School Reopen Guidelines: ಶಾಲೆ ಆರಂಭಕ್ಕೆ ಕೇಂದ್ರ ಶಿಕ್ಷಣ ಸಚಿವಾಲಯ ಮಾರ್ಗಸೂಚಿ ಪ್ರಕಟ

ದೇಶದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ನಡುವೆಯೇ ಶಾಲೆಗಳು ಆರಂಭವಾಗುತ್ತಿದ್ದು, ಈ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯ ಇಂದು ಮಾರ್ಗಸೂಚಿಯನ್ನು ಪ್ರಕಟ ಮಾಡಿದೆ.

 ಶಾಲೆ ಆರಂಭಕ್ಕೆ ಹೊಸ ಮಾರ್ಗಸೂಚಿ ರಿಲೀಸ್

ಸೆಪ್ಟೆಂಬರ್ ರಂದು ಹೊರಡಿಸಿದ ಅನ್‌ಲಾಕ್ -5ರ ಮಾರ್ಗಸೂಚಿ ಅನುಸಾರ ಶಾಲೆಗಳ ಪುನರಾರಂಭ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟ ಮಾಡಿದ ಮಾರ್ಗಸೂಚಿಯ ಸಂಕ್ಷಿಪ್ತ ಮುಖ್ಯಾಂಶಗಳು ಇಲ್ಲಿದೆ.

ಮಾರ್ಗಸೂಚಿಯಲ್ಲಿ ಏನಿದೆ ?:

* ಪ್ರಮುಖವಾಗಿ ಪೋಷಕರ ಒಪ್ಪಿಗೆ ಇರುವ ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಹಾಜರಾಗಬಹುದು.
* ಶಾಲೆಗಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು
* ಶಾಲೆಗಳಲ್ಲಿ ಮತ್ತು ಶಾಲೆಯ ಆವರಣದಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಿಸುತ್ತಿರಬೇಕು.
* ಶಾಲೆಯ ಆವರಣದಲ್ಲಿ ಗಾಳಿ ಆಡಲು ಅವಕಾಶವಿರಬೇಕು.
* ಶಾಲೆಗಳಲ್ಲಿ ಸ್ವಚ್ಛತೆಯ ಬಗ್ಗೆ ಪರಿಶೀಲಿಸುತ್ತಿರಬೇಕು.
* ಶಾಲೆಗಳಲ್ಲಿ ತುರ್ತು ಪರಿಸ್ಥಿತಿ ಘಟಕಗಳನ್ನು ತೆರೆಯಬೇಕು.
* ಪ್ರತಿ ಶಾಲೆಗಳು ತನ್ನದೇ ಹೊಸ ವೇಳಾಪಟ್ಟಿ ಪ್ರಕಟಿಸಬೇಕು
* ಮಕ್ಕಳು/ವಿದ್ಯಾರ್ಥಿಗಳು ತರಗತಿಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
* ವಿದ್ಯಾರ್ಥಿಗಳು ಕುಳಿತುಕೊಳ್ಳುವಾಗ ನಡುವೆ ಅಂತರವಿರಬೇಕು.
* ಪ್ರತಿ ಶಾಲೆಗಳು ತನ್ನದೇ ಆದ ಮಾರ್ಗಸೂಚಿಯನ್ನು ಪ್ರಕಟ ಮಾಡಬೇಕು.
* ಶಾಲೆಗಳಲ್ಲಿ ಆಗಾಗ್ಗೆ ಸ್ಯಾನಿಟೈಸ್ ಮಾಡುತ್ತಿರಬೇಕು.
* ಎಲ್ಲಾ ಶಾಲೆಗಳಲ್ಲಿ ವೈದ್ಯರು ಕಡ್ಡಾಯವಾಗಿ ಇರಬೇಕು ಅಥವಾ ಅದಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು.
* ಶಾಲೆ ಆರಂಭದಲ್ಲಿ ಎರಡರಿಂದ ಮೂರು ವಾರಗಳ ಕಾಲ ಹೋಂ ವರ್ಕ್ ನೀಡುವುದು ಬೇಡ.
* ಇನ್ನು ಕೆಲವು ಶಾಲೆಗಳು ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದು, ಅದನ್ನೇ ಮುಂದುವರೆಸುವುದು ಒಳಿತು.

For Quick Alerts
ALLOW NOTIFICATIONS  
For Daily Alerts

English summary
Education ministry released guidelines for school reopening amid Covid-19 in India. Read out the guidelines in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X