ರಾಜಧಾನಿ ಬೆಂಗಳೂರಿನ 104 ಪ್ರದೇಶದಲ್ಲಿ ಪದವೀಧರರೇ ಇಲ್ಲ

Posted By:

ಇದು ಆಶ್ವರ್ಯವಾದರು ಸತ್ಯ! ರಾಜ್ಯ ರಾಜಧಾನಿಯ 104 ಪ್ರದೇಶಗಳಲ್ಲಿ ಪದವೀಧರರೇ ಇಲ್ಲದಿರುವ ಮಾಹಿತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬಹಿರಂಗ ಪಡಿಸಿದೆ.

200 ಕ್ಕೂ ಅಧಿಕ ಜನಸಂಖ್ಯೆ ಇರುವ ಪ್ರದೇಶಗಳ ಸಮೀಕ್ಷೆ ನಡೆಸಲಾಗಿದ್ದು, ಅವುಗಳಲ್ಲಿ 104 ಪ್ರದೇಶಗಳಲ್ಲಿ ಶೂನ್ಯ ಪದವವೀಧರರಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಮಂಚನಹಳ್ಳಿ, ಹೊಸಹಳ್ಳಿ, ಅರೆಹಳ್ಳಿ ಮತ್ತು ಪಟ್ಟಣಗೆರೆ ಗೊಲ್ಲಹಳ್ಳಿಗಳಲ್ಲಿ ಪದವೀಧರರ ಕೊರತೆ ಇದೆ.

ಬೆಂಗಳೂರಿನ 104 ಪ್ರದೇಶದಲ್ಲಿ ಪದವೀಧರರೇ ಇಲ್ಲ

ಇತ್ತೀಚೆಗೆ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಸಮೀಕ್ಷೆಯಲ್ಲಿ ಪದವೀಧರರೇ ಇಲ್ಲದ ಗ್ರಾಮಗಳ ಪಟ್ಟಿಯನ್ನು ರಾಜ್ಯ ಸರ್ಕಾರದ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಾಲೇಜು ಶಿಕ್ಷಣ ಇಲಾಖೆಗೆ ನೀಡಿದ್ದು, ಒಬ್ಬ ಪದವೀಧರನೂ ಇಲ್ಲದ 2022 ಗ್ರಾಮಗಳನ್ನು ಪಟ್ಟಿ ಮಾಡಲಾಗಿತ್ತು.

ಆ ಗ್ರಾಮಗಳಲ್ಲಿ ವಿಶೇಷ ನೋಡಲ್ ಅಧಿಕಾರಿಗಳನ್ನು ನೇಮಿಸಿ ಪದವೀಧರರನ್ನು ರೂಪಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಆದರೆ ರಾಜಧಾನಿಯಲ್ಲೇ ಇಷ್ಟರ ಮಟ್ಟಿಗೆ ಪದವೀಧರರಿಲ್ಲದಿರುವುದು ಆಶ್ವರ್ಯ ಉಂಟು ಮಾಡಿದೆ.

ಬೆಂಗಳೂರು ಗ್ರಾಮೀಣ ಭಾಗದಲ್ಲಿ ಪದವಿ ಪೂರ್ಣಗೊಳಿಸದವರ ಸಂಖ್ಯೆ

ಮಂಚನಹಳ್ಳಿ-1796
ಹೊಸಹಳ್ಳಿ-881
ಅರೆಹಳ್ಳಿ-842
ಪಟ್ನಗೆರೆ ಗೊಲ್ಲಹಳ್ಳಿ-252
ಚಿನಕುರ್ಚಿ-949
ಲಕ್ಕೇನಹಳ್ಳಿ-857
ಚಗಲಹಟ್ಟಿ-704
ಬೈಲಹಳ್ಳಿ-402

ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ, ಬಡತನದಿಂದಾಗಿ ಬಹುತೇಕುರು ಅರ್ಧಕ್ಕೆ ಓದನ್ನು ನಿಲ್ಲಿಸಿದ್ದಾರೆ. ಇನ್ನು ಕೆಲವು ಕಡೆ ಬಾಲಕಿಯರಿಗೆ ಬೇಗನೆ ವಿವಾಹಗಳನ್ನು ಮಾಡಿರುವುದರಿಂದ ಪದವೀಧರರ ಕೊರೆತೆ ಇದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾದ ಅಜಯ್ ನಾಗಭೂಷಣ್ ತಿಳಿಸಿದ್ದಾರೆ.
ಈಗ ಸಿಕ್ಕಿರುವ ಮಾಹಿತಿಯನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲಯೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ನಾಗಭೂಷಣ್ ತಿಳಿಸಿದ್ದಾರೆ.

ಪದವೀಧರರಿಲ್ಲದ ಜಿಲ್ಲೆಗಳು

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಾಮನರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕಲಬುರ್ಗಿ, ಹಾಸನ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಉತ್ತರಕನ್ನಡ, ಯಾದಗಿರಿ

English summary
over 2,070 villages in Karnataka have zero graduates. But the fact that even Bengaluru, the country’s IT capital, has such pockets came as a surprise to the Department of Collegiate Education.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia