ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) 2019ಸೀಟು ಪಡೆಯಲು ಆನ್‌ಲೈನ್ ಅರ್ಜಿ ಸಲ್ಲಿಸಿ

2019-20 ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸೀಟುಗಳ ಉಚಿತ ಪ್ರವೇಶದ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಲಾಗಿದೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿಯಲ್ಲಿ ಶೇ.25% ರಷ್ಟು ಸೀಟುಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಆರ್‌ಟಿಇ ಆನ್‌ಲೈನ್‌ ಅರ್ಜಿ ಆಹ್ವಾನ


ಅರ್ಜಿ ಸಲ್ಲಿಸುವ ಕ್ರಮ ಹಾಗೂ ಪರಿಶೀಲನೆ:

ಶಿಕ್ಷಣ ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟಿಗಾಗಿ ಪ್ರವೇಶ ಕೋರುವ ಮಗು ಮತ್ತು ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಕಡ್ಡಾಯ. ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ ಸೀಟು ಬಯಸುವ ಪಾಲಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಉಚಿತವಾಗಿ ಅಥವಾ ಸರ್ಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು ನಗರದಲ್ಲಿ, ಬೆಂಗಳೂರು ಒನ್‌,ಇತರೆ ನಗರ ಪ್ರದೇಶಗಳಲ್ಲಿ ಕರ್ನಾಟಕ-ಒನ್‌,ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಶಾಲೆಗಳ ಆದ್ಯತೆ ನಮೂದಿಸಿ ಅರ್ಜಿಯನ್ನು ಸಲ್ಲಿಸಬಹದು. ತಂದೆ / ತಾಯಿ / ಪಾಲಕರ ಬಳಿ ಸ್ವಂತ ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್ ಸೌಲಭ್ಯ ಲಭ್ಯವಿದ್ದಲ್ಲಿ ಆನ್‌ಲೈನ್ ಮುಖಾಂತರ ನೇರವಾಗಿ ಅರ್ಜಿ ಸಲ್ಲಿಸಬಹುದು.

ಜಾತಿ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳಲ್ಲಿನ ಮಾಹಿತಿಯನ್ನು ಸರಿಯಾಗಿ ನಮೂದಿಸುವುದು.

2019-20 ನೇ ಸಾಲಿಗೆ ಒಂದನೇ ಅಥವಾ ಪೂರ್ವ ಪ್ರಾಥಮಿಕ ತರಗತಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ನಿಗದಿ ಪಡಿಸಿರುವ ಅರ್ಜಿ ನಮೂನೆ ,ಚೆಕ್‌ಲಿಸ್ಟ್ ಹಾಗೂ ಸಲ್ಲಿಸಬೇಕಾದ ದಾಖಲೆಗಳ ನಮೂನೆಯನ್ನು ಇಲಾಖೆಯ ವೆಬ್‌ಸೈಟ್ ನಲ್ಲಿ http://www.schooleducation.kar.nic.in/ ಪ್ರಕಟಿಸಲಾಗಿರುತ್ತದೆ.

ಪ್ರಮುಖ ದಿನಾಂಕಗಳು:

ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ 20-3-2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-4-2019

ಶಿಕ್ಷಣ ಇಲಾಖೆ ವೇಳಾಪಟ್ಟಿ:

03-03-2019:2019-20ನೇ ಸಾಲಿನ ಪ್ರವೇಶ ಪ್ರಕ್ರಿಯೆಯ ಬಗ್ಗೆ ಮಾರ್ಗಸೂಚಿ ಹೊರಡಿಸಿರುವುದು
20-3-2019 ರಿಂದ 15-4-2019: ಅನುದಾನಿತ ಶಾಲೆಗಳೂ ಸೇರಿದಂತೆ ದಾಖಲಾತಿ ಕೋರಿ ಪೋಷಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅವಧಿ
23-4-2019 ರಿಂದ 27-4-2019 ರವರೆಗೆ ಅರ್ಜಿಗಳ ಪರಿಶೀಲನೆ
02-05-2019 : ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ
01-05-2019: ಆನ್‌ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ
02-05-2019: ಶಾಲೆಗಳಲ್ಲಿ ದಾಖಲಾತಿ ಪ್ರಾರಂಭ
02-05-2019 ರಿಂದ 08-05-2019 ರವರೆಗೆ ಶಾಲೆಗಳಲ್ಲಿ ದಾಖಲಾತಿ ಪ್ರಾರಂಭ
02-05-2019 ರಿಂದ 08-05-2019ಮೊದಲ ಸುತ್ತಿನ ಮಕ್ಕಳ ವಿವರವನ್ನು ತಂತ್ರಾಶದಲ್ಲಿ ಅಪ್‌ಲೋಡ್ ಮಾಡಲಾಗುವುದು
25-05-2019: ಆನ್‌ಲೈನ್ ತಂತ್ರಾಂಶದ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ
25-05-2019 ರಿಂದ 30-05-2019: ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ಅವಧಿ
25-05-2019: ರಿಂದ 31-5-2019 : ಶಾಲೆಗಳಲ್ಲಿ ದಾಖಲಾದ ಎರಡನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಶದಲ್ಲಿ ಅಳವಡಿಸಲಾಗುವುದು

ಪೋಷಕರಿಗೆ ಎಸ್‌.ಎಂ.ಎಸ್‌ ಸಂದೇಶ:

ತಂತ್ರಾಂಶದ ಮೂಲಕ ನೈಜತೆ ತಾಳೆ ಆಗದ ಅಪೂರ್ಣ ಅಥವಾ ಕ್ರಮಬದ್ದವಲ್ಲದ ಅರ್ಜಿಗಳ ತಂದೆ/ ತಾಯಿ ಪೋಷಕರ ಮೊಬೈಲಿಗೆ ದೋಷಗಳನ್ನು ಸರಿಪಡಿಸಲು ಎಸ್‌.ಎಂ.ಎಸ್‌ ಕಳುಹಿಸಲಾಗುವುದು. ಸಂಬಂಧಿಸಿದ ಪೋಷಕರು ಸಕಾಲಕ್ಕೆ ಪ್ರತಿಕ್ರಿಯಿಸುವುದು.

ಆರ್‌ಟಿಇ 2019 ಅರ್ಜಿ ಹಾಕುವ ಪೋಷಕರು ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Karnataka Education Department released the notification for for admission of RTE 2019. Check out the application form, date, eligibility and pattern to apply
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X