
ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಯನ್ನು ಮೇ 29 ರಿಂದ ಜೂನ್ 7,2021ರ ವರೆಗೆ ನಡೆಸಲು ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ದೇಶದೆಲ್ಲೆಡೆ ಹೆಚ್ಚುತ್ತಿರುವ ಕೊರೋನಾ ಪ್ರಕರಣದಿಂದಾಗಿ ಸಿಬ್ಬಂದಿ ನೇಮಕಾತಿ ಆಯೋಗವು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ರಾಜ್ಯದಲ್ಲಿ ಈಗಾಗಲೇ ಕೊರೋನಾ ಹೆಚ್ಚಳದಿಂದಾಗಿ ಅನೇಕ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇನ್ನು ಕೆಲವು ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಇದೀಗ ಎಸ್‌ಎಸ್‌ಸಿಯು ಸಿಜಿಎಲ್ ಪರೀಕ್ಷೆಯನ್ನು ಮುಂದೂಡಿದೆ.
ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆಯ ಬಗ್ಗೆ ಮಾಹಿತಿ ಪಡೆಯಲು ಆಗಾಗ್ಗೆ ಅಧಿಕೃತ ವೆಬ್‌ಸೈಟ್ https://ssc.nic.in/ ಗೆ ಭೇಟಿ ನೀಡುತ್ತಿರುತಕ್ಕದ್ದು.
For Quick Alerts
For Daily Alerts