Schools Reopening In These States: ಯಾವೆಲ್ಲಾ ರಾಜ್ಯಗಳಲ್ಲಿ ಇಂದಿನಿಂದ ಶಾಲೆ ಪ್ರಾರಂಭವಾಗಿದೆ ಗೊತ್ತಾ ?

ಕೋವಿಡ್-19 ಕಾರಣದಿಂದಾಗಿ ಇಡೀ ವಿಶ್ವವೇ ನಲುಗಿ ಹೋಗಿದೆ. ಇನ್ನು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಪೆಟ್ಟು ಬಿದ್ದಿದೆ. ಅನೇಕ ರಾಜ್ಯಗಳಲ್ಲಿ ಇನ್ನೂ ಶಾಲೆಗಳು ಪುನರಾರಂಭಗೊಂಡಿಲ್ಲ. ಆದರೆ ದಿನೇ ದಿನೇ ಕೆಲವೆಡೆ ಶಾಲೆಗಳು ಪ್ರಾರಂಭವಾಗುತ್ತಿವೆ. ಅನೇಕ ತಿಂಗಳ ಬಳಿಕ ಇಂದಿನಿಂದ ಯಾವೆಲ್ಲಾ ರಾಜ್ಯಗಳಲ್ಲಿ ಶಾಲೆಗಳು ಪುನರಾರಂಭಗೊಂಡಿವೆ ಎಂಬುದರ ಮಾಹಿತಿ ಇಲ್ಲಿದೆ.

 
ಯಾವೆಲ್ಲಾ ರಾಜ್ಯಗಳಲ್ಲಿ ಇಂದಿನಿಂದ ಶಾಲೆ ಆರಂಭ ?

ಪುದುಚೇರಿ:

ಪುದುಚೇರಿಯಲ್ಲಿ ಒಂಭತ್ತು ತಿಂಗಳುಗಳ ನಂತರ ಖಾಸಗಿ ನಿರ್ವಹಣೆಯ ಸಂಸ್ಥೆಗಳು ಸೇರಿದಂತೆ ಎಲ್ಲಾ ಶಾಲೆಗಳು ಇಂದಿನಿಂದ ಮತ್ತೆ ತೆರೆಯಲ್ಪಟ್ಟಿವೆ. ಪುದುಚೇರಿ ಮತ್ತು ಕಾರೈಕಾಲ್ ಪ್ರದೇಶಗಳಲ್ಲಿ ಇಂದಿನಿಂದ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅರ್ಧ ದಿನದ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಪ್ರಾಂತ್ಯದ ಶಾಲಾ ಶಿಕ್ಷಣ ನಿರ್ದೇಶನಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಶಾಲೆಗಳ ಪೂರ್ಣ ದಿನದ ಕೆಲಸವನ್ನು ಜನವರಿ 18 ರಂದು ಪುನಃಸ್ಥಾಪಿಸಲಾಗುವುದು ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ತರಗತಿಗಳು ನಡೆಯಲಿವೆ.

ಬಿಹಾರ:

ಬಿಹಾರದಲ್ಲಿ ಇಂದಿನಿಂದ 9 ರಿಂದ 12 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಮತ್ತೆ ತೆರೆದಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಮತ್ತು ಸಂಶೋಧನಾ ವಿದ್ಯಾರ್ಥಿಗಳನ್ನು ಕರೆಯಲು ಕಾಲೇಜುಗಳಿಗೆ ಅವಕಾಶ ನೀಡಲಾಗಿದೆ.

ಬಿಹಾರದ ಶಾಲೆಗಳು, ಕೋಚಿಂಗ್ ಸಂಸ್ಥೆಗಳು, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಇತರ ಪದವಿ ಕಾಲೇಜುಗಳನ್ನು ಇಂದಿನಿಂದ ಮತ್ತೆ ತೆರೆಯಲು ಅನುಮತಿ ನೀಡಲಾಗಿದೆ. ಒಟ್ಟಾರೆ ಶೇ 50% ರಷ್ಟು ತರಗತಿಗಳು ಇಂದಿನಿಂದ ಪ್ರಾರಂಭಗೊಂಡಿವೆ.

ಪುಣೆ:

ಪುಣೆಯಲ್ಲಿ 9 ರಿಂದ 12 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಸುರಕ್ಷಾ ಕ್ರಮಗಳೊಂದಿಗೆ ಇಂದಿನಿಂದ ಶಾಲೆ ಪ್ರಾರಂಭವಾಗಿದೆ. ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಿರಬೇಕಿದೆ. ಶಾಲೆಯ ಆವರಣಕ್ಕೆ ಕೋವಿಡ್ ನೆಗೆಟಿವ್ ರಿಪೋರ್ಟ್ ನೊಂದಿಗೆ ಹಾಜರಾಗಬೇಕಿರುತ್ತದೆ.

ನಾಗ್ಪುರ:

ನಾಗ್ಪುರ ಮಹಾನಗರ ಪಾಲಿಕೆ ತನ್ನ ಶಾಲೆಗಳನ್ನು ಇಂದಿನಿಂದ 9 ರಿಂದ 12 ನೇ ತರಗತಿಗಳಿಗೆ ಮತ್ತೆ ತೆರೆಯಲಿದೆ.

For Quick Alerts
ALLOW NOTIFICATIONS  
For Daily Alerts

English summary
In these states schools are reopening from today. do you know want to know which states read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X