ವಾರಕ್ಕೆ 25 ಬಗೆಯ ಪ್ಲಾಸ್ಟಿಕ್ ನೀಡಿ : ಶುಲ್ಕರಹಿತ ಶಿಕ್ಷಣ ಪಡೆಯಿರಿ

ಅಸ್ಸಾಂನ ಗುವಾಹಟಿಯ ಪಮೋಹಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಶುಲ್ಕರಹಿತ ಶಿಕ್ಷಣ ಪಡೆಯುವ ಅವಕಾಶವಿದೆ. ಅದ್ಹೇಗೆ ಅಂತೀರಾ? ಅದಕ್ಕೆ ಇಲ್ಲಿದೆ ಉತ್ತರ. ಈ ಶಾಲೆಯಲ್ಲಿ ಮಕ್ಕಳು ವಾರಕ್ಕೆ 25 ರೀತಿಯ ಪ್ಲಾಸ್ಟಿಕ್ ಅನ್ನು ಕಲೆಹಾಕಿ ತಂದು ಕೊಟ್ಟರೆ ಸಾಕು ಶುಲ್ಕ ಪಾವತಿಸದೇ ಶಿಕ್ಷಣವನ್ನು ಪಡೆಯಬಹುದು.

ಪ್ಲಾಸ್ಟಿಕ್ ನೀಡುವ ಮೂಲಕ ಶುಲ್ಕ ಪಾವತಿಸಿ ಶಿಕ್ಷಣ ಪಡೆಯುವ ಅವಕಾಶ

ಪ್ಲಾಸ್ಟಿಕ್ ರಹಿತ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಸದುದ್ದೇಶದೊಂದಿಗೆ ಮತ್ತು ಅವರಲ್ಲಿ ಪ್ಲಾಸಿಕ್ಟ್ ಬಗೆಗಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಕೂಡ ಮೂಡಿಸಲಾಗುತ್ತಿದೆ.

ಪ್ಲಾಸ್ಟಿಕ್ ನೀಡುವ ಮೂಲಕ ಶುಲ್ಕ ಪಾವತಿಸಿ ಶಿಕ್ಷಣ ಪಡೆಯುವ ಅವಕಾಶ

ಮಕ್ಕಳು ಕಲೆಹಾಕಿದ ಪ್ಲಾಸ್ಟಿಕ್ ಅನ್ನು ಸಂಸ್ಕರಣಾ ಘಟಕಗಳಿಗೆ ರವಾನಿಸಲಾಗುತ್ತದೆ. ಅದರಲ್ಲಿ ಇಟ್ಟಿಗೆಗಳನ್ನು ತಯಾರಿಸಲಾಗುತ್ತದೆ. ಆ ಇಟ್ಟಿಗೆಗಳನ್ನು ಕಟ್ಟಡ ನಿರ್ಮಾಣದ ಕೆಲಸಗಳಿಗೆ ಬಳಸಲಾಗುತ್ತದೆ. ಈ ರೀತಿಯಾಗಿ ತ್ಯಾಜ್ಯ ವಸ್ತುಗಳನ್ನು ಪುನರ್ ಬಳಕೆ ಮಾಡುವ ಉತ್ತಮ ಕೆಲಸದಲ್ಲಿ ಈ ಶಾಲೆ ತೊಡಗಿಕೊಂಡಿದೆ.

ಏರೋ ಎಂಜಿನಿಯರ್ ಮಜಿನ್ ಮುಖ್ತಾರ್ ಮತ್ತು ಅವರ ಪತ್ನಿ ಸಮಾಜ ಸೇವಕಿ ಪರ್ಮಿತಾ ಶರ್ಮಾ ಅವರು 2016 ರಲ್ಲಿ 20 ವಿದ್ಯಾರ್ಥಿಗಳೊಂದಿಗೆ ಈ ಅಕ್ಷರ್ ಫೌಂಡೇಶನ್ ಶಾಲೆಯನ್ನು ಪ್ರಾರಂಭಿಸಿದರು. ಸಂಸ್ಥೆಯು ಪ್ರಸ್ತುತ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತದೆ. ಇದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್‌ಗೆ ಸಂಯೋಜಿತವಾಗಿದೆ.

For Quick Alerts
ALLOW NOTIFICATIONS  
For Daily Alerts

English summary
In assam school students are getting education by paying fees in plastics.For more information read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X