ಸ್ಯಾಮ್ಸಂಗ್ ಇಂಡಿಯಾ ಮತ್ತು ರಾಜ್ಯ ಸರ್ಕಾರ ಸಹಯೋಗದೊಂದಿಗೆ ಉಚಿತ ಸ್ಕೂಲ್ ಕಿಟ್

Posted By:

ಸ್ಯಾಮ್ಸಂಗ್ ಇಂಡಿಯಾ ಮತ್ತು ಕರ್ನಾಟಕ ರಾಜ್ಯ ಸರ್ಕಾರ ಸಹಯೋಗದೊಂದಿಗೆ ಬೆಂಗಳೂರು ಸೇರಿದಂತೆ ದೊಡ್ಡಬಳ್ಳಾಪುರ, ಕೋಲಾರ ಮತ್ತು ಮುಳಬಾಗಿಲು ಜಿಲ್ಲೆಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಎರಡು ದಿನಗಳ 'ಸ್ಕೂಲ್ ಕಿಟ್ ಪ್ರೋಗ್ರಾಮ್ ' ಹಮ್ಮಿಕೊಳ್ಳಲಾಗಿತ್ತು.
ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಪ್ರೋತ್ಸಾಹ ತುಂಬುವ ಸಲುವಾಗಿ ಈ ಕಾರ್ಯಕ್ರಮವನ್ನು ಸ್ಯಾಮ್ಸಂಗ್ ಇಂಡಿಯಾ ರಾಜ್ಯ ಸರ್ಕಾರದ ಜೊತೆ ಕೈ ಜೋಡಿಸಿ ನಡೆಸುತ್ತಿದೆ.

ಶಾಲಾ ಮಕ್ಕಳಿಗೆ ಸ್ಕೂಲ್ ಕಿಟ್ ವಿತರಣೆ

ಸ್ಕೂಲ್ ಕಿಟ್ ಪ್ರೋಗ್ರಾಮ್

ಸ್ಯಾಮ್ಸಂಗ್ ಆರ್ & ಡಿ ಸಂಸ್ಥೆಯ ಸ್ವಯಂಸೇವಕರು ಎರಡು ದಿನಗಳಲ್ಲಿ ಬೆಂಗಳೂರಿನ ಸುತ್ತ ಮುತ್ತ 500 ಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿ ಮೂವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ನೀಡಲಾಗಿರುವ ಕಿಟ್ 3000 ಡಿಕ್ಷನರಿ, 14,000 ಸ್ಟೇಷನರಿ, 300 ಬ್ಯಾಗ್ ಗಳು, 18,000 ಎಕ್ಸಾಮ್ ಪ್ಯಾಡ್ಗಳು ಸೇರಿದಂತೆ ಜಾಮಿಟ್ರಿ ಬಾಕ್ಸ್ಗಳನ್ನೂ ಹೊಂದಿವೆ.

ನಿರ್ದೇಶಕರ ನುಡಿ

ಈ ಕಾರ್ಯಕ್ರಮದ ಕುರಿತು ಮಾತನಾಡಿದ ಸ್ಯಾಮ್ಸಂಗ್ ಆರ್ & ಡಿ ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದೀಪೇಶ್ ಶಾಹ್ " ಗ್ರಾಹಕರಿಗೆ ಉತ್ತಮವಾದ ಹಾಗೂ ಅರ್ಥಪೂರ್ಣ ಸೇವೆ ನೀಡುವುದೇ ಸ್ಯಾಮ್ಸಂಗ್ ನ ಉದ್ದೇಶ" ಎಂದು ಹೇಳಿದ್ದಾರೆ.

ಸಮಾಜಕ್ಕೆ ಏನನ್ನಾದ್ರೂ ಉತ್ತಮವಾದ ಸೇವೆ ಮಾಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಾರತದಲ್ಲಿ ಕನಿಷ್ಠ ಸೌಲಭ್ಯ ಇಲ್ಲದ ಮಕ್ಕಳಿಗೆ ಅನುಕೂಲ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದಲೇ ಇಂದು 30000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ

ಸ್ಯಾಮ್‌ಸಂಗ್‌ ಗ್ರೂಪ್‌

ಸ್ಯಾಮ್‌ಸಂಗ್‌ ಗ್ರೂಪ್‌ ಒಂದು ಬಹುರಾಷ್ಟ್ರೀಯ ಸಂಘಟಿತ ವ್ಯಾಪಾರಿ ಸಂಸ್ಥೆಯಾಗಿದ್ದು, ದಕ್ಷಿಣ ಕೊರಿಯಾದ ಸಿಯೋಲ್‌ನ ಸ್ಯಾಮ್‌ಸಂಗ್‌ ನಗರದಲ್ಲಿ ಅದರ ಪ್ರಧಾನ ಕಛೇರಿಯನ್ನು ಹೊಂದಿದೆ. ಇದು ದಕ್ಷಿಣ ಕೊರಿಯಾದ ಅತ್ಯಂತ ದೊಡ್ಡ ಚೇಬಾಲ್ ಮತ್ತು ಆದಾಯದಿಂದ ಪ್ರಪಂಚದ ಎರಡನೇ ಅತಿ ದೊಡ್ಡ ಸಂಘಟಿತ ವ್ಯಾಪಾರಿ ಸಂಸ್ಥೆಯಾಗಿದೆ, ಸ್ಯಾಮ್‌ಸಂಗ್‌ ಗ್ರೂಪ್‌ ಹಲವಾರು ಅಂತಾರಾಷ್ಟ್ರೀಯ ಮಟ್ಟದ ವ್ಯವಹಾರಗಳನ್ನು ಒಳಗೊಂಡಿದೆ, ಅವುಗಳಲ್ಲಿ ಹೆಚ್ಚಿನವು ಸ್ಯಾಮ್‌ಸಂಗ್‌ ಬ್ರ್ಯಾಂಡ್‌ನಡಿಯಲ್ಲಿ ಸೇರಿವೆ, ಅವುಗಳೆಂದರೆ ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್, ಮಾರಾಟದಲ್ಲಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ತಂತ್ರಜ್ಞಾನ ಕಂಪನಿಯಾಗಿದೆ.

ಸ್ಯಾಮ್ಸಂಗ್ ಕುರಿತಾದ ಇತ್ತೀಚಿನ ಸುದ್ದಿಗಳಿಗಾಗಿ ಸ್ಯಾಮಸ್ಸಂಗ್ ನ್ಯೂಸ್ ರೂಂ ವೆಬ್ ಸೈಟ್ ವಿಳಾಸ https://news.samsung.com/in/ ಭೇಟಿ ಮಾಡಿ

English summary
Samsung India Partners Government of Karnataka for ‘School Kit Programme’

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia