Santoor Women's Scholarship 2020-21: 10,12ನೇ ತರಗತಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ

ವಿಪ್ರೋ ಕಂಸ್ಯೂಮರ್ ಕೇರ್ ಮತ್ತು ಲೈಟಿಂಗ್ ಸಂಸ್ಥೆಯು ಇದೀಗ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್‌ ಶಿಪ್ ನೀಡಲು ಮುಂದಾಗಿದೆ. ಅದಕ್ಕಾಗಿ ಮೂರು ರಾಜ್ಯಗಳನ್ನ ಕೂಡಾ ಆಯ್ಕೆ ಮಾಡಿಕೊಂಡಿದೆ ಈ ಸಂಸ್ಥೆ. ಅವುಗಳು ಯಾವುವುವೆಂದರೆ ದೇಶದ ದಕ್ಷಿಣ ರಾಜ್ಯಗಳಾದ ಕರ್ನಾಟಕ , ಆಂಧ್ರಪ್ರದೇಶ, ತೆಲಂಗಾಣ.

 
ಸಂತೂರ್ ಸ್ಕಾಲರ್‌ಶಿಪ್ 2020ಗೆ ಅರ್ಜಿ ಆಹ್ವಾನ

ಮೂರು ರಾಜ್ಯಗಳಲ್ಲಿ ಹತ್ತನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು 2020-21ನೇ ಸಾಲಿನಲ್ಲಿ ಪದವಿ ಕಲಿಕೆಯನ್ನು ಆರಂಭಿಸಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಈ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರು.
ಪದವಿ ಕಲಿಯುತ್ತಿರುವ ಒಟ್ಟು 900 ವಿದ್ಯಾರ್ಥಿಗಳಿಗೆ 3 ವರ್ಷ ಪ್ರತೀ ವಿದ್ಯಾರ್ಥಿಗೆ ವರ್ಷಕ್ಕೆ 24,000 ರೂ ರಷ್ಟು ಸಂತೂರ್ ವುಮೆನ್ಸ್ ಸ್ಕಾಲರ್ ಶಿಪ್ ನೀಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ. ಸಂತೂರ್ ವಿಪ್ರೋ ಸಂಸ್ಥೆಯ ಫೇಮಸ್ ಸೋಪ್ ಆಗಿದೆ.

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ ಸೈಟ್‌ santoorscholarships.com ಗೆ ಭೇಟಿ ನೀಡಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಅಭ್ಯರ್ಥಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅಕ್ಟೋಬರ್ 31,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಹೇಗೆ:

ಸ್ಟೆಪ್ 1: ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ http://www.santoorscholarships.com/ ಗೆ ಭೇಟಿ ನೀಡಿ.
ಸ್ಟೆಪ್ 2: ಫಾರ್ಮ್ ನಲ್ಲಿ ಇರುವ 5 ಸ್ಟೆಪ್ ಗಳನ್ನ ಭರ್ತಿ ಮಾಡಿ
ಸ್ಟೆಪ್ 3: ವೈಯಕ್ತಿಯ ಮಾಹಿತಿ, ಶೈಕ್ಷಣಿಕ ಮಾಹಿತಿ ಸೇರಿದಂತೆ ಅಗತ್ಯದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ
ಸ್ಟೆಪ್ 4: ವಿದ್ಯಾರ್ಥಿಗಳು ನಿಮ್ಮ ಬಗ್ಗೆ ಹಾಗೂ ನಿಮ್ಮ ಮುಂದಿನ ಎಜ್ಯುಕೇಶನ್ ಬಗ್ಗೆ ಹಾಗೂ ಈ ಸ್ಕೋಲರ್ ಶಿಪ್ ನಿಂದ ನಿಮಗೆ ಹೇಗೆ ಸಹಾಯಕವಾಗುತ್ತದೆ ಎಂದು 600 ಪದಕ್ಕೂ ಮೀರದಂತೆ ಪ್ರಬಂಧ ಬರೆಯಬೇಕು
ಸ್ಟೆಪ್ 5: ಕೊನೆಯಲ್ಲಿ ಅರ್ಜಿಯನ್ನ ಸಬ್‌ಮಿಟ್ ಮಾಡಿ
ಅರ್ಹ ವಿದ್ಯಾರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ ಈ ಸ್ಕೋಲರ್ ಶಿಪ್ ಪ್ರಯೋಜನ ಪಡೆದುಕೊಳ್ಳಬೇಕಾಗಿದೆ.

For Quick Alerts
ALLOW NOTIFICATIONS  
For Daily Alerts

English summary
Santoor Women's Scholarship 2020 invites applications from young women who have completed the class 10 & 12 in this year and wish to pursue higher education.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X