Covid Fees in Private Schools: ಕರ್ನಾಟಕ ಖಾಸಗಿ ಶಾಲೆಗಳಲ್ಲಿ ಇನ್ಮುಂದೆ ಕೋವಿಡ್ ಶುಲ್ಕ ಸಂಗ್ರಹ

ಕರ್ನಾಟಕ ರಾಜ್ಯದ ಶಾಲೆಗಳಲ್ಲಿ ಸೆಪ್ಟೆಂಬರ್ 21 ರಿಂದ ತರಗತಿ ಆರಂಭಿಸಲು ಅನುಮತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆಗಳು ಆರಂಭಗೊಳ್ಳುತ್ತಿದ್ದು, ಖಾಸಗಿ ಶಾಲೆಗಳಲ್ಲಿ ಆವರಣ ನೈರ್ಮಲ್ಯೀಕರಣ ಮತ್ತು ಇತರೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ವಹಣಾ ಶುಲ್ಕವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. " ಕೋವಿಡ್ ಶುಲ್ಕ" ಎಂಬ ಹೆಸರಿನಲ್ಲಿ ವಿಶೇಷ ಶುಲ್ಕ ಸಂಗ್ರಹಿಸಲು ಖಾಸಗಿ ಶಾಲೆಗಳು ಮುಂದಾಗಿವೆ.

ಕರ್ನಾಟಕ ಖಾಸಗಿ ಶಾಲೆಗಳು ಕೋವಿಡ್ ಶುಲ್ಕ ಸಂಗ್ರಹಿಸಲು ಯೋಚಿಸಿದೆ

ಸೆಪ್ಟೆಂಬರ್ 21 ರಿಂದ ಶಾಲೆಗಳು ಆರಂಭಗೊಳ್ಳುತ್ತಿದ್ದು, ಸ್ವಯಂಪ್ರೇರಿತ ಆಧಾರದ ಮೇಲೆ ಶಿಕ್ಷರ ಮಾರ್ಗದರ್ಶನ ಪಡೆಯಲು ಶಾಲೆಗಳಿಗೆ ತೆರಳುವ 9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ತದನಂತರ ಖಾಸಗಿ ಶಾಲೆಗಳು ಶಾಲೆಗಳ ಆವರಣವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಮತ್ತು ಶಾಲೆಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಶುಲ್ಕವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸಲು ಈ ಯೋಚನೆ ನಡೆಸಿದೆ.

ಕರ್ನಾಟಕ ಖಾಸಗಿ ಶಾಲೆಗಳು ಕೋವಿಡ್ ಶುಲ್ಕ ಸಂಗ್ರಹಿಸಲು ಯೋಚಿಸಿದೆ

ಪೋಷಕರಿಗೆ ಇದರಿಂದ ಕಷ್ಟವಾಗಬಹುದು ಹಾಗಾಗಿ ಶೇ.೫ ರಷ್ಟು ಶುಲ್ಕ ಹೆಚ್ಚಳ ಮಾಡಲು ಚಿಂತನೆ ನಡೆಸಿದ್ದೇವೆ ಮತ್ತು ನಂತರದ ದಿನಗಳಲ್ಲಿ ಇನ್ನಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರಧಾನ ಕಾರ್ಯದರ್ಶಿ ಡಿ.ಶಶಿ ಕುಮಾರ್ ಹೇಳಿದ್ದಾರೆ. ಅಲ್ಲದೇ ಇದನ್ನು ಪೋಷಕರು ಅರ್ಥ ಮಾಡಿಕೊಳ್ಳಲಿದ್ದಾರೆ ಎಂದು ಭಾವಿಸಿದ್ದೇವೆ. ಈಗಾಗಲೇ 2020-21ರ ಶೈಕ್ಷಣಿಕ ಸಾಲಿಗೆ ಅನೇಕ ಪೋಷಕರು ಶುಲ್ಕವನ್ನು ಪಾವತಿಸರದ ಕಾರಣ ಖಾಸಗಿ ಶಾಲೆಗಳು ಕಠಿಣ ಪರಿಸ್ಥಿತಿಯಲ್ಲಿದ್ದು, ಅನೇಕರ ಉದ್ಯೋಗ ಮತ್ತು ಸಂಬಳಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಾಲೆಗಳಲ್ಲಿ ಎಲ್ಲಾ ರೀತಿಯ ಸ್ವಚ್ಚತೆಯನ್ನು ಕಾಪಾಡಲು ಮತ್ತು ಥರ್ಮಲ್ ಸ್ಕ್ಯಾನಿಂಗ್ ನಂತಹ ಇತರೆ ವಸ್ತುಗಳನ್ನು ಪಡೆಯಲು ಹಣದ ಅಗತ್ಯತೆ ಇರುತ್ತದೆ ಹಾಗಾಗಿ ಈ ಎಲ್ಲಾ ವೆಚ್ಚಗಳಿಗೆ ಕೋವಿಡ್ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಪೋಷಕರ ಅನುಮತಿಯ ಮೇರೆಗೆ ಶಾಲೆಗೆ ಬರಲು ಸಿದ್ದರಾಗಿರುವ ವಿದ್ಯಾರ್ಥಿಗಳಿಂದ ಈ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಪ್ರತಿ ವಿದ್ಯಾರ್ಥಿಗೆ 150/-ರೂ ರಿಂದ 250/-ರೂ/- ಗಳ ವರೆಗೆ ಕೋವಿಡ್ ಶುಲ್ಕವನ್ನು ಸಂಗ್ರಹಿಸಬೇಕಾಗುತ್ತದೆ ಎಂದು ಶಾಂತಿನಿಕೇತನ ಶಾಲೆಯ ಸಂಸ್ಥಾಪಕ ಸುಮಂತ್ ನಾರಾಯಣ್ ಅವರು ಹೇಳಿದ್ದಾರೆ.

ಕರ್ನಾಟಕ ಖಾಸಗಿ ಶಾಲೆಗಳು ಕೋವಿಡ್ ಶುಲ್ಕ ಸಂಗ್ರಹಿಸಲು ಯೋಚಿಸಿದೆ

ಈಗಲೇ ಶಾಲೆಗಳನ್ನು ತೆರೆಯಬೇಡಿ:

ಶಾಲೆಗಳನ್ನು ಇನ್ನೂ ತೆರೆಯಬಾರದು ಎಂದು ಹಲವಾರು ಆರೋಗ್ಯ ತಜ್ಞರು ಮತ್ತು ಪೋಷಕರು ಅಭಿಪ್ರಾಯಪಟ್ಟಿದ್ದಾರೆ. "ನಾವು ಮಕ್ಕಳ ಜೀವದ ಆಟವಾಡುವ ಪ್ರಯತ್ನ ಮಾಡಬಾರದು ಮತ್ತು ಈಗ ನಾವು ಇನ್ನಷ್ಟು ಜಾಗರೂಕರಾಗಬೇಕಿರುವ ಅವಶ್ಯಕತೆ ಇದೆ" ಎಂದು ರಾಜ್ಯದ COVID-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಗಿರಿಧರ ಎಂದು ಟ್ವೀಟ್ ಮಾಡಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
In karnataka schools will start from september 21 for 9 to 12 classes. This year private schools planning to introduce covid fees. Know more.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X