ಎಸ್ ಎಸ್ ಎಲ್ ಸಿ ಮಾದರಿ ಉತ್ತರಗಳು ಪ್ರಕಟ

Posted By:

ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪೂರ್ಣಗೊಂಡ ಬೆನ್ನಲ್ಲೆ ಮೌಲ್ಯಮಾಪನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಉತ್ತರ ಪತ್ರಿಕೆಗಳ ಮಾದರಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತನ್ನ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಿದ್ದು ಸಾರ್ವಜನಿಕರು, ವಿದ್ಯರ್ಥಿಗಳು, ಶಿಕ್ಷಕರು ಪಡೆಯಬಹುದಾಗಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯ ಎಲ್ಲಾ ವಿಷಯಗಳ ಮಾದರಿ ಉತ್ತರಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಉತ್ತರ ಪತ್ರಿಕೆಗೆಳನ್ನು ಬಿಡುಗಡೆಮಾಡಲಾಗಿದೆ.

ಮಾದರಿ ಉತ್ತರಗಳು ಪ್ರಕಟ

ಮೌಲ್ಯಮಾಪನಕ್ಕೆ ಸಹಾಯವಾಗುವಂತೆ ಈ ಉತ್ತರ ಪತ್ರಿಕೆಗಳನ್ನು ಸಿದ್ಧಪಡಿಸಿದ್ದು ಮೌಲ್ಯಮಾಪಕರು ಇದರ ಉಪಯೋಗ ಪಡೆಯಲಿದ್ದಾರೆ. ಇನ್ನುಳಿದಂತೆ ಪರೀಕ್ಷೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗಳಿಗೆ ಸರಿ ಉತ್ತರಗಳ ಹುಡುಕಾಟದಲ್ಲಿರುವ ವಿದ್ಯಾರ್ಥಿಗಳಿಗೆ ಈ ಮಾದರಿ ಉತ್ತರ ಪತ್ರಿಕೆಗಳು ಸಹಾಯವಾಗಲಿವೆ.

ಉತ್ತರ ಪತ್ರಿಕೆಯನ್ನು ಪಡೆಯುವ ವಿಧಾನ

  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಮೇಲ್ಭಾಗದಲ್ಲಿ ಕಾಣುವ "Scheme of Valuation(Model Answers ) for SSLC March/APRIL 2017 Examination " ಲಿಂಕ್ ಕ್ಲಿಕ್ ಮಾಡಬೇಕು
  • "Scheme of Evaluation" ಪಟ್ಟಿ ಗೋಚರಿಸುತ್ತದೆ.
  • "select subject" ಮೇಲೆ ಕ್ಲಿಕ್ ಮಾಡಿ ಬೇಕಾದ ವಿಷಯಗಳನ್ನು ಆಯ್ಕೆ ಮಾಡಿ ವೀಕ್ಷಿಸಬಹುದಾಗಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ಸೈಟ್ ವಿಳಾಸ kseeb.kar.nic.in

ಎಸ್ ಎಸ್ ಎಲ್ ಸಿ ಮೌಲ್ಯಮಾಪನ

ಏಪ್ರಿಲ್ 20 ರಿಂದ ರಾಜ್ಯಾದ್ಯಂತ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಶುರುವಾಗಲಿದ್ದು 8.70 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಭವಿಷ್ಯವನ್ನು ಸುಮಾರು 68 ಸಾವಿರ ಶಿಕ್ಷಕರು ಬರೆಯಲಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಮೌಲ್ಯಮಾಪನಕ್ಕೆ ಹೆಚ್ಚು ಶಿಕ್ಷಕರು ಮತ್ತು ಹೆಚ್ಚಿನ ಕೇಂದ್ರಗಳನ್ನು ನಿಯೋಜಿಸಲಾಗಿದೆ.

ಈ ಬಾರಿಯ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ರಾಜ್ಯದ 225 ಕಡೆ ಮೌಲ್ಯಮಾಪನ ಕೇಂದ್ರಗಳನ್ನು ಗುರುತಿಸಲಾಗಿದ್ದು, 33 ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರತಿ ವಿಷಯಕ್ಕೆ ಒಂದು ಮೌಲ್ಯಮಾಪನ ಕೇಂದ್ರವನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಇರುವ ಕಡೆ ಹೆಚ್ಚಿನ ಕೇಂದ್ರಗಳನ್ನು ಗುರುತಿಸಲಾಗಿದ್ದು ಫಲಿತಾಂಶವನ್ನು ಬೇಗ ನೀಡುವ ಉದ್ದೇಶದಿಂದ ಹೆಚ್ಚಿನ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಇದನ್ನು ಗಮನಿಸಿ: ಎಸ್ ಎಸ್ ಎಲ್ ಸಿ ಮೌಲ್ಯಮಾಪನ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 1966 ರಲ್ಲಿ ಸ್ಥಾಪಿತವಾಗಿದ್ದು, ಎಸ್.ಎಸ್.ಎಲ್.ಸಿ. ಹಾಗೂ ಇತರೆ ಪರೀಕ್ಷಗಳನ್ನು ನಡೆಸುತ್ತಿದೆ.

ಪ್ರತಿ ವರ್ಷ ಎಸ್.ಎಸ್.ಎಲ್.ಸಿ ಯಲ್ಲಿ ಏಪ್ರಿಲ್ ಮಾಹೆಯಲ್ಲಿ 8.50 ಲಕ್ಷ ಹಾಗೂ ಜೂನ್ ಮಾಹೆಯಲ್ಲಿ 1.50 ಲಕ್ಷ ಅಭ್ಯರ್ಥಿಗಳ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.

ಮಂಡಳಿಯು ಮೌಲ್ಯಮಾಪನೆ ಪದ್ದತಿ ಹಾಗೂ ಫಲಿತಾಂಶಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ವಿಭಾಗೀಯ ಕಛೇರಿಗಳನ್ನು ಪ್ರಾರಂಭಿಸಿದೆ. ಇದರಿಂದ ಪರೀಕ್ಷೆ ಹಾಗೂ ಅದರ ಸಂಬಂಧಿತ ಕೆಲಸಗಳು ಈ ವಿಕೇಂದ್ರೀಕರಣ ದಿಂದ ಮಂಡಳಿಯ ಕಾರ್ಯ ಸುಲಭ ಹಾಗೂ ಸುಸೂತ್ರವಾಗಿ ನಡೆಯುತ್ತಿದೆ. ಇದರಿಂದ ಅಭ್ಯರ್ಥಿಗಳು ಸಹ ತಮ್ಮ ಅಹವಾಲುಗಳನ್ನು ವಾಸಸ್ಥಳದ ಹತ್ತಿರದಲ್ಲೇ ಪರಿಹಾರಗಳು ದೊರೆಯುವಂತಾಗುತ್ತದೆ. ಪರೀಕ್ಷೆಗೆ ಕುಳಿತುಕೊಳ್ಳುವ ಎಲ್ಲಾ ಅಭ್ಯರ್ಥಿಗಳ ಭಾವಚಿತ್ರಗಳನ್ನು ಪ್ರವೇಶ ಪತ್ರಗಳಲ್ಲಿ ಹಾಗೂ ಅಂಕ ಪಟ್ಟಿಗಳಲ್ಲಿ ಮುದ್ರಿಸುವುದು ಒಂದು ಸಾಧನೆಯೇ ಆಗಿದೆ.

ಮಂಡಳಿಯು ಪುನರಾವರ್ತಿತ ಅಭ್ಯರ್ಥಿಗಳಿಗೆ ಅದೇ ವರ್ಷದ ಜೂನ್ ಮಾಹೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಡಿಕೊಟ್ಟಿರುವುದು ಗಣನೀಯವಾದ ಸಾಧನೆಯಾಗಿದೆ. ಇದರಿಂದ ಅಭ್ಯ್ರಥಿಗಳು ಅದೇ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರೆಸಲು ಅವಕಾಶ ಒದಗಿಸಲಾಗಿದೆ. ಇದು ನಮ್ಮ ದೇಶದಲ್ಲಿ ಮೊದಲನೇಯ ಬಾರಿಗೆ ಪ್ರಾರಂಭವಾದ ಪ್ರಯತ್ನವಾಗಿದೆ.

English summary
Scheme of evaluation model answers of SSLC examination 2017 has been released in its official website.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia