Fit India Quiz 2021 Registration : 2 ಲಕ್ಷ ವಿದ್ಯಾರ್ಥಿಗಳಿಂದ ಉಚಿತವಾಗಿ ನೊಂದಣಿಗೆ ಅವಕಾಶ

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮತ್ತು ಫಿಟ್ ಇಂಡಿಯಾ ಮಿಷನ್ ಫಿಟ್ ಇಂಡಿಯಾ ರಸಪ್ರಶ್ನೆಯನ್ನು ಹುಟ್ಟುಹಾಕಿದೆ. ಫಿಟ್‌ನೆಸ್ ಮತ್ತು ಕ್ರೀಡೆಗಳ ಬಗ್ಗೆ ಶಾಲಾ ಮಕ್ಕಳಿಗೆ ಕೇಳಲಾಗುವ ಮೊದಲ ರಾಷ್ಟ್ರವ್ಯಾಪಿ ರಸಪ್ರಶ್ನೆ ಕಾರ್ಯಕ್ರಮ ಇದಾಗಿದೆ. ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 1 ಲಕ್ಷ ಶಾಲೆಗಳಿಂದ ನೊಂದಣಿ ಮಾಡಿಕೊಂಡ ಮೊದಲ 2 ಲಕ್ಷ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದ್ದು, ದೇಶವ್ಯಾಪಿ ವಿದ್ಯಾರ್ಥಿಗಳು ರಸಪ್ರಶ್ನೆ ಕಾರ್ಯಕ್ರಮಕ್ಕೆ ನಿಗದಿಪಡಿಸಲಾಗಿದ್ದ 225 ರೂಪಾಯಿಗಳ ಭಾಗವಹಿಸುವಿಕೆ ಶುಲ್ಕದ ಬದಲಿಗೆ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು ಎಂದು ಘೋಷಿಸಿದೆ.

 

ಪ್ರತಿ ಶಾಲೆಯು ರಸಪ್ರಶ್ನೆ ಕಾರ್ಯಕ್ರಮಕ್ಕೆ ಗರಿಷ್ಠ 2 ವಿದ್ಯಾರ್ಥಿಗಳ ಹೆಸರನ್ನು ಉಚಿತವಾಗಿ ನೊಂದಣಿ ಮಾಡಬಹುದು ಮತ್ತು ಪ್ರಥಮ ಮತ್ತು ಬೇಗ ನೊಂದಣಿ ಮಾಡಿಕೊಂಡವರಿಗೆ ಆದ್ಯತೆ ನೀಡಲಾಗುವುದು.

ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮಕ್ಕೆ 2 ಲಕ್ಷ ವಿದ್ಯಾರ್ಥಿಗಳಿಂದ ಉಚಿತ ನೊಂದಣಿಗೆ ಅವಕಾಶ

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಶ್ರೀ. ಅನುರಾಗ್ ಸಿಂಗ್ ಠಾಕೂರ್ ಅವರು ಮಕ್ಕಳಲ್ಲಿ ಫಿಟ್ನೆಸ್ ಮತ್ತು ಕ್ರೀಡಾ ಜಾಗೃತಿಯನ್ನು ಹೆಚ್ಚಿಸಲು "ಫಿಟ್ ಇಂಡಿಯಾ ಕ್ವಿಜ್ ಅನ್ನು ಪ್ರಧಾನಮಂತ್ರಿ ಕಲ್ಪಿಸಿದ ಫಿಟ್ ಇಂಡಿಯಾ ಚಳುವಳಿಯ ಭಾಗವಾಗಿ ಆರಂಭಿಸಲಾಗಿದೆ. ಇದು ಫಿಟ್ ಲೈಫ್ ಅನ್ನು ಮುನ್ನಡೆಸುವ ಮಹತ್ವದ ಬಗ್ಗೆ ದೊಡ್ಡ ಪ್ರಮಾಣದ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಫಿಟ್ ಇಂಡಿಯಾ ಕ್ವಿಜ್‌ಗೆ ಸೇರಲು ಹೆಚ್ಚಿನ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಹಿನ್ನೆಲೆಯಲ್ಲಿ ಮೊದಲ 1 ಲಕ್ಷ ಶಾಲೆಗಳಿಂದ 2 ಲಕ್ಷ ವಿದ್ಯಾರ್ಥಿಗಳಿಗೆ 225 ರೂಪಾಯಿಗಳ ಭಾಗವಹಿಸುವಿಕೆ ಶುಲ್ಕವನ್ನು ಮನ್ನಾ ಮಾಡಲಾಗಿದೆ" ಎಂದು ಶ್ರೀ ಠಾಕೂರ್ ಹೇಳಿದರು. ತದನಂತರ ಶಾಲೆಯಿಂದ ನೊಂದಣಿಯಾಗುವ ಪ್ರತಿ ಹೆಚ್ಚುವರಿ ವಿದ್ಯಾರ್ಥಿಗೆ ನೊಂದಣಿ ಶುಲ್ಕವಾಗಿ ರೂ 50 ರ ಬದಲಿಗೆ ರೂ. 225 ರಂತೆ ನೊಂದಣಿ ಶುಲ್ಕವನ್ನು ಪಾವತಿಸಬಹುದು ಎಂದಿದ್ದಾರೆ.

 

ಶ್ರೀ ಠಾಕೂರ್ ಅವರು ಸೆಪ್ಟೆಂಬರ್ 1ರಂದು ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ಸಮ್ಮುಖದಲ್ಲಿ ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ರೀಡೆ ಮತ್ತು ಫಿಟ್ನೆಸ್ ಬಗ್ಗೆ ಶಾಲಾ ಮಕ್ಕಳಿಗೆ ಕೇಳಲಾಗುವ ಮೊದಲ ರಾಷ್ಟ್ರವ್ಯಾಪಿ ರಸಪ್ರಶ್ನೆ ಕಾರ್ಯಕ್ರಮ ಇದಾಗಿದೆ. ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾಗುವ ರಾಷ್ಟ್ರಮಟ್ಟದ ರಸಪ್ರಶ್ನೆ ಕಾರ್ಯಕ್ರಮದ ರಾಷ್ಟ್ರೀಯ ಸುತ್ತಿನೊಂದಿಗೆ ಬಹುಮಾನದ ಮೊತ್ತವಾಗಿ 3.25 ಕೋಟಿ ಮೌಲ್ಯದ ನಗದು ಬಹುಮಾನಗಳನ್ನು ನೀಡಲಾಗುತ್ತಿದೆ.

ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾರತದ ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ ಪ್ರತಿನಿಧಿಗಳನ್ನು ನೇಮಿಸಲಾಗಿರುತ್ತದೆ. ಈ ರಸಪ್ರಶ್ನೆ ಕಾರ್ಯಕ್ರಮವು ಆನ್‌ಲೈನ್ ಮತ್ತು ಪ್ರಸಾರ ಸುತ್ತುಗಳ ಮಿಶ್ರಣವಾಗಿರುತ್ತದೆ. ದೇಶದಾದ್ಯಂತದ ಶಾಲಾ ವಿದ್ಯಾರ್ಥಿಗಳು ತಮ್ಮ ಫಿಟ್ನೆಸ್ ಮತ್ತು ಕ್ರೀಡಾ ಜ್ಞಾನವನ್ನು ತಮ್ಮ ಗೆಳೆಯರ ವಿರುದ್ಧ ಪರೀಕ್ಷಿಸಲು ಅವಕಾಶವನ್ನು ಒದಗಿಸುವ ರೀತಿಯಲ್ಲಿ ಕಾರ್ಯಮವನ್ನು ವಿನ್ಯಾಸಗೊಳಿಸಲಾಗಿದೆ.

ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
Ministry of youth affairs and sports has announced the first 2 lakh students nominated by 1 lakh schools can be registered for fit india quiz.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X