ಯುವ ಯುಗ ಕಾರ್ಯಕ್ರಮದ ಮೂಲಕ ಪರಿಶಿಷ್ಟರಿಗೆ ತರಬೇತಿ

ವಿದ್ಯಾವಂತರಾಗಿದ್ದರು ಕೌಶಲ್ಯ ಸಮಸ್ಯೆಯಿಂದಾಗಿ ಅನೇಕು ಯುವಕ ಯುವತಿಯರು ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಈ ಯೋಜನೆಯಿಂದ ಸುಮಾರು ಮೂರು ಸಾವಿರ ಯುವಕರು ಕೌಶಲ್ಯ ತರಬೇತಿ ಜೊತೆಗೆ ಉದ್ಯೋಗಾವಕಾಶ ಪಡೆಯಲಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿನ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡಲು ಯುವ ಯುಗ ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ವಿದ್ಯಾವಂತರಾಗಿದ್ದರು ಕೌಶಲ್ಯ ಸಮಸ್ಯೆಯಿಂದಾಗಿ ಅನೇಕು ಯುವಕ ಯುವತಿಯರು ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಈ ಯೋಜನೆಯಿಂದ ಸುಮಾರು ಮೂರು ಸಾವಿರ ಯುವಕರು ಕೌಶಲ್ಯ ತರಬೇತಿ ಜೊತೆಗೆ ಉದ್ಯೋಗಾವಕಾಶ ಪಡೆಯಲಿದ್ದಾರೆ.

ಐಟಿಬಿಟಿ ಇಲಾಖೆ ಅಡಿಯಲಿ ಸರ್ಕಾರ ರೂಪಿಸಿರುವ ಈ ಮಹತ್ವಾಕಾಂಕ್ಷಿ ಯೋಜನೆಯ ಮುಂದಾಳತ್ವವನ್ನು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್), ಐಸಿಟಿ ಕೌಶಲ ಅಭಿವೃದ್ಧಿ ನಿಗಮ (ಐಸಿಟಿಎಸ್​ಡಿಎಸ್) ವಹಿಸಿ ಕೊಂಡಿವೆ.

ಪರಿಶಿಷ್ಟರಿಗೆ ಉದ್ಯೋಗ ಕಲ್ಪಿಸಲು ಯುವ ಯುಗ

ಯುವ ಯುಗ ಹೆಸರಿನಲ್ಲಿ ಪ್ರಾರಂಭವಾಗುತ್ತಿರುವ ಈ ಯೋಜನೆಗೆ 5.88 ಕೋಟಿ ರೂ ವ್ಯಯಿಸಲಾಗುತ್ತಿದೆ, ತರಬೇತಿ ನೀಡುವ ಖಾಸಗಿ ಸಂಸ್ಥೆಗಳ ಸಂದರ್ಶನ ಪ್ರಕ್ರಿಯೆ ಆರಂಭವಾಗಿದ್ದು, 1 ವಾರದಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ.

ಯುವಯುಗ ಯೋಜನೆಗೆ ದೊಡ್ಡ ಮಟ್ಟದ ಕಮಪನಿಗಳು ಕೈ ಜೋಡಿಸಿದ್ದು, ಗ್ಲೋಬಲ್ ಸೈಬರ್ ಸೆಕ್ಯೂರಿಟಿ, ರೂಮನ್ ಟೆಕ್ನಾಲಜೀಸ್, ವರ್ಣ ಟೆಕ್ನಾಲಜೀಸ್, ಸ್ಯಾನೈಟಿ, ಸುವರ್ಣ ಎಜುಕೇಷನ್ ಟ್ರಸ್ಟ್ ಸೇರಿ ದೇಶ ಹಾಗೂ ರಾಜ್ಯದ ವಿವಿಧೆಡೆಯಿಂದ ಉದ್ಯೋಗ ನೀಡಲು 22 ಕಂಪನಿಗಳು ಮುಂದೆ ಬಂದಿದೆ.

ಉದ್ಯೋಗಕ್ಕೆ ತಕ್ಕ ತರಬೇತಿ

ಯಾವ ಹುದ್ದೆಗೆ ಯಾವ ರೀತಿಯ ತರಬೇತಿ ಮುಖ್ಯ ಎಂಬುದನ್ನು ಪಟ್ಟಿ ಮಾಡಿ ಅದರ ಅನುಸಾರ ತರಬೇತಿ ನೀಡಲು ಸಂಸ್ಥೆಗಳಿಗೆ ಟೆಂಡರ್ ಕರೆಯಲಾಗಿದೆ. ಈ ಯೋಜನೆಯಡಿಯಲ್ಲಿ ಯುವಕರಿಗೆ ತರಬೇತಿ ನೀಡಲು ರಾಜ್ಯದ ವಿವಿಧೆಡೆಯಿಂದ ಹಲವು ಖಾಸಗಿ ತರಬೇತಿ ಸಂಸ್ಥೆ ಮುಂದೆ ಬಂದಿದ್ದು, ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ತರಬೇತಿಗೆ ಅವಕಾಶ ಕಲ್ಪಿಸಲಾಗುತ್ತದೆ.

ತರಬೇತಿ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಜತೆಗೆ ಸಂಪೂರ್ಣ ತರಬೇತಿಯನ್ನು ರೆಕಾರ್ಡ್ ಮಾಡಬೇಕೆಂಬ ನಿಯಮ ರೂಪಿಸಲಾಗಿದೆ.

ಉನ್ನತ ಮಟ್ಟದ ಕೋರ್ಸ್​ಗಳನ್ನು ಆಯ್ಕೆ ಮಾಡಲಾಗಿದ್ದು, ತರಬೇತಿಯ ಜತೆಗೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಕಂಪನಿಗಳ ಜತೆಗೆ ಮಾತುಕತೆ ನಡೆಸಲಾಗಿದೆ ಎಂದು ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರಾದ ರಂಗೇಗೌಡ ತಿಳಿಸಿದ್ದಾರೆ

ಹುದ್ದೆಗೆ ಬೇಕಾದ ಶೈಕ್ಷಣಿಕ ಅರ್ಹತೆಯಿದ್ದರೂ ಕೌಶಲ ಹೊಂದಿರುವುದಿಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ಅಧಿಕವಾಗಿದೆ. ಈ ನಿಟ್ಟಿನಲ್ಲಿ 'ಯುವ ಯುಗ' ಕಾರ್ಯಕ್ರಮದ ಅಡಿಯಲ್ಲಿಯೇ ಎಸ್ಸಿ, ಎಸ್ಟಿ ಅಭ್ಯರ್ಥಿಗಳ ಕೌಶಲ ವೃದ್ಧಿಸಿ, ಉದ್ಯೋಗ ನೀಡುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಪ್ರಧಾನ ಕಾರ್ಯದರ್ಶಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಗೌರವ್ ಗುಪ್ತಾ ತಿಳಿಸಿದ್ದಾರೆ.

ಯಾರು ಅರ್ಹರು?

ಯುವಯುಗ ಯೋಜನೆಗೆ ಪದವಿ, ಡಿಪ್ಲೊಮಾ ಅಭ್ಯಸಿಸಿದ ನಿರುದ್ಯೋಗಿ ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಆಯ್ಕೆ ಪ್ರಕ್ರಿಯೆ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಹಿನ್ನೆಲೆ, ಆಸಕ್ತಿ ಹಾಗೂ ಅವರ ಸಾಮರ್ಥ್ಯ ಆಧಾರದ ಮೇಲೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

50 ಕೋರ್ಸುಗಳ ತರಬೇತಿ

ವೆಬ್ ಡಿಸೈನ್, 2ಡಿ/3ಡಿ ಅನಿಮೇಶನ್, ದತ್ತಾಂಶ ವಿಶ್ಲೇಷಣೆ, ಫ್ಯಾಷನ್ ಡಿಸೈನ್, ತಂತ್ರಾಂಶ ಸಂಬಂಧಿತ ಕೋರ್ಸ್ ಸೇರಿ ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ 50 ಕೋರ್ಸ್​ಗಳನ್ನು ಕಿಯೋನಿಕ್ಸ್ ಅಂತಿಮ ಮಾಡಿದೆ. ಪ್ರತಿ ಕೋರ್ಸ್​ಗೂ 3 ತಿಂಗಳ ತರಬೇತಿ ನೀಡಲಾಗುತ್ತದೆ.

ಯುವ ಯುಗ ಯೋಜನೆ

2017-18 ರ ಸಾಲಿನಲ್ಲಿ 1.10 ಲಕ್ಷ ಉದ್ಯೋಗ ಕಲ್ಪಿಸುವ ಗುರಿಯೊಂದಿಗೆ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಯುವಕರಿಗೆ ಉದ್ಯೋಗ ದಕ್ಕಿಸಿಕೊಳ್ಳಲು ಬೇಕಾದ ಕೌಶಲ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಇದಾಗಿದೆ. ಇಂದಿನ ಡಿಜಿಟಲ್‌ ತಂತ್ರಜ್ಞಾನದ ಕುರಿತು ಯುವಕ-ಯುವತಿಯರಿಗೆ ತರಬೇತಿ ನೀಡುವ ಕಾರ್ಯಕ್ರಮ ಇದಾಗಿದ್ದು, ಐಟಿ ಮತ್ತು ಐಟಿ ಆಧಾರಿತ ಸೇವೆಗಳು, ಇಎಸ್‌ಡಿಎಂ, ಟೆಲಿಕಾಮ್‌, ಎವಿಜಿಎಸ್‌ ಕ್ಷೇತ್ರಗಳಿಗೆ ಅಗತ್ಯವಿರುವ ಕೌಶಲ ತರಬೇತಿ ನೀಡಲಾಗುತ್ತದೆ

For Quick Alerts
ALLOW NOTIFICATIONS  
For Daily Alerts

English summary
State government of Karnataka has launched a skill program for youth of the state namely Yuva Yuga. Under this program young people can gain more knowledge and skillful training for job opportunities.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X