ಕ್ರೀಡೆಯಾಗಿ ಯೋಗ ಕಲಿಯಲು ಸೌದಿ ಅರೇಬಿಯಾ ಅಸ್ತು

ಯೋಗ ಶಿಕ್ಷಣಕ್ಕೆ ಸೌದಿ ಅರೇಬಿಯಾ ಮಾನ್ಯತೆ ನೀಡಿದೆ ಆದರೆ ಇದನ್ನು ಕ್ರೀಡೆ ಎಂದು ಘೋಷಿಸಿದೆ.

ಸೌದಿ ಅರೇಬಿಯಾದ ವ್ಯಾಪಾರ ಮತ್ತು ಕೈಗಾರಿಕೆ ಇಲಾಖೆಯ ನಿಯಮದ ಪ್ರಕಾರ ಯೋಗ ತರಬೇತಿ ನೀಡುವವರು ಲೈಸನ್ಸ್ ಪಡೆಯಬೇಕಾಗಿದೆ.

ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಡ್ಡಾಯ ಯೋಗ ಶಿಕ್ಷಣ

ಸೌದಿ ಅರೇಬಿಯಾ ಯೋಗ ಕಲಿಕೆ

 

ನೌಫ್ ಮರ್ವಾಯಿ ಸೌದಿ ಅರೇಬಿಯಾ ಸರ್ಕಾರ ನಿಯಮದ ಅನುಸಾರ ಯೋಗ ಕಲಿಸಲು ಪರವಾನಿಗೆ ಪಡೆದ ಮೊದಲ ಯೋಗ ಶಿಕ್ಷಕರಾಗಿದ್ದಾರೆ. ಯೋಗ ಕಲಿಸುವುದಕ್ಕೂ ವೈಯಕ್ತಿಕ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮರ್ವಾಯಿ ನಂಬಿದ್ದಾರೆ.

37 ವರ್ಷದ ನೌಫ್ ಮರ್ವಾಯಿ 2005 ರಿಂದಲೂ ಯೋಗ ಶಿಕ್ಷಣಕ್ಕೆ ಬೇಡಿಕೆ ಇಟ್ಟಿದ್ದರು, ಪ್ರತಿಬಾರಿಯೂ ಅವರ ಪ್ರಯತ್ನಗಳು ವಿಫಲವಾಗುತ್ತಿದ್ದವು. ಇದರಿಂದ ದೃತಿಗೆಡದೆ ಮರ್ವಾಯಿ ಕೊನೆಗೆ ತಮ್ಮ ಬೇಡಿಕೆಯನ್ನು ಸೌದಿಯಲ್ಲಿ ಮಹಿಳೆಯರಿಗಾಗಿ ಬ್ಯಾಸ್ಕೆಟ್ ಬಾಲ್ ಶುರುಮಾಡಿದ ಸೌದಿಯ ರಾಜಕುಮಾರಿ ಬಳಿ ಇಟ್ಟರು. ರಾಜಕುಮಾರಿ ರೀಮಾ ಬಿಂಟ್ ಬಂದರ್ ಅಲ್ಸೌದ್ ಯೋಗವನ್ನು ಕ್ರೀಡೆಯಾಗಿ ಪರಿಗಣಿಸಿ ಯೋಗ ಶಿಕ್ಷಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಇತ್ತೀಚೆಗಷ್ಟೇ ರಾಂಚಿಯ ಮುಸ್ಲಿಂ ಯುವತಿ ರಫಿಯಾ ಯೋಗ ತರಬೇತಿ ನೀಡಿದ್ದಕ್ಕೆ ಮುಸ್ಲಿಂ ಧರ್ಮಗುರುಗಳು ಫತ್ವಾ ಹೊರಡಿಸಿದ್ದರು. ಇದೇ ಸಂದರ್ಭದಲ್ಲಿ ಅದೇ ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾ ಯೋಗ ಅಳವಡಿಸಿಕೊಂಡಿದೆ.

ಯೋಗ

ಯೋಗವು ಭಾರತೀಯ ಮೂಲದ, 6000 ಕ್ಕಿಂತಲೂ ಹಳಯದಾದ, ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಕ ಅಭ್ಯಾಸವಾಗಿದೆ. ಜೂ.21ರಂದು ವಿಶ್ವ ಯೋಗ ದಿನಾಚರಣೆಯನ್ನು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಇದು ಭಾರತದ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.

ಯೋಗದ ಮಹತ್ವ ಯೋಗ ವ್ಯಾಯಾಮ ಮಾತ್ರವಲ್ಲದೆ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹಮಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಯೋಗವು ಮನಸ್ಸು ಮತ್ತು ದೇಹ; ಚಿಂತನೆ ಮತ್ತು ಕ್ರಿಯೆ; ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುವ ವಿಶೇಷ ಕಲೆಯಾಗಿದೆ.

ಯೋಗ ದಿನಾಚರಣೆಯ ಇತಿಹಾಸ

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು. 2015, ಜೂನ್ 21ನೇ ತಾರೀಖಿನಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು.

For Quick Alerts
ALLOW NOTIFICATIONS  
For Daily Alerts

  English summary
  Saudi Arabia on Tuesday approved teaching of Yoga and declared it as a sport. An individual who wants to practice yoga can avail a licence to do so, as per the Saudi Ministry of Trade and Industry.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more