ಆರ್ ಟಿ ಇ ಎರಡನೇ ಸುತ್ತಿನ ಸೀಟು ಹಂಚಿಕೆ ಮುಕ್ತಾಯ

Posted By:

ಶಿಕ್ಷಣ ಹಕ್ಕು ಕಾಯ್ದೆ'ಯಡಿ (ಆರ್‌ಟಿಇ) ಸೀಟುಗಳ ಎರಡನೇ ಸುತ್ತಿನ ಹಂಚಿಕೆ ಮುಕ್ತಾಯವಾಗಿದೆ. ಸೋಮವಾರ ಎರಡನೇ ಸುತ್ತಿನ ಲಾಟರಿ ಪ್ರಕ್ರಿಯೆ ನಡೆದಿದ್ದು ಖಾಸಗಿ ಶಾಲೆಗಳಲ್ಲಿ ಲಭ್ಯವಿದ್ದ 40900 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.

ಎರಡನೇ ಸುತ್ತಿನ ಫಲಿತಾಂಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ ಸೈಟ್ ನಲ್ಲಿ ಪಡೆಯಬಹುದಾಗಿದೆ. ಮೊದಲ ಸುತ್ತಿನಲ್ಲಿ ಹಂಚಿಕೆಯಾಗಿ ಶಾಲೆಗೆ ದಾಖಲಿಸದೆ ರದ್ದಾದ ಸೀಟನ್ನು ಎರಡನೇ ಸುತ್ತಿಗೆ ಪರಿಗಣಿಸಲಾಗಿದೆ.

ಎರಡನೇ ಸುತ್ತಿನ ಸೀಟುಗಳಿಗೆ ಹೊಸದಾಗಿ 5.440 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಹಿಂದಿನ ಅರ್ಜಿಗಳೂ ಒಳಗೊಂಡಂತೆ ಒಟ್ಟು 1,10,625 ಅರ್ಜಿಗಳಲ್ಲಿ 40900 ಸೀಟುಗಳು ಹಂಚಿಕೆಯಾಗಿವೆ.

ಆರ್ ಟಿ ಇ ಸೀಟು ಹಂಚಿಕೆ

ಮೊದಲ ಸುತ್ತಿನ ಹಂಚಿಕೆಯಲ್ಲಿ 10,054 ಸೀಟು ಭರ್ತಿಯಾಗದೆ ಉಳಿದಿದ್ದವು, ಉಳಿದ ಸೀಟುಗಳನ್ನು ಎರಡನೇ ಸುತ್ತಿನ ಆನ್ ಲೈನ್ ಲಾಟರಿ ಪ್ರಕ್ರಿಯೆಯಲ್ಲಿ ಹಂಚಿಕೆ ಮಾಡಲು ಬಳಸಿಕೊಳ್ಳಲಾಗಿದೆ. 

ಮೂರನೇ ಸುತ್ತಿನ ಹಂಚಿಕೆ

ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರವೂ ಉಳಿಯುವ ಸೀಟುಗಳಿಗೆ ಜೂನ್‌ ಮೊದಲ ವಾರದಲ್ಲಿ ಮೂರನೇ ಹಂತದ ಲಾಟರಿ ನಡೆಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎರಡನೇ ಸುತ್ತಿನ 24,325 ಅರ್ಜಿಗಳಿಗೆ ಸಂಬಂಧಿಸಿದಂತೆ ಸೀಟು ಹಂಚಿಕೆಯ ಎಸ್‌ಎಂಎಸ್‌ ರವಾನೆ ಮಾಡಲಾಗಿದೆ. ಎರಡನೇ ಸುತ್ತಿನಲ್ಲಿ ಸೀಟು ಪಡೆದವರು ಇದೇ 31ರೊಳಗೆ ಆಯಾ ಶಾಲೆಗಳಲ್ಲಿ ಪ್ರವೇಶ ಪಡೆಯಬೇಕು ಎಂದು ತಿಳಿಸಲಾಗಿದೆ.

ಮೊದಲ ಸುತ್ತಿನ ಹಂಚಿಕೆ ವಿವರ

ಕಳೆದ ಏಪ್ರಿಲ್ 28ರಂದು ನಡೆದ ಮೊದಲ ಸುತ್ತಿನ ಲಾಟರಿ ಪ್ರಕ್ರಿಯೆಯಲ್ಲಿ 96,908 ಸೀಟುಗಳನ್ನು ಹಂಚಿಕೆ ಮಾಡಲಾಗಿತ್ತು. ಅದರಲ್ಲಿ 86,854 ವಿದ್ಯಾರ್ಥಿಗಳು ವಿವಿಧ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ.

ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ವಿಳಾಸ: www.schooleducation.kar.nic.in ಗಮನಿಸಿ

English summary
RTE second round seat allotment has been finished. Nearly 41 thousand students got seats in various private schools.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia