ಸಮಾಜ ಕಲ್ಯಾಣ ಇಲಾಖೆಯ ಉಚಿತ ಪರೀಕ್ಷಾ ಪೂರ್ವ ತರಬೇತಿಗೆ ಆಸಕ್ತರು ಅರ್ಜಿ ಹಾಕಿ

2019-20ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳನ್ನು ಯು.ಪಿ.ಎಸ್‌.ಸಿ/ಕೆ.ಎ.ಎಸ್/ಗ್ರೂಪ್ ಎ,ಬಿ (ಜಡ್ಜ್ & ಎನ್‌.ಡಿ.ಎ ಪರೀಕ್ಷೆಗಳಿಗೆ) & ಸಿ/ಬ್ಯಾಂಕಿಂಗ್ ಮತ್ತು ಎಸ್‌.ಎಸ್‌.ಸಿ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್‌-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 22,2019. ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಇಲಾಖೆಯ ವೆಬ್‌ಸೈಟ್‌ ಅನ್ನು ಚೆಕ್ ಮಾಡಿಕೊಳ್ಳಬಹುದು.

 ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

ಯು.ಪಿ.ಎಸ್‌.ಸಿ /ಕೆ.ಎ.ಎಸ್ /ಗ್ರೂಪ್ ಎ.ಬಿ (ಜಡ್ಜ್ ಮತ್ತು ಎನ್‌.ಡಿ.ಎ ಪರೀಕ್ಷೆಗಳಿಗೆ) & ಸಿ / ಬ್ಯಾಂಕಿಂಗ್ /ಎಸ್‌.ಎಸ್‌.ಸಿ ಮತ್ತು ಆರ್‌.ಆರ್‌.ಬಿ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ವಯ ಮೆರಿಟ್ ಆಧಾರದ ಮೇಲೆ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಸದರಿ ಅಭ್ಯರ್ಥಿಗಳಿಗೆ ಶಿಷ್ಯವೇತನವನ್ನು ಸರ್ಕಾರದಿಂದ ಬಂದ ಕೂಡಲೇ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಾಕಲಾಗುವುದು.

ವಿವಿಧ ಪರೀಕ್ಷೆಗಳ ಪೂರ್ವಭಾವಿ ತರಬೇತಿಯ ಅವಧಿ:

ಯು.ಪಿ.ಎಸ್‌.ಸಿ- 9 ತಿಂಗಳು
ಕೆ.ಎ.ಎಸ್ -7 ತಿಂಗಳು
ಗ್ರೂಪ್ ಎ.ಬಿ &ಸಿ- 3 ತಿಂಗಳು
ಬ್ಯಾಂಕಿಂಗ್ -3 ತಿಂಗಳು
ಎಸ್‌.ಎಸ್‌.ಸಿ-3 ತಿಂಗಳು
ಆರ್‌.ಆರ್‌.ಬಿ- 3 ತಿಂಗಳು

ವಯೋಮಿತಿ ಎಷ್ಟಿರಬೇಕು:

ಕನಿಷ್ಟ 18 ರಿಂದ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು

ವಿದ್ಯಾರ್ಹತೆ ಏನಿರಬೇಕು:

ಯು.ಪಿ.ಎಸ್‌.ಸಿ :

ಅಭ್ಯರ್ಥಿಯು ಪದವಿಯಲ್ಲಿ ಉತ್ತೀರ್ಣರಾಗಿದ್ದು, ಶೇ.55ಕ್ಕಿಂತ ಹೆಚ್ಚು ಅಂಕಗಳಿಸಿದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಕೆ.ಎ.ಎಸ್/ಗ್ರೂಪ್ -ಎ & ಬಿ ಗ್ಊಪ್ -ಸಿ/ ಬ್ಯಾಂಕಿಂಗ್:

ಅಭ್ಯರ್ಥಿಯು ಪದವಿಯಲ್ಲಿ ಉತ್ತೀರ್ಣರಾಗಿದ್ದು, ಶೇ.50 ಕ್ಕಿಂತ ಹೆಚ್ಚು ಅಂಕಗಳಿಸಿದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಎಸ್‌.ಎಸ್‌.ಸಿ:
1. ಸಿಎಚ್‌ಎಸ್‌ಎಲ್‌
ಅಭ್ಯರ್ಥಿಯು ದ್ವಿತೀಯ ಪಿ.ಯು.ಸಿ/ತತ್ಸಮಾನ ವಿದ್ಯಾರ್ಹತೆಯಲ್ಲಿ ಶೇ.50 ಕ್ಕಿಂತ ಹೆಚ್ಚು ಅಂಕಗಳಿಸಿದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

2.ಸಿಜಿಎಲ್:
ಅಭ್ಯರ್ಥಿಯು ಪದವಿಯಲ್ಲಿ ಉತ್ತೀರ್ಣರಾಗಿದ್ದು, ಶೇ.50 ಕ್ಕಿಂತ ಹೆಚ್ಚು ಅಂಕಗಳಿಸಿದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಆರ್‌.ಆರ್‌.ಬಿ
1. ಅಭ್ಯರ್ಥಿಯು ಪದವಿಯಲ್ಲಿ ಉತ್ತೀರ್ಣರಾಗಿದ್ದು, ಶೇ.50 ಕ್ಕಿಂತ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಆಯ್ಕೆ ವಿಧಾನ:

ಇಲಾಖೆಯು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳ ಅನ್ವಯ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ: www.sw.kar.nic.in

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22/7/2019ರ ಸಂಜೆ 5:30ರ ವರೆಗೆ

ಸೂಚನೆ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು ಹಾಗೂ ತರಬೇತಿ ಅವಧಿಯಲ್ಲಿ ಯಾವುದೇ ವಸತಿ ಸೌಲಭ್ಯವನ್ನು ಇಲಾಖೆಯು ನೀಡುವುದಿಲ್ಲ. ಸರ್ಕಾರದ ಆದೇಶ ಪ್ರಕಾರ ಮಾಸಿಕ ಶಿಷ್ಯವೇತನ ಪಾವತಿಸಲಾಗುವುದು.

ಅಭ್ಯರ್ಥಿಗಳು ಈ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ

ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Social welfare department 2019 invited applications for pre-examination training. Interested candidates can apply
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+