ಸ್ಟಾಫ್ ಸೆಲೆಕ್ಷನ್ ಕಮಿಷನ್ ಸಿಜಿಎಲ್ ಟಯರ್ -1 ಪರೀಕ್ಷೆಯ ಫಲಿತಾಂಶ ಪ್ರಕಟ

ಸಿಬ್ಬಂದಿ ನೇಮಕಾತಿ ಆಯೋಗದ ಸಿಜಿಎಲ್ ಟಯರ್ 1 ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. 2020ರ ಮಾರ್ಚ್ ನಲ್ಲಿ ನಡೆದ ಪರೀಕ್ಷೆಯ ಫಲಿತಾಂಶವನ್ನು ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ನಲ್ಲಿ ಪಡೆಯಬಹುದಾಗಿದೆ.

ಎಸ್‌ಎಸ್‌ಸಿ ಸಿಜಿಎಲ್ ಟಯರ್ 1 ಪರೀಕ್ಷಾ ಫಲಿತಾಂಶ ರಿಲೀಸ್

ಪರೀಕ್ಷೆ ನಡೆದ ದಿನಾಂಕ:

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಆಯೋಜಿಸಿದ್ದ ಕಂಬೈನ್ಡ್ ಗ್ರ್ಯಾಜುಯೆಟ್ ಲೆವೆಲ್ (ಸಿಜಿಎಲ್) ಟಯರ್ 1 ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಮಾರ್ಚ್ 3 ರಿಂದ ಮಾರ್ಚ್ 9,2020ರ ವರೆಗೂ ನಡೆದಿತ್ತು.

ಪರೀಕ್ಷೆ ಹಾಜರಾತಿ:

ಟಯರ್ 1 ಪರೀಕ್ಷೆಗೆ ದೇಶಾದ್ಯಂತ 9,78,103 ಅಭ್ಯರ್ಥಿಗಳು ಹಾಜರಾಗಿದ್ದರು.

ಆಯ್ಕೆ ವಿಧಾನ:

ಅಭ್ಯರ್ಥಿಗಳು ಟಯರ್ 1, ಟಯರ್ 2 ಮತ್ತು ಟಯರ್ 3 ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಬೇಕು. ತೇರ್ಗಡೆಯಾದ ಅಭ್ಯರ್ಥಿಗಳನ್ನು ನಾಲ್ಕನೇ ಶ್ರೇಣಿಯಲ್ಲಿ ಪರೀಕ್ಷಿಸಿ ಆಯ್ಕೆ ಮಾಡಿಕೊಳ್ಳಲಾಗುವುದು.

ಫಲಿತಾಂಶ ಪಡೆಯುವ ವಿಧಾನ:

ಸ್ಟೆಪ್ 1: ಅಭ್ಯರ್ಥಿಗಳು ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್‌ಸೈಟ್‌ https://ssc.nic.in/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಸಿಜಿಎಲ್ ಪರೀಕ್ಷಾ ಫಲಿತಾಂಶದ ಪ್ರಕಟಣೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಪ್ರಕಟಣೆ ಓದಿಕೊಂಡ ಅಭ್ಯರ್ಥಿಗಳು ಮತ್ತೆ ಹೋಂ ಪೇಜ್‌ಗೆ ಬನ್ನಿ
ಸ್ಟೆಪ್ 4: ಇಲ್ಲಿ ನಿಮ್ಮ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ ಫಲಿತಾಂಶ ವೀಕ್ಷಿಸಿ

ಎಸ್‌ಎಸ್‌ಸಿ ಸಿಜಿಎಲ್ ಟಯರ್-1 ಪರೀಕ್ಷೆಯ ಫಲಿತಾಂಶ ಪಡೆದ ನಂತರ ಮುಂದೇನು ?:

ಟಯರ್-1 ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಟಯರ್ 2 ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಟಯರ್ 2 ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಗೊಂಡಿದ್ದು, ಅಕ್ಟೋಬರ್ 12, ಅಕ್ಟೋಬರ್ 15 ಮತ್ತು ನವೆಂಬರ್ 1,2020 ರಂದು ನಡೆಯಲಿದೆ. ಟಯರ್ 2 ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷೆಗೆ 3 ರಿಂದ 7 ದಿನಗಳ ಮುಂಚಿತವಾಗಿಯೇ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗುವುದು.

ಅಭ್ಯರ್ಥಿಗಳು ಪರೀಕ್ಷಾ ಫಲಿತಾಂಶದ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
ssc tier 1 exam result released in official website. Candidates can check their results now.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X