ವಾಟ್ಸಾಪ್, ಫೇಸ್ಬುಕ್ ಬಳಸುವುದೇ ಉದ್ಯೋಗವಾದಾಗ!

ಫೇಸ್ಬುಕ್, ವಾಟ್ಸಾಪ್ ಮೂಲಕವೇ ಸಾಧ್ಯವಾದಷ್ಟು ಗ್ರಾಹಕರನ್ನು ತಲುಪಲು ಎಸ್ಇಒಗಳ ಹುದ್ದೆಗಳು ಸೃಷ್ಟಿಯಾಗುತ್ತಿವೆ. ಎಸ್ಇಒ ಕೆಲಸಕ್ಕೆ ತರಬೇತಿ ನೀಡುವ ಹಲವು ಸಂಸ್ಥೆಗಳು ಕೂಡ ನಗರಗಳಲ್ಲಿ ತಲೆ ಎತ್ತಿವೆ.

By Kavya

ತಂತ್ರಜ್ಞಾನ ದಿನೇ ದಿನೇ ಸಾಕಷ್ಟು ಬದಲಾವಣೆಗಳಾಗುತ್ತಿದ್ದು ಅದರ ನೇರ ಪರಿಣಾಮ ಉದ್ಯೋಗದ ಮೇಲೂ ಬೀರುತ್ತಿದೆ ಅಲ್ಲದೇ ಉದ್ಯೋಗ ಕ್ಷೇತ್ರದಲ್ಲಿ ಅನೇಕ ಮಾರ್ಪಾಡುಗಳಾಗುತ್ತಿವೆ.

ಭವಿಷ್ಯ ರೂಪಿಸುವ ಇ- ಬಿಸಿನೆಸ್ ಎನ್ನೋ ಟ್ರೆಂಡಿ ಶಿಕ್ಷಣ ಭವಿಷ್ಯ ರೂಪಿಸುವ ಇ- ಬಿಸಿನೆಸ್ ಎನ್ನೋ ಟ್ರೆಂಡಿ ಶಿಕ್ಷಣ

ಅದರಲ್ಲೂ ಸುಲಭವಾಗಿ ಉದ್ಯೋಗಾವಕಾಶ ಸೃಷ್ಟಿಸಿಕೊಳ್ಳುವ ಅವಕಾಶವೂ ಇಂದಿನ ದಿನಗಳಲ್ಲಿ ಸಾಕಷ್ಟಿದೆ. ಅವುಗಳಲ್ಲಿ ಎಸ್ಇಒ (ಸರ್ಚ್ ಇಂಜಿನ್ ಓಪ್ಟಿಮೈಸೇಷನ್) ಹುದ್ದೆ ಕೂಡ ಒಂದು.

2018 ಇ-ಲರ್ನಿಂಗ್ ಯುಗ: ಇಂಟರ್ನೆಟ್, ಸ್ಮಾರ್ಟ್ ಫೋನ್ ನಿಂದ ಬದಲಾಗುತ್ತಿದೆ ಶಿಕ್ಷಣ2018 ಇ-ಲರ್ನಿಂಗ್ ಯುಗ: ಇಂಟರ್ನೆಟ್, ಸ್ಮಾರ್ಟ್ ಫೋನ್ ನಿಂದ ಬದಲಾಗುತ್ತಿದೆ ಶಿಕ್ಷಣ

ಉದ್ಯೋಗ ಸೃಷ್ಟಿಸುವ ಎಸ್ಇಒ

ಇಂದು ಸೋಶಿಯಲ್ ಮೀಡಿಯಾ ಜನರನ್ನು ಸುಲಭವಾಗಿ ತಲುಪುವ ಅತ್ಯಂತ ಪ್ರಭಾವಿ ಮಾಧ್ಯಮವಾಗಿದೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣವು ಜನ ಜೀವನದ ಒಂದು ಭಾಗವೇ ಆಗಿದೆ.

ಇಂದಿನ ಬಹುತೇಕ ಜನರು ಅತಿ ಹೆಚ್ಚು ಸಮಯವನ್ನು ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿರುವುದನ್ನು ಅರಿತ ದೊಡ್ಡ ದೊಡ್ಡ ಉದ್ಯಮಗಳು ಸಾಮಾಜಿಕ ಜಾಲತಾಣಗಳ ಮೂಲಕ (ಎಸ್ಇಒ) ಗ್ರಾಹಕರನ್ನು ತಮ್ಮತ್ತ ಆಕರ್ಷಿಸುವ ಪ್ರಯತ್ನ ಮಾಡುತ್ತಿವೆ.

ಗ್ರೂಪ್ ಸ್ಟಡಿಗೆ ಸಹಕಾರಿಗುವ ಸೋಷಿಯಲ್ ಮೀಡಿಯಾಗ್ರೂಪ್ ಸ್ಟಡಿಗೆ ಸಹಕಾರಿಗುವ ಸೋಷಿಯಲ್ ಮೀಡಿಯಾ

ಫೇಸ್ಬುಕ್, ವಾಟ್ಸಾಪ್ ಮೂಲಕವೇ ಸಾಧ್ಯವಾದಷ್ಟು ಗ್ರಾಹಕರನ್ನು ತಲುಪಲು ಎಸ್ಇಒ ಗಳ ಹುದ್ದೆಗಳು ಸೃಷ್ಟಿಯಾಗುತ್ತಿವೆ. ಎಸ್ ಇ ಒ ಕೆಲಸಕ್ಕೆ ತರಬೇತಿ ನೀಡುವ ಹಲವು ಸಂಸ್ಥೆಗಳು ಕೂಡ ನಗರಗಳಲ್ಲಿ ತಲೆ ಎತ್ತಿವೆ.

ಎಸ್‌ಇಒ (ಸರ್ಚ್ ಇಂಜಿನ್ ಓಪ್ಟಿಮೈಸೇಷನ್) ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಇದನ್ನು ಕಲಿಯಲು ಅವಕಾಶವಿದೆ. ಕೀ ವರ್ಡ್‌ ಮ್ಯಾನೇಜ್‌ಮೆಂಟ್‌, ರಿಸರ್ಚ್‌, ಆನ್‌-ಆಫ್‌ ಪೇಜ್‌ ಆಪ್ಟಿಮೈಸೇಶನ್‌, ವೆಬ್‌ಸೈಟ್‌ ಮ್ಯಾನೇಜ್‌ಮೆಂಟ್‌, ಲಿಂಕ್‌ ಬಿಲ್ಡಿಂಗ್‌, ಯುಆರ್‌ಎಲ್‌ ಮ್ಯಾನೇಜ್‌ಮೆಂಟ್‌, ಪ್ಲಾನಿಂಗ್‌ ಆಂಡ್‌ ಮಾರ್ಕೆಟಿಂಗ್‌ ವೆಬ್‌ಸೈಟ್‌ ಮತ್ತು ಅನಲೈಟಿಕ್ಸ್‌ ಮೊದಲಾದ ಅಂಶಗಳನ್ನು ಇದರಲ್ಲಿ ಅಧ್ಯಯನ ಮಾಡಲಾಗುತ್ತದೆ.

ವರ್ಷದಿಂದ ವರ್ಷಕ್ಕೆ ಸರ್ಚ್‌ ಎಂಜಿನ್‌ ಬಳಕೆ ಹೆಚ್ಚುತ್ತಿದೆ. ಇದು ಎಸ್‌ಇಒಗಳಿಗೆ ಹೆಚ್ಚಿನ ಅವಕಾಶ ಒದಗಿಸಲು ನೆರವಾಗುತ್ತದೆ. ಇನ್ನು ದೊಡ್ಡ ಬ್ರಾಂಡಿನ ಜಾಹೀರಾತು ಕಂಪನಿಗಳು ದೇಶೀಯವಾಗಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಎಸ್‌ಇಒ ಬಗ್ಗೆ ಹೆಚ್ಚು ಒತ್ತು ನೀಡುತ್ತಿವೆ. ಎಸ್‌ಇಒಗಳನ್ನು ಬಳಸಿಕೊಳ್ಳುತ್ತಿರುವ ಸಾಂಪ್ರದಾಯಿಕ ಹಾಗೂ ನೇರ ಮಾರುಕಟ್ಟೆದಾರರ ಸಂಖ್ಯೆ ಹೆಚ್ಚುತ್ತಿದೆ.

ಅಮೆಜಾನ್, ಫ್ಲಿಪ್ಕಾರ್ಟ್, ಸ್ನಾಪ್‌ಡೀಲ್ ನಂತಹ ಆನ್ಲೈನ್ ವಹಿವಾಟುಗಳ ಸಂಖ್ಯೆ ಹೆಚ್ಚಿದಂತೆ ಎಸ್ ಇ ಒ ಗಳ ಬೇಡಿಕೆ ಹೆಚ್ಚಾಗಿದೆ. ಗೂಗಲ್‌ನಲ್ಲಿ ಆರ್ಗಾನಿಕ್‌ ಎಸ್‌ಇಒ ಲಿಸ್ಟಿಂಗ್‌ನಿಂದಾಗಿ ಜಾಹೀರಾತುಗಳಿಗಿಂತಲೂ ಇವು ಹೆಚ್ಚು ವಿಶ್ವಾಸಾರ್ಹ ಎಂಬ ಹೆಗ್ಗಳಿಕೆ ಪಡೆದುಕೊಳ್ಳುತ್ತಿವೆ.

ಗೂಗಲ್‌, ಯಾಹೂ, ಬಿಂಗ್‌ ಇತ್ಯಾದಿಗಳನ್ನು ಅವಲಂಬಿಸಿ ಆಪ್ಟಿಮೈಸ್‌ ಮಾಡುವ ಎಸ್‌ಇಒ ಒಂದು ಕಲೆ ಮತ್ತು ವಿಜ್ಞಾನ ಎರಡನ್ನೂ ಒಳಗೊಂಡ ಉದ್ಯೋಗವಾಗಿದೆ. ಅಂದರೆ ಕೋಡ್‌, ಇನ್‌ಫಾರ್ಮೇಶನ್‌ ಆರ್ಕಿಟೆಕ್ಚರ್‌ ಮತ್ತು ಯೂಸರ್‌ ಎಕ್ಸ್‌ಪೀರಿಯನ್ಸ್‌ ಮೊದಲಾದ ವಿಜ್ಞಾನ ಮತ್ತು ತಂತ್ರಜ್ಞಾನ ಆಧರಿತ ಮಾಹಿತಿ ಜೊತೆಗೆ ಉದ್ಯಮವೊಂದನ್ನು ಬೆಳೆಸುವುದು, ಗ್ರಾಹಕರ ನಡವಳಿಕೆಯನ್ನು ಗುರುತಿಸಿ ಮೌಲ್ಯಮಾಪನ ಮಾಡುವುದು ಇದರ ಪ್ರಮುಖ ಅಂಶವಾಗಿದೆ.

ಈ ಎಲ್ಲಾ ಕಾರಣಗಳಿಂದ ಎಸ್‌ಇಒ ಬೆಳವಣಿಗೆಗೆ ಅಪಾರ ಅವಕಾಶ ಒದಗಿ ಬಂದಿದೆ. ಆರಂಭಿಕ ಹಂತದಲ್ಲಿ ಭಾರತದಂತಹ ದೇಶಗಳಲ್ಲಿ ವಾರ್ಷಿಕ 1.8 ಲಕ್ಷದಿಂದ 4 ಲಕ್ಷ ರೂ. ವೇತನ ಪಡೆಯಬಹುದಾಗಿದ್ದು, ಮಹಿಳೆಯರಿಗೊಂತು ಎಸ್ಇಒ ವರದಾನವಾಗಿದ್ದು, ಅಲ್ಪ ಶ್ರಮದಲ್ಲಿ ಹೆಚ್ಚು ಆದಾಯ ತರುವ ಉದ್ಯಮವಾಗಿದೆ.

For Quick Alerts
ALLOW NOTIFICATIONS  
For Daily Alerts

English summary
SEO or search engine optimization, is a powerful marketing approach to accomplishing overall success for your business, both offline and online.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X