ಎಸ್ ಎಸ್ ಎಲ್ ಸಿ ಯಲ್ಲಿ ಎ+ ಪಡೆದವರಿಗೆ ಸರೋಜಿನಿ ದಾಮೋದರನ್‌ ಫೌಂಡೇಷನ್‌ ‘ವಿದ್ಯಾದಾನ್‌' ವಿದ್ಯಾರ್ಥಿ ವೇತನ

Posted By:

ಸರೋಜಿನಿ ದಾಮೋದರನ್‌ ಫೌಂಡೇಷನ್‌ 'ವಿದ್ಯಾದಾನ್‌' ಕಾರ್ಯಕ್ರಮದಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣಕ್ಕೆ ಬೆಂಬಲಿಸಲು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.

ಈ ವಿದ್ಯಾರ್ಥಿ ವೇತನವು ವಿದ್ಯಾರ್ಥಿಗಳ 10 ನೇ ತರಗತಿಯ ಅರ್ಹತೆಯ ಹಾಗೂ ಆಯ್ಕೆ ಪ್ರಕ್ರಿಯೆಯ ಮೂಲಕ 2 ವರ್ಷಗಳ ಕಾಲದ ವಿದ್ಯಾರ್ಥಿ ವೇತನಕ್ಕೆ ಅರ್ಹತೆಯನ್ನು ಪಡೆಯುತ್ತದೆ ಹಾಗೂ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಪದವಿಯವರೆಗೂ ಮುಂದುವರೆಸಲಾಗುವುದು.

ವಿದ್ಯಾರ್ಥಿ ವೇತನದ ವಿವರ

11ನೇ ಮತ್ತು 12ನೇ ತರಗತಿಯ ವಿದ್ಯಾರ್ಥಿ ವೇತನದ ಪ್ರಮಾಣವು ಗರಿಷ್ಠ ವಾರ್ಷಿಕ 6000/-ರೂ

ಎಸ್ ಎಸ್ ಎಲ್ ಸಿ ಯಲ್ಲಿ ಎ+ ಪಡೆದವರಿಗೆ ವಿದ್ಯಾರ್ಥಿ ವೇತನ

ಯಾರು ಅರ್ಜಿ ಸಲ್ಲಿಸಬಹುದು?

 • 2017ನೇ ಸಾಲಿನಲ್ಲಿ 10ನೇ ತರಗತಿ ತೇರ್ಗಡೆಯಾಗಿರಬೇಕು ಮತ್ತು ಶೇ.90 ರಷ್ಟು ಅಂಕ/A+ ಪಡೆದಿರಬೇಕು.
 • ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
 • ಅಂಗ ವೈಕಲ್ಯತೆ ಹೊಂದಿರುವ ವಿದ್ಯಾರ್ಥಿಗಳು ಶೇ.75 ಅಂಕಗಳನ್ನು ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ

 • ಸರೋಜಿನಿ ದಾಮೋದರನ್‌ ಫೌಂಡೇಷನ್‌ ವಿದ್ಯಾರ್ಥಿಗಳು ಒದಗಿಸಿದ ಶೈಕ್ಷಣಿಕ ಸಾಧನೆ ಹಾಗೂ ಅರ್ಜಿಯ ಮಾಹಿತಿಯನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು.
 • ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪರೀಕ್ಷೆ/ ಸಂದರ್ಶನ ಮಾಡಲಾಗುವುದು.

ಪ್ರಮುಖ ದಿನಾಂಕಗಳು

 • ಅರ್ಜಿ ಹಾಕಲು ಕೊನೆಯ ದಿನಾಂಕ: 10-06-2017
 • ಪರೀಕ್ಷೆ/ ಸಂದರ್ಶನದ ದಿನಾಂಕ: 20-06-2017 ರಿಂದ 20-07-2017
 • ಪರೀಕ್ಷೆ/ಸಂದರ್ಶನ ನಡೆಯುವ ಸ್ಥಳ ಮತ್ತು ದಿನಾಂಕವನ್ನು ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ತಿಳಿಸಲಾಗುವುದು ಹಾಗೂ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಜೂನ್ 15 ರೊಳಗೆ ತಮ್ಮ ಪ್ರವೇಶ ಪತ್ರವನ್ನು ವಿದ್ಯಾದಾನ್ ವೆಬ್ ಮೂಲಕ ಪಡೆದಕೊಳ್ಲಬಹುದಾಗಿದೆ.

ಅಗತ್ಯ ದಾಖಲೆಗಳು

 • 10ನೇ ತರಗತಿಯ ಅಂಕಪಟ್ಟಿ (ಮೂಲ ಪ್ರತಿ ಇಲ್ಲದಿದ್ದಾಗ ತಾತ್ಕಾಲಿಕ ಅಂಕಪಟ್ಟಿ/ ಆನ್-ಲೈನ್ ಅಂಕಪಟ್ಟಿ ನೀಡಬಹುದು)
 • ಇತ್ತೀಚಿನ ಆದಾಯ ಪ್ರಮಾಣ ಪತ್ರ (ರೇಷನ್ ಕಾರ್ಡ್ ಅಂಗೀಕರಿಸುವುದಿಲ್ಲ)
 • ಇತ್ತೀಚಿನ ಭಾವಚಿತ್ರ
 • ಅಂಗವಿಕಲ ಪ್ರಮಾಣ ಪತ್ರ

ಅರ್ಜಿ ಸಲ್ಲಿಕೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಸ್ವಂತ ಇ-ಮೇಲ್ ಐಡಿ ಮೂಲಕ ವಿದ್ಯಾದನ್ ವೆಬ್ಸೈಟ್ ನಲ್ಲಿ ಆನ್-ಲೈನ್ ಅರ್ಜಿ ಸಲ್ಲಿಸತಕ್ಕದ್ದು.

ಹೆಚ್ಚಿನ ವಿವರಗಳಿಗೆ

ಮಾಹಿತಿಗೆ vidyadhan.karnataka@sdfoundationindia.com ಹಾಗೂ ದೂರವಾಣಿ ಸಂಖ್ಯೆ 080-42995222, 9986325234 ಸಂಪರ್ಕಿಸಬಹುದು.

ವೆಬ್ಸೈಟ್ ವಿಳಾಸ www.vidyadhan.org ಗಮನಿಸಿ

ಸರೋಜಿನಿ ದಾಮೋದರನ್ ಫೌಂಡೇಷನ್ ವಿದ್ಯಾದಾನ್

ಸರೋಜಿನಿ ದಾಮೋದರನ್‌ ಫೌಂಡೇಷನ್‌ 'ವಿದ್ಯಾದಾನ್‌' ಕಾರ್ಯಕ್ರಮದಡಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣಕ್ಕೆ ಬೆಂಬಲಿಸಲು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಪ್ರಸ್ತುತ ಈ ಕಾರ್ಯಕ್ರಮದಡಿಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಒಟ್ಟು 1500 ವಿದ್ಯಾರ್ಥಿಗಳು ವೇತನವನ್ನು ಪಡೆಯುತ್ತಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ 2014 ರಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು ಒಟ್ಟು 362 ವಿದ್ಯಾರ್ಥಿಗಳ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿ ವೇತನವು ಫೌಂಡೇಷನ್ ನೋಂದಣಿ ಮಾಡಿದ ದಾನಿಗಳು ಹಾಗೂ ಬಾಹ್ಯ ದಾನಿಗಳ/ ಪ್ರಾಯೋಜಕರ ಮೂಲಕ ನೇರವಾಗಿ ವಿದ್ಯಾರ್ಥಿಗಳಿಗೆ ನೀಡಲಾಗುವುದು.

English summary
Sarojini Damodaran Foundation is offering the Vidyadhan Scholarship Program for the year 2017 in order to give their support to the commendable students of geconomically weaker section of society for their college education.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia