Engineers Day 2022 : 'ಭಾರತ ರತ್ನ' ಮತ್ತು 'ಸರ್' ಬಿರುದುಗಳ ಹಿಂದಿರುವ ಎಂ ವಿಶ್ವೇಶ್ವರಯ್ಯನವರ ಶ್ರಮ

By Kavya

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ 160ನೇ ಜನ್ಮದಿನಾಚರಣೆ. ಬಡ ಕುಟುಂಬದಲ್ಲಿ ಜನಿಸಿ, ಬಡತನವನ್ನು ಗೆದ್ದು, ಭಾರತ ರತ್ನ ಪಡೆದ ವಿಶ್ವೇಶ್ವರಯ್ಯನವರ ಸಾಧನೆ ಮತ್ತು ವ್ಯಕ್ತಿತ್ವ ಪದಗಳಿಗೆ ನಿಲುಕದ್ದು.

 

ಸರ್ ಎಂ ವಿ ಶ್ರಮಪಡದಿದ್ದರೇ.. ಭಾರತ ನಿರ್ಮಾಣ ಮಾಡದಿದ್ದರೇ..!ಸರ್ ಎಂ ವಿ ಶ್ರಮಪಡದಿದ್ದರೇ.. ಭಾರತ ನಿರ್ಮಾಣ ಮಾಡದಿದ್ದರೇ..!

ವಿಶ್ವೇಶ್ವರಯ್ಯನವರು ಜನಿಸಿದ್ದು ಸೆಪ್ಟೆಂಬರ್ 15,1861 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ ಬ್ರಾಹ್ಮಣ ಕುಟುಂಬದಲ್ಲಿ. ವಿಶ್ವೇಶ್ವರಯ್ಯನವರ ತಂದೆ 'ಶ್ರೀನಿವಾಸ ಶಾಸ್ತ್ರಿ', ತಾಯಿ 'ವೆಂಕಟಲಕ್ಷ್ಮಮ್ಮ'. ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು.

ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. 1881ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.

 ಸರ್ ಎಂ ವಿಶ್ವೇಶ್ವರಯ್ಯ ಸಾಗಿ ಬಂದ ಹಾದಿ

ವಿಶ್ವೇಶ್ವರಯ್ಯನವರು ನಂತರ 1884 ರಲ್ಲಿ ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು ಆನಂತರ ಭಾರತದ ನೀರಾವರಿ ಮಂಡಲಿಯಲ್ಲಿ ಸೇವೆಗೆ ಸೇರಿ ದಖನ್ ಪ್ರಾಂತ್ಯದಲ್ಲಿ ಅತ್ಯುತ್ತಮ ನೀರಾವರಿ ಪದ್ಧತಿಯನ್ನು ಜಾರಿಗೆ ತಂದರು.

1903ರಲ್ಲಿ ಅವರು ಪುಣೆಯ ಹತ್ತಿರದ ಖಡಕ್ ವಾಸ್ಲಾ ರಿಸರ್ವಾಯರ್ ನಲ್ಲಿ ಸ್ವಯಂಚಾಲಿತ ನೀರು ಬಿಡುವ ಗೇಟ್ ನಿರ್ಮಿಸಿದರು. ನಂತರ ಇದನ್ನೇ ಗ್ವಾಲಿಯರ್‍ನ ಟೈಗ್ರಾ ಅಣೆಕಟ್ಟು ಮತ್ತು ಮೈಸೂರಿನ ಕೆಆರ್‍ಎಸ್‍ಗೂ ಅಳವಡಿಸಿದರು. ಇಂತಹ ಪದ್ಧತಿಯನ್ನು ಲಕ್ನೋ, ವಿಶಾಖಪಟ್ಟಣಗಳಲ್ಲಿ ಅಳವಡಿಸಿ ಅದರಿಂದ ಸಂಪೂರ್ಣ ಯಶಸ್ಸು, ಕೀರ್ತಿ ಗಳಿಸಿದರು.

ಸರ್ ಎಂ ವಿ ಸಾಗಿ ಬಂದ ಹಾದಿ:

1884- ಬಾಂಬೆಯಲ್ಲಿ ಸರ್ವಿಸ್ ಇಂಜಿನಿಯರ್ ಆಗಿ ನೇಮಕ, ನಾಸಿಕ್ ಮತ್ತು ಪುಣೆಯಲ್ಲಿ ಕಾರ್ಯ ನಿರ್ವಹಣೆ.
1894- ಸಿಂಧ್ ಪ್ರಾಂತದ ಸುಕ್ಕೂರ್ ಪುರಸಭೆಯಲ್ಲಿ ನೀರು ಸರಬರಾಜಿಗೆ ಸಂಭಂದಪಟ್ಟ ವಿನ್ಯಾಸ ಹಾಗು ಕಾರ್ಯನಿರ್ವಹಣೆ.
1896-ಸೂರತ್ ನಲ್ಲಿ ಎಸ್ಎಕ್ಯುಟಿವ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ.
1897-ಪುಣೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸೇವೆ.
1898-ಚೀನಾ ಹಾಗು ಜಪಾನ್ ಭೇಟಿ
1899- ಪುಣೆಯಲ್ಲಿ ವ್ಯವಸಾಯ ಕಾರ್ಯನಿರ್ವಾಹಕ ಇಂಜಿನಿಯರ್
1901-ಬಾಂಬೆಯಲ್ಲಿ ಒಳಚರಂಡಿ ಕಾಮಗಾರಿ ಇಂಜಿನಿಯರ್ ಹಾಗು ಒಳಚರಂಡಿ ಮಂಡಳಿಯ ಸದಸ್ಯ
1901- ಭಾರತೀಯ ವ್ಯವಸಾಯ ಆಯೋಗಕ್ಕೆ ದಾಖಲೆಗಳ ಸಲ್ಲಿಕೆ.
1903- ಫೈಫ್ ಕೆರೆಗೆ ತಾವೇ ಪೇಟೆಂಟ್ ಪಡೆದುಕೊಂಡ ಅತ್ಯಾಧುನಿಕ ವಿಧಾನ ಬಳಸಿ ಸ್ವಯಂಚಾಲಿತ ಆಣೆಕಟ್ಟು ದ್ವಾರಗಳನ್ನು ಅಭಿವೃದ್ಧಿ ಪಡಿಸಿ ಅಳವಡಿಸುವ ಮೂಲಕ ಭಾರತ ನೀರಾವರಿ ಕ್ಷೇತ್ರದಲ್ಲಿ ಹೊಸ ಭಾಷ್ಯ.
1903- ವ್ಯವಸಾಯ ದಲ್ಲಿ 'ಬ್ಲಾಕ್ ಸಿಸ್ಟಮ್' ಎಂಬ ಹೊಸ ವಿಧಾನ ಪರಿಚಯಿಸಿದ್ದು.
1904- ಶಿಮ್ಲಾ ವ್ಯವಸಾಯ ಆಯೋಗದಲ್ಲಿ ಬಾಂಬೆ ಸರ್ಕಾರವನ್ನು ಪ್ರತಿನಿಧಿಸಿದ್ದು.
1907- ಸುಪೆರಿಂಡೆಂಟ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ.
1908- ಈಜಿಪ್ಟ್, ಕೆನಡಾ, ಅಮೆರಿಕಾ ಹಾಗು ರಷ್ಯಾ ದೇಶಗಳಿಗೆ ಭೇಟಿಕೊಟ್ಟಿದ್ದು.
1909- ಮೂಸಿ ನದಿ ಪ್ರವಾಹದಿಂದ ತತ್ತರಿಸಿದ ಹೈದೆರಾಬಾದ್ ನಗರಕ್ಕೆ ವಿಶೇಷ ನಿರ್ದೇಶಕ ಇಂಜಿನಿಯರ್ ಆಗಿ ನೇಮಕ, ಪ್ರವಾಹದಿಂದ ಹಾಳಾದ ಎಲ್ಲ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಭಂದಿಸಿದ ವಿಚಾರಗಳ ಪುನರ್ ನಿರ್ಮಾಣಕ್ಕೆ ಒತ್ತು.
1909- ಬ್ರಿಟೀಷ್ ಸೇವೆಯಿಂದ ನಿವೃತ್ತಿ.
1909-ಮೈಸೂರು ಸರ್ಕಾರದ ಮುಖ್ಯ ಇಂಜಿನಿಯರ್ ಹಾಗು ಕಾರ್ಯದರ್ಶಿಯಾಗಿ ನೇಮಕ.
1912- ಮೈಸೂರು ದಿವಾನರಾಗಿ ನೇಮಕ , ಸಾರ್ವಜನಿಕ ಕಾಮಗಾರಿ ಹಾಗು ರೈಲ್ವೆ ಇಲಾಖೆ ಮೇಲ್ವಿಚಾರಣೆ.
1927-1955: ಟಾಟಾ ಸ್ಟೀಲ್ ನ ನಿರ್ದೇಶಕರ ಮಂಡಳಿಯಲ್ಲಿ ಒಬ್ಬ ನಿರ್ದೇಶಕರಾಗಿ ಸೇವೆ .

 

ಸರ್ ಎಂ ವಿ ಗೆ ಸಂದ ಗೌರವಗಳು:

1911ರಲ್ಲಿ ಬ್ರಿಟಿಶ್ ಸರಕಾರವು ಸಿಐಇ ಬಿರುದು ನೀಡಿ ಗೌರವಿಸಿತು.
1915ರಲ್ಲಿ ಬ್ರಿಟಿಶ್ ಸರಕಾರವು ಕೆ ಸಿ ಐ ಇ ಬಿರುದು ನೀಡಿ ಸನ್ಮಾನಿಸಿತು. ಅವರು ದಿವಾನರಾಗಿದ್ದಾಗ ಬ್ರಿಟಿಶ್ ಸರಕಾರ ಅವರಿಗೆ 'ಸರ್' ಪದವಿಯನ್ನು ನೀಡಿತು.
1919ರಲ್ಲಿ ಅವರು ಜಪಾನ್, ಕೆನಡಾ, ಅಮೇರಿಕಾ ಪ್ರವಾಸದಲ್ಲಿ
1921ರಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯ ಡಿ.ಎಸ್ಸಿ. ನೀಡಿ ಗೌರವಿಸಿತು.
1931ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಲ್ ಎಲ್ ಡಿ
1937ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಅವರಿಗೆ ಡಿ. ಲಿಟ್ ಪದವಿ ನೀಡಿ ಗೌರವಿಸಿತು.
1948ರಲ್ಲಿ ಎಮ್. ವಿ. ಅವರ ಸಾದನೆಗಳನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಡಾಕ್ಟರೆಟ್ ನೀಡಿ ಗೌರವಿಸಿತು.
1955ರಲ್ಲಿ ಇಂಡಿಯಾ ಸರಕಾರ ಅತ್ತ್ಯುನ್ನತ ಗವ್ರವವಾದ ಬಾರತ ರತ್ನ ನೀಡಿತು.

For Quick Alerts
ALLOW NOTIFICATIONS  
For Daily Alerts

English summary
Visvesvaraya was appointed a Companion of the Order of the Indian Empire (CIE) in 1911.[21] In 1915, while he was the Diwan of Mysore, Visvesvaraya was knighted as a Knight Commander of the Order of the Indian Empire (KCIE) by the British for his myriad contributions to the public good.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X