ಆರ್ ಟಿ ಇ ಹೊಸ ನೀತಿ: ಫೇಲ್ ಆದವರು ಮುಂದಕ್ಕೆ ಹೋಗುವಂತಿಲ್ಲ

2010 ರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಂತೆ ಐದನೇ ಮತ್ತು ಎಂಟನೇ ತರಗತಿಯ ಯಾವ ಮಕ್ಕಳನ್ನು ಅನುತ್ತೀರ್ಣಗೊಳಿಸಲು ಅವಕಾಶವಿಲ್ಲ. ಶಾಲೆಗೆ ಸೇರಿದ ಪ್ರತಿ ಮಗುವು ಮುಂದಿನ ತರಗತಿಗೆ ಬಡ್ತಿ ಹೊಂದುತ್ತ ಹೋಗಬೇಕಿತ್ತು.

ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹೋಗಲು ಕಡ್ಡಾಯವಾಗಿ ಪಾಸ್ ಆಗಲೇಬೇಕು ಎಂಬ ನೂತನ ನಿಯಮಕ್ಕೆ ಕೇಂದ್ರ ಸಂಪುಟ ಸಮ್ಮತಿ ನೀಡಿದೆ.

ಶಿಕ್ಷಣದಲ್ಲಿ ಗುಣಮಟ್ಟ ಸಾಧಿಸುವ ಉದ್ದೇಶದಿಂದ ಆರ್ ಟಿ ಇ ನೀತಿಯಲ್ಲಿ ಬದಲಾವಣೆ ತರಲಾಗಿದ್ದು, ಇನ್ನು ಮುಂದೆ ಶಾಲೆಗಳಲ್ಲಿ ಅನುತ್ತೀರ್ಣರಾದರೆ ಮುಂದಿನ ತರಗತಿಗೆ ಪ್ರವೇಶ ಹೊಂದುವ ಹಾಗಿಲ್ಲ.

2010 ರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಂತೆ ಐದನೇ ಮತ್ತು ಎಂಟನೇ ತರಗತಿಯ ಯಾವ ಮಕ್ಕಳನ್ನು ಅನುತ್ತೀರ್ಣಗೊಳಿಸಲು ಅವಕಾಶವಿಲ್ಲ. ಶಾಲೆಗೆ ಸೇರಿದ ಪ್ರತಿ ಮಗುವು ಮುಂದಿನ ತರಗತಿಗೆ ಬಡ್ತಿ ಹೊಂದುತ್ತ ಹೋಗಬೇಕಿತ್ತು.

ಫೇಲ್ ಆದವರು ಮುಂದಕ್ಕೆ ಹೋಗುವಂತಿಲ್ಲ

ಹೊಸ ಆರ್ ಟಿ ಇ ನೀತಿಯಂತೆ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನ ಮರು ಪರೀಕ್ಷೆ ನಡೆಸಲಾಗುತ್ತದೆ. ಆ ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಮುಂದಿನ ತರಗತಿಗೆ ಹೋಗಬಹುದು. ಆದರೆ ಮರು ಪರೀಕ್ಷೆಯಲ್ಲೂ ಪಾಸ್ ಆಗದ ವಿದ್ಯಾರ್ಥಿಗಳನ್ನು ಅದೇ ತರಗತಿಯಲ್ಲಿ ಉಳಿಸಲಾಗುವುದು.

ಆರ್ ಟಿ ಇ ಹೊಸ ನಿಯಮಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಳೆ ನಿಯಮದಿಂದಾಗಿ ಮಕ್ಕಳು ಕಲಿಯದಿದ್ದರೂ ತೇರ್ಗಡೆಯಾಗುತ್ತಿದ್ದರು. ಇದರಿಂದಾಗಿ ಮುಂದಿನ ಶಿಕ್ಷಣಕ್ಕೆ ಸಾಕಷ್ಟು ತೊಂದರೆಯಾಗುತ್ತಿತ್ತು. ಆದರೆ ಈ ನಿಯಮ ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ ಎಂದ ಶಿಕ್ಷಕರೊಬ್ಬರ ಮಾತು.

ಆರ್ ಟಿ ಇ

ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಭಾರತದ ಸಂಸತ್ತಿನಿಂದ ಮಾಡಲ್ಪಟ್ಟಿರುವ ಕಾನೂನು. ಈ ಕಾಯ್ದೆಯಡಿ ಭಾರತದಲ್ಲಿ 6 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ದೊರಕುವಂತೆ ಹಕ್ಕನ್ನು ನೀಡಲಾಗಿದೆ. ಈ ಕಾಯ್ದೆಯನ್ನು ಭಾರತ ಸಂವಿಧಾನದ 21A ಕಲಮಿನಡಿ ಜಾರಿಗೊಳಿಸಲಾಗಿದೆ.

ಏಪ್ರಿಲ್ 1, 2010 ರಂದು ಈ ಕಾಯ್ದೆಯು ಜಾರಿಗೆ ಬಂದ ನಂತರ, ಮಕ್ಕಳಿಗೆ ಶಿಕ್ಷಣ ನೀಡುವ ಮೂಲಭೂತ ಹಕ್ಕನು ನೀಡಿದ 135 ದೇಶಗಳಲ್ಲಿ ಭಾರತವೂ ಒಂದಾಯಿತು.

ಸಂಪುಟವು ಈ ಮಸೂದೆಯನ್ನು ಜುಲೈ 2, 2009 ರಂದು ಅನುಮೋದಿಸಿತು. ನಂತರ 20 ಜುಲೈ 2009 ರಂದು ರಾಜ್ಯಸಭೆ ಮತ್ತು 4 ಆಗಸ್ಟ್ 2009 ರಂದು ಲೋಕಸಭೆಯಿಂದ ಅಂಗೀಕರಿಸಲಾಯಿತು. ರಾಷ್ಟ್ರಪತಿಯ ಸಮ್ಮತಿಯ ನಂತರ ಸೆಪ್ಟೆಂಬರ್ 3, 2009 ರಂದು ಇದನ್ನು ಕಾನೂನು ಎಂದು ಘೋಷಿಸಿ ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಎಂದು ಹೆಸರಿಸಲಾಯಿತು.

For Quick Alerts
ALLOW NOTIFICATIONS  
For Daily Alerts

English summary
schools to keep back students in classes V and VIII from the 2018-2019 academic session. Students who fail in the annual examination will be allowed to appear for a re-test and will be detained if they fail to clear that as well.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X