ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಆನ್-ಲೈನ್ ನಲ್ಲಿ ಲಭ್ಯ

Posted By:

ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದಿದ್ದು ಮೌಲ್ಯಮಾಪನಕ್ಕೆ ಇನ್ನು ಕೆಲವೇ ದಿನಗಳ ಬಾಕಿ ಉಳಿದಿವೆ. ಪರೀಕ್ಷೆಯ ಉತ್ತರ ಪತ್ರಿಕೆಗಳ ಮಾದರಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿದ್ದು ಸಾರ್ವಜನಿಕರು ಪಡೆಯಬಹುದಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯ 34 ವಿಷಯಗಳ ಮಾದರಿ ಉತ್ತರ ಪತ್ರಿಕೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ. ಅಲ್ಲದೇ ಉತ್ತರ ಪತ್ರಿಕೆಗೆ ಸಂಬಂಧಿಸಿದಂತೆ ಏನಾದರು ಆಕ್ಷೇಪಣೆಗಳಿದ್ದಲ್ಲಿ ಆನ್-ಲೈನ್ ಮೂಲಕವೇ ಅದನ್ನು ಸಲ್ಲಿಸಬಹುದಾಗಿದೆ.

ಉತ್ತರ ಪತ್ರಿಕೆ ಆನ್-ಲೈನ್ ನಲ್ಲಿ ಲಭ್ಯ

ಉತ್ತರ ಪತ್ರಿಕೆಯನ್ನು ಪಡೆಯುವ ವಿಧಾನ

  • ಅಸಕ್ತರು ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಬೇಕು
  •  "Scheme of Valuation(Model Answers ) for II PUC March 2017 Examination " ಲಿಂಕ್ ಕ್ಲಿಕ್ ಮಾಡಬೇಕು
  • 34 ವಿಷಯಗಳ ಪಟ್ಟಿ ಗೋಚರಿಸುತ್ತದೆ
  • ಆಯಾ ವಿಷಯದ ಮೇಲೆ ಕ್ಲಿಕ್ ಮಾಡಿದರೆ ಮಾದರಿ ಉತ್ತರ ಪತ್ರಿಕೆಗಳು ತೆರೆದುಕೊಳ್ಳುತ್ತದೆ

ಆಕ್ಷೇಪಣೆ

ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉತ್ತರ ಪತ್ರಿಕೆಗೆ ಸಂಬಂಧಿಸಿದಂತೆ ಏನಾದರು ಆಕ್ಷೇಪಣೆಗಳಿದ್ದಲ್ಲಿ ನೂರು ಪದದ ಮಿತಿಯೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಆಕ್ಷೇಪಣೆ ಸಲ್ಲಿಸುವ ವಿಧಾನ

  • ಆಕ್ಷೇಪಣೆ ಸಲ್ಲಿಸಲಿಚ್ಚಿಸುವವರು ವೆಬ್ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬೇಕು
  • ನೋಂದಾಯಿಸಿಕೊಂಡ ನಂತರ ಲಾಗಿನ್ ಆಗಬೇಕು
  • ಆಕ್ಷೇಪಣೆಗೆ ಸಂಬಂಧಿಸಿದಂತೆ ಕೊಟ್ಟಿರುವ ಜಾಗದಲ್ಲಿ ನೂರು ಪದಗಳ ಮಿತಿಯಲ್ಲಿ ಬರೆದು Submit ಬಟನ್ ಕ್ಲಿಕ್ ಮಾಡಬೇಕು.

ಮೌಲ್ಯಮಾಪನ

ಈ ಬಾರಿಯ ದ್ವಿತೀಯ ಪಿಯುಸಿ ಮೌಲ್ಯಮಾಪನವು ಏಪ್ರಿಲ್ 04 ರಿಂದ ಆರಂಭಗೊಳ್ಳಲಿವೆ.

ಸುಗಮ ಮೌಲ್ಯಮಾಪನಕ್ಕೆ ಸಜ್ಜು

ಪ್ರತಿ ವರ್ಷ ಮೌಲ್ಯಮಾಪನ ವೇಳೆ ಉಪನ್ಯಾಸಕರು ಪ್ರತಿಭಟನೆ ಮಾಡುತ್ತ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತಿದ್ದರು, ಇದರಿಂದ ಮೌಲ್ಯಮಾಪನ ವಿಳಂಬವಾಗುವ ಸಾದ್ಯತೆಯಿಂದ ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ಇಲಾಖೆ ಗೊಂದಲಕ್ಕೀಡಾಗುತ್ತಿತ್ತು ಆದರೆ ಈ ಬಾರಿ ಉಪನ್ಯಾಸಕರ ಬೇಡಿಕೆ ಇಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಹೀಗಾಗಿ ಯಾವುದೇ ಬಹಿಷ್ಕಾರಗಳು ನಡೆಯದಂತೆ ಸುಗಮ ಮೌಲ್ಯಮಾಪನ ನಡೆಯಲಿದೆ.

ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ಜಿ. ಕುಮಾರ ನಾಯ್ಕ್‌ ವರದಿ ಪ್ರಕಾರ ಎರಡು ವೇತನ ಬಡ್ತಿ ನೀಡುವಂತೆ ಆಗ್ರಹಿಸಿ ಪದವಿ ಪೂರ್ವ ಉಪನ್ಯಾಸಕರು ಪ್ರತಿಭಟನೆ ಆರಂಭಿಸಿದ್ದರು. ಈ ಸಂಬಂಧ ಮುಖ್ಯಮಂತ್ರಿ ಜೊತೆ ಇತ್ತೀಚೆಗೆ ನಡೆಸಿದ ಮಾತುಕತೆ ಫಲಪ್ರದವಾಗಿರಲಿಲ್ಲ. ಬೇಡಿಕೆ ಈಡೇರಿಸದಿದ್ದರೆ ಕಳೆದ ವರ್ಷದಂತೆ ಮೌಲ್ಯಮಾಪನ ಬಹಿಷ್ಕರಿಸಲಾಗುವುದು ಎಂದು ಉಪನ್ಯಾಸಕರು ಎಚ್ಚರಿಕೆ ನೀಡಿದ್ದರು.

ಉಪನ್ಯಾಸಕರ ಬೇಡಿಕೆ ಈಡೇರಿಸುವುದಾಗಿ ಸಚಿವರು ಲಿಖಿತ ಭರವಸೆ ನೀಡಿದ್ದಾರೆ. ಹೀಗಾಗಿ ಮೌಲ್ಯಮಾಪನ ಬಹಿಷ್ಕಾರವನ್ನು ಸದ್ಯಕ್ಕೆ ಮುಂದೂಡಿದ್ದೇವೆ ಎಂದು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.

English summary
Karnataka second puc model answer paper released in its official website. if any objections are there in given answers lecturers, students can submit through online.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia