ಆರ್ ಟಿ ಇ: ಬಡ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಲ್ಲಿ ಸೀಟು

ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್​ಟಿಇ) ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಶೇ.25 ಸೀಟು ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ದುಬಾರಿ ಶುಲ್ಕ ಮತ್ತು ಡೊನೇಷನ್ ಪಡೆಯುವ ಖಾಸಗಿ ಕಾಲೇಜುಗಳಿಗೆ ಕಡಿವಾಣ ಹಾಕಲು ಈ ತೀರ್ಮಾನ ಕೈಗೊಳ್ಳಲಾಗಿದೆ.

ಆರ್ ಟಿ ಇ ಈಗ ಖಾಸಗಿ ಪದವಿ ಕಾಲೇಜುಗಳಿಗೂ ಅನ್ವಯವಾಗಲಿದೆ. ಈ ಮೂಲಕ ಬಡ ವಿದ್ಯಾರ್ಥಿಗಳು ಕೂಡ ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಬಹುದಾಗಿದೆ.

ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್​ಟಿಇ) ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಶೇ.25 ಸೀಟು ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ದುಬಾರಿ ಶುಲ್ಕ ಮತ್ತು ಡೊನೇಷನ್ ಪಡೆಯುವ ಖಾಸಗಿ ಕಾಲೇಜುಗಳಿಗೆ ಕಡಿವಾಣ ಹಾಕಲು ಈ ರೀತಿಯ ತೀರ್ಮಾನ ಕೈಗೊಳ್ಳಲಾಗಿದೆ.

ಕೇವಲ ಹಣವಂತರ ಮಕ್ಕಳಿಗಷ್ಟೇ ಸೀಮಿತವಾಗಿದ್ದ ಹೆಸರಾಂತ ಖಾಸಗಿ ಕಾಲೇಜುಗಳಲ್ಲಿ ಬಡವಿದ್ಯಾರ್ಥಿಗಳು ಕಲಿಯುವದು ಕನಸಿನ ಮಾತಾಗಿತ್ತು. ಈಗ ಆರ್ ಟಿ ಇ ನೂತನ ನಿಯಮದ ಪ್ರಕಾರ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳ ನಡುವೆ ಉತ್ತಮ ಶಿಕ್ಷಣ ಪಡೆಯುವ ಅವಕಾಶ ಸಿಗಲಿದೆ.

ಖಾಸಗಿ ಕಾಲೇಜುಗಳಲ್ಲಿ ಆರ್ ಟಿ ಇ ಸೀಟು

ಎ ಶ್ರೇಯಾಂಕದ ಕಾಲೇಜುಗಳಲ್ಲಿ ಸೀಟು

ನಿಯಮದ ಪ್ರಕಾರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಶೇ.25 ಸೀಟು ನೀಡುವುದಾಗಿ ಕಾಲೇಜು ಆಡಳಿತ ಮಂಡಳಿಯು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕಾಗುತ್ತದೆ. ಜತೆಗೆ ಕಾಲೇಜು ಸತತವಾಗಿ ಗುಣಮಟ್ಟ ಕಾಯ್ದುಕೊಂಡು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನಿಂದ (ನ್ಯಾಕ್)'ಎ ಪ್ಲಸ್' ಅಥವಾ 'ಎ' ಶ್ರೇಯಾಂಕ ಪಡೆದಿರಬೇಕು. ಈ ಎಲ್ಲ ನಿಯಮಗಳನ್ನು ಪಾಲಿಸಿದ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರವೇಶ ಸಂಖ್ಯೆ ಹೆಚ್ಚಳಕ್ಕೆ ಪ್ರಸ್ತಾವನೆ ರೂಪಿಸಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಕಳುಹಿಸಬಹುದಾಗಿದೆ.

ಪ್ರತಿ ಸಲ ಶೈಕ್ಷಣಿಕ ವರ್ಷ ಆರಂಭವಾಗುವುದಕ್ಕೂ ಮುನ್ನ ಅಂದರೆ ಡಿಸೆಂಬರ್ ವೇಳೆಗೆ ಪ್ರಸ್ತಾವನೆ ಕಳುಹಿಸಬೇಕು. ಪ್ರಸ್ತಾವನೆ ಕಳುಹಿಸಿದ 15 ದಿನದೊಳಗೆ ಸರ್ಕಾರದಿಂದ ಯಾವುದೇ ಉತ್ತರ ಬಾರದಿದ್ದಲ್ಲಿ ಇನ್​ಟೇಕ್ ಅನುಮತಿ ಸಿಕ್ಕಿಲ್ಲ ಎಂದು ತಿಳಿಯಬಹುದಾಗಿದೆ.

ಪರಿಶೀಲನೆಗೆ ಸಮಿತಿ

ಖಾಸಗಿ ಕಾಲೇಜುಗಳಲ್ಲಿನ ಮೂಲಸೌಕರ್ಯ ಮತ್ತು ಶಿಕ್ಷಣದ ಗುಣಮಟ್ಟ ಪರಿಶೀಲನೆಗೆ ಹೊಸದಾದ ಸಮಿತಿಯೊಂದನ್ನು ರಚನೆಮಾಡಲಾಗುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ. ಕಾಲೇಜುಗಳ ಮೂಲಸೌಕರ್ಯ ಪರಿಶೀಲನೆ ಹಾಗೂ ಪ್ರವೇಶ ಸಂಖ್ಯೆ ಹೆಚ್ಚಳವನ್ನು ಪರಿಶೀಲಿಸಲು ವಿವಿ ಸ್ಥಳೀಯ ವಿಚಾರಣಾ ಸಮಿತಿ (ಎಲ್​ಐಸಿ) ರಚನೆ ಮಾಡಲಿದೆ. ಈ ಸಮಿತಿಯು ಕಾಲೇಜುಗಳಿಗೆ ಭೇಟಿ ನೀಡಿ ಮೂಲಸೌಕರ್ಯ ಪರಿಶೀಲಿಸಿ ಮಾನ್ಯತೆ ನವೀಕರಣ ಅಥವಾ ರದ್ದಿಗೆ ಶಿಫಾರಸು ಮಾಡಲಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಸ್ತಾವನೆಗೆ ಅನುಮತಿಸಿದರೆ ಸರ್ಕಾರವೇ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಯ ಅಧಿಕಾರಿಗಳಿಗೆ ಪತ್ರ ಬರೆದು ಪ್ರವೇಶ ಹೆಚ್ಚಳ ಕುರಿತು ಆದೇಶವನ್ನು ಕಳುಹಿಸಿಕೊಡಲಿದೆ.

ಶ್ರೇಣಿಯ ಅವಧಿ ವಿಸ್ತರಣೆ

ನ್ಯಾಕ್ ಶ್ರೇಣಿಗಾಗಿ ಇನ್ನುಮುಂದೆ ಕಾಲೇಜುಗಳು ಐದು ವರ್ಷದ ಬದಲಾಗಿ ಏಳು ವರ್ಷಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹಳೆಯ ನಿಯಮದಂತೆ ನ್ಯಾಕ್ ಪರಿಶೀಲನೆಗೆ ಐದು ವರ್ಷಕ್ಕೊಮ್ಮೆ ಕಾಲೇಜುಗಳು ಅರ್ಜಿ ಸಲ್ಲಿಸಬೇಕಿತ್ತು. ಆದರೆ ಈಗ ಹೊಸ ಶ್ರೇಣಿಗಾಗಿ 5 ವರ್ಷಕ್ಕೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಬದಲಾಗಿ 7 ವರ್ಷಕ್ಕೆ ಅರ್ಜಿ ಸಲ್ಲಿಸಿದರೆ ಸಾಕು.

ನ್ಯಾಕ್ ಇತ್ತೀಚೆಗೆ ನಡೆಸಿದ 76ನೇ ಕಾರ್ಯಕಾರಿಣಿ ಸಭೆಯಲ್ಲಿ 'ಎ' ಶ್ರೇಣಿ ಹಾಗೂ ಮೇಲ್ಪಟ್ಟ ಶ್ರೇಣಿ ಪಡೆದಿರುವ ಕಾಲೇಜುಗಳಿಗೆ ಶ್ರೇಣಿಯ ಅವಧಿ ವಿಸ್ತರಣೆ ಮಾಡಿದೆ. 2002 ರಿಂದ 2007ರ ಅವಧಿಯಲ್ಲಿ ಉತ್ತಮ ಶ್ರೇಣಿ ಪಡೆದಿರುವ ಕಾಲೇಜುಗಳಿಗೆ ಮಾತ್ರ ಈ ಶ್ರೇಣಿ ವಿಸ್ತರಣೆಯ ಸೌಲಭ್ಯ ದೊರೆಯಲಿದೆ.

For Quick Alerts
ALLOW NOTIFICATIONS  
For Daily Alerts

English summary
Department of education has decided to mandate 25 percent rte seats for economical backward students in private colleges
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X