯನ್ನು ಶಿಕ್ಷಣ ಇಲಾಖೆಗೆ ಸೇರಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ.ಪಿ.ಸಿ.ಜಾಫರ್ ತಿಳಿಸಿದ್ದಾರೆ.

ತಾಂತ್ರಿಕ ದೋಷ

ಪ್ರಾಯೋಗಿಕ ಅರ್ಜಿ ಸಲ್ಲಿಕೆಯ ಪ್ರಾತ್ಯಕ್ಷಿಕೆ ತೋರಿಸುವಾಗ ಮೊದಲೆರೆಡು ಬಾರಿ ಅರ್ಜಿ ಸಲ್ಲಿಕೆ ಸಾಧ್ಯವಾಗಿರಲಿಲ್ಲ, submit ಬಟನ್ ಕ್ಲಿಕ್ ಮಡಿದ ಸಂದರ್ಭದಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅರ್ಜಿ ಸಲ್ಲಿಕೆ ಯಶಸ್ವಿಯಾಯಿತು ಎಂದು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ.ಪಿ.ಸಿ.ಜಾಫರ್ ಸ್ಪಷ್ಟನೆ ನೀಡಿದ್ದಾರೆ.

ಅರ್ಜಿ ಸಲ್ಲಿಸುವಿಕೆ

ಪಾಲಕರು ತಮ್ಮ ಕಂಪ್ಯೂಟರ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಬಿಇಒ, ಡಿಡಿಪಿಐ ಕಚೇರಿಗಳಲ್ಲಿ ಉಚಿತವಾಗಿ ಆರ್ ಟಿಇ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಅಟಲ್ ಜೀ ಕೇಂದ್ರಗಳಲ್ಲಿ ೧೫ ರೂ. ಪಾವತಿಸಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು http://www.schooleducation.kar.nic.in/indexKn.html ಭೇಟಿ ನೀಡಿ.

For Quick Alerts
ALLOW NOTIFICATIONS  
For Daily Alerts

English summary
Children of farmers who have committed suicide will be given preference during RTE quota admissions in private unaided schools
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X