SBI Recruitment 2020: 14 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಕಾತಿ ಮಾಡಲಿದೆ ಎಸ್‌ಬಿಐ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಈ ವರ್ಷ 14,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಯೋಜನೆ ಇದೆ ಎಂದು ತಿಳಿಸಿದೆ. ಇದೇ ವೇಳೆ ತನ್ನ ಬ್ಯಾಂಕ್‌ ಸಿಬ್ಬಂದಿಗಳಿಗೆ ವಿಆರ್‌ಎಸ್‌ ನೀಡುವ ಬಗ್ಗೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದು, ತಮ್ಮ ವೃತ್ತಿಗಳಲ್ಲಿ ವ್ಯೂಹಾತ್ಮಕ ಬದಲಾವಣೆ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ ಉದ್ಯೋಗಿಗಳಿಗೆ ನಮ್ಮ ನಿರ್ಧಾರ ಸಹಾಯವಾಗಲಿದ್ದು, ಇದು ಅವರಿಗೆ ಒಂದು 'ಅನುಕೂಲಕರ' ಪರಿಹಾರವನ್ನು ಒದಗಿಸಲಿದೆ ಅಂತ ಹೇಳಿದೆ.

ಎಸ್‌ಬಿಐ ಈ ವರ್ಷ 14 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಕಾತಿ ಮಾಡಲಿದೆ

ನಮ್ಮ ಬ್ಯಾಂಕ್ ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿಕೊಂಡು ಹೋಗುತ್ತಿದ್ದು, ಜನರಿಗೆ ಇನ್ನಷ್ಟು ಅನುಕೂಲವಾಗುವಂತೆ ಈ ವರ್ಷ ಬ್ಯಾಂಕ್ 14,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜನೆ ನಡೆಸಿದೆ. ಎಸ್ ಬಿಐ ನಲ್ಲಿ ಸುಮಾರು 2.50 ಲಕ್ಷ ನೌಕರರಿದ್ದು, ನೌಕರರ ಅಗತ್ಯಗಳನ್ನು ಪೂರೈಸುವಲ್ಲಿ ಮತ್ತು ಅವರ ಜೀವನಕ್ಕೆ ನೆರವು ನೀಡುವ ಲ್ಲಿ ಮುಂಚೂಣಿಯಲ್ಲಿದ್ದೇವೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ, ವೃತ್ತಿಪರ ಬೆಳವಣಿಗೆಯ ಮಿತಿಗಳು, ಚಲನಶೀಲತೆಯ ಸಮಸ್ಯೆಗಳು, ದೈಹಿಕ ಆರೋಗ್ಯ ಪರಿಸ್ಥಿತಿಗಳು ಅಥವಾ ಕೌಟುಂಬಿಕ ಸನ್ನಿವೇಶಗಳ ಕಾರಣದಿಂದಾನೇ ತಮ್ಮ ವೃತ್ತಿಗಳಲ್ಲಿ ವ್ಯೂಹಾತ್ಮಕ ಬದಲಾವಣೆಯನ್ನು ಮಾಡಲು ಬಯಸುವ ಉದ್ಯೋಗಿಗಳಿಗೆ ಅನುಕೂಲಕರವಾದ ಪರಿಹಾರವನ್ನು ಒದಗಿಸಲು ಯೋಚಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಎಸ್‌ಬಿಐ ಈ ವರ್ಷ 14 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಕಾತಿ ಮಾಡಲಿದೆ

ದೇಶದ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಬ್ಯಾಂಕ್ ತೀವ್ರ ಆಸಕ್ತಿ ಹೊಂದಿದೆ. ದೇಶದ ಏಕೈಕ ಭಾರತೀಯ ಬ್ಯಾಂಕ್ ಎಂಬ ಬ್ಯಾಂಕ್ ಇದಾಗಿದ್ದು, ರಾಷ್ಟ್ರ ಸರಕಾರದ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಯೋಜನೆಯಡಿ ಅಪ್ರೆಂಟಿಸ್ ಗಳನ್ನು ನೇಮಕ ಮಾಡಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.ಕರಡು ಯೋಜನೆಯ ಪ್ರಕಾರ, 25 ವರ್ಷ ಸೇವೆ ಸಲ್ಲಿಸಿದ ಅಥವಾ 55 ವರ್ಷ ತುಂಬಿದ ಎಲ್ಲ ಕಾಯಂ ಅಧಿಕಾರಿ ಮತ್ತು ಸಿಬ್ಬಂದಿಗೆ 'ಸೆಕೆಂಡ್ ಇನ್ನಿಂಗ್ಸ್ ಟ್ಯಾಪ್ ವಿಆರ್ ಎಸ್ -2020' ನೀಡಲಾಗುತ್ತದೆ ಎನ್ನಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
This year sbi planing to recruit more 14000 Employees This Year. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X