World Tourism Day 2022 : ಇದರ ಹಿನ್ನೆಲೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

1997ರ ನಂತರ ಪ್ರತಿ ವರ್ಷವೂ ಒಂದೊಂದು ರಾಷ್ಟ್ರವನ್ನು ಆಯ್ಕೆ ಮಾಡಿಕೊಂಡು ಅಧಿಕೃತವಾಗಿ ಪ್ರವಾಸೋದ್ಯಮ ದಿನ ಆಚರಿಸುವ ನಿರ್ಧಾರ ಕೈಗೊಂಡಿತು. ಈ ಕತಾರ್ ನಲ್ಲಿ "ಅಭಿವೃದ್ದಿಗಾಗಿ ಸುಸ್ಥಿರ ಪ್ರವಾಸ" ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

By Kavya

ಇಂದು ವಿಶ್ವ ಪ್ರವಾಸೋದ್ಯಮ ದಿನ, ಪ್ರವಾಸ ಎಂದರೆ ಎಲ್ಲರಿಗೂ ಇಷ್ಟ ಕಾರಣ ಅದು ಹಲವು ವೈವಿದ್ಯತೆಗಳ ಪರಿಚಯ ಮತ್ತು ವಿಭಿನ್ನ ಅನುಭವಗಳನ್ನು ನೀಡುತ್ತದೆ. ಮೈಮನಸ್ಸನ್ನು ಉಲ್ಲಾಸಗೊಳಿಸುವಲ್ಲಿ ಪ್ರವಾಸದ ಪಾತ್ರ ದೊಡ್ಡದು.

ವಿಶ್ವ ಪ್ರವಾಸೋದ್ಯಮ ದಿನದ ಹಿನ್ನೆಲೆ ಗೊತ್ತಾ ?..

ದೇಶ ಸುತ್ತು-ಕೋಶ ಓದು ಎನ್ನುವ ಮಾತನ್ನು ಈ ದಿನ ಸದಾ ನೆನಪಿಸುತ್ತಲೇ ಇರುತ್ತದೆ. ಏಕೆಂದರೆ ಒಂದು ಪ್ರವಾಸದಲ್ಲಿ ಸಿಗುವ ಅನುಭವ ಪುಸ್ತಕ ಓದುವುದಕ್ಕಿಂತಲು ಹೆಚ್ಚಿನದು ಎಂದರೆ ತಪ್ಪಾಗಲಾರುದು.

ವ್ರತ್ತಿಪರ ಪ್ರವಾಸೋದ್ಯಮಿಗಳನ್ನು ಸೃಷ್ಟಿಸುತ್ತಿರುವ ಪ್ರವಾಸೋದ್ಯಮ ಕೋರ್ಸ್ವ್ರತ್ತಿಪರ ಪ್ರವಾಸೋದ್ಯಮಿಗಳನ್ನು ಸೃಷ್ಟಿಸುತ್ತಿರುವ ಪ್ರವಾಸೋದ್ಯಮ ಕೋರ್ಸ್

ಇಂದು ಪ್ರವಾಸ ಉದ್ಯಮವಾಗಿ ಪ್ರವಾಸೋದ್ಯಮವಾಗಿದೆ, ಕಾರಣ ಅದರಲ್ಲಿನ ಅನೇಕ ಅನುಕೂಲಗಳು. ಇಂದು ಭಾರತದಲ್ಲಿ ಪ್ರವಾಸೋದ್ಯಮವು ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ.

ಪ್ರವಾಸ ಎಂದರೆ ಅದು ಕೇವಲ ಸುತ್ತಾಟವಲ್ಲ. ಅಲ್ಲಿ ಒಂದು ಕಲಿಕೆ ಇರುತ್ತದೆ. ಕೃಷಿ ಪ್ರವಾಸೋದ್ಯಮ, ಅಡುಗೆ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಪರಂಪರೆಯ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ನೌಕಾಯಾನ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮ ಹೀಗೆ ಹಲವು ಬಗೆಯ ಪ್ರವಾಸಗಳಿವೆ.

ಪ್ರವಾಸೋದ್ಯಮದಿಂದ ಸಾರಿಗೆ, ಹೊಟೇಲ್ ಉದ್ಯಮಕ್ಕೆ ನೇರ ಲಾಭ ತರುವುದರಿಂದ ಅಲ್ಲಿ ಹೆಚ್ಚು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ. ಅಲ್ಲದೇ ದೇಶಕ್ಕೆ ಆರ್ಥಿಕ ಲಾಭವನ್ನು ಉಂಟು ಮಾಡುತ್ತದೆ.

ಪ್ರವಾಸೋದ್ಯಮ ದಿನದ ಹಿನ್ನಲೆ

1997 ರಿಂದ ಅಚರಣೆಯಲ್ಲಿರುವ ಈ ದಿನವನ್ನು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) 1980ರಲ್ಲಿ ಸೆಪ್ಟಂಬರ್ 27ನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಘೋಷಣೆ ಮಾಡಿತು.

ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ವೃದ್ಧಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ಸೆಪ್ಟಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದೆ.

1997ರ ನಂತರ ಪ್ರತಿ ವರ್ಷವೂ ಒಂದೊಂದು ರಾಷ್ಟ್ರವನ್ನು ಆಯ್ಕೆ ಮಾಡಿಕೊಂಡು ಅಧಿಕೃತವಾಗಿ ಪ್ರವಾಸೋದ್ಯಮ ದಿನ ಆಚರಿಸುವ ನಿರ್ಧಾರ ಕೈಗೊಂಡಿತು. ಈ ಕತಾರ್ ನಲ್ಲಿ "ಅಭಿವೃದ್ದಿಗಾಗಿ ಸುಸ್ಥಿರ ಪ್ರವಾಸ" ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಭಾರತದಲ್ಲಿ ಪ್ರವಾಸೋದ್ಯಮ ಸ್ಥಿತಿ

ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಭಾರತದ ಸಂಸ್ಕೃತಿಗೆ ಮಾರುಹೋಗಿರುವ ವಿದೇಶಿಗರು ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹಾಗೆಯೇ ಭಾರತೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.

ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ. ಇದು ರಾಷ್ಟ್ರೀಯ ಜಿಡಿಪಿಗೆ 6.23% ಹಾಗೂ ಭಾರತದಲ್ಲಿ ಒಟ್ಟು ಉದ್ಯೋಗಕ್ಕೆ 8.78%ರಷ್ಟು ಕೊಡುಗೆ ನೀಡುತ್ತದೆ. ವಾರ್ಷಿಕ 5 ದಶಲಕ್ಷಕ್ಕಿಂತಲೂ ಹೆಚ್ಚು ವಿದೇಶೀ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದಾರೆ. ಭಾರತದ ಪ್ರವಾಸೋದ್ಯಮ ಸೇವಾ ವಲಯವು 2008ರಲ್ಲಿ ಸುಮಾರು US$100 ಶತಕೋಟಿ ಆದಾಯ ಗಳಿಸಿತು. ವಾರ್ಷಿಕ 9.4% ಅಭಿವೃದ್ಧಿ ದರದಲ್ಲಿ, 2018ರೊಳಗೆ US$275.5 ಶತಕೋಟಿ ಆದಾಯ ತರುವ ಸಾಧ್ಯತೆಯಿದೆ.

ವಿಶ್ವ ಪರ್ಯಟನ ಮತ್ತು ಪ್ರವಾಸೋದ್ಯಮ ಸಮಿತಿ ಯ ಪ್ರಕಾರ, ಪರ್ಯಟನ ವಲಯದಲ್ಲಿ ಅತಿ ಹೆಚ್ಚು ಅಭಿವೃದ್ಧಿಯ ಸಾಮರ್ಥ್ಯ ಹೊಂದಿರುವ ಭಾರತ ಉಪಖಂಡಕ್ಕೆ ಮುಂದಿನ ಹತ್ತು ವರ್ಷಗಳ ವರೆಗೆ ಪ್ರವಾಸೋದ್ಯಮಕ್ಕೆ ಪೂರಕವಾದ ಅಗತ್ಯ ಸಾಮರ್ಥ್ಯವಿದೆ. ವಿಶ್ವದಲ್ಲೇ ಅತಿ ಜನಪ್ರಿಯ ಪ್ರವಾಸೀ ಕೇಂದ್ರಬಿಂದುವಾಗಿ ಹೊರಹೊಮ್ಮಲಿದೆ. ಭಾರತ ದರಗಳ ಸ್ಫರ್ಧೆಯಲ್ಲಿ ಆರನೆಯ ಸ್ಥಾನ ಹಾಗೂ ಸುರಕ್ಷತೆ ಹಾಗೂ ಭದ್ರತೆಯ ವಿಚಾರದಲ್ಲಿ 39ನೆಯ ಸ್ಥಾನದಲ್ಲಿದೆ.

For Quick Alerts
ALLOW NOTIFICATIONS  
For Daily Alerts

English summary
Since 1980, the United Nations World Tourism Organization has celebrated World Tourism Day on September 27. This date was chosen as on that day in 1970, the Statutes of the UNWTO were adopted. The adoption of these Statutes is considered a milestone in global tourism.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X