ದೇಶದೆಲ್ಲೆಡೆ ಕೊರೋನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಲಾಗಲೇ ಲಾಕ್‌ಡೌನ್ ಅನ್ನು ಮೇ.3ರ ವರೆಗೆ ವಿಧಿಸಲಾಗಿದೆ. ಇನ್ನು ಈಗಾಗಲೇ ಬೋರ್ಡ್ ಪರೀಕ್ಷೆ ಸೇರಿದಂತೆ ಹಲವಾರು ಪರೀಕ್ಷೆಗಳನ್ನು ಮುಂದೂರಡಲಾಗಿರುತ್ತದೆ. ಅದರಂತೆಯೇ ಸಿಬ್ಬಂದಿ ನೇಮಕಾತಿ ಆಯೋಗ ಸಿಹೆಚ್ಎಸ್ಎಲ್,ಜ್ಯೂನಿಯರ್ ಇಂಜಿನಿಯರ್ ಮತ್ತು ಶೀಘ್ರಲಿಪಿಗಾರ ಹುದ್ದೆಗಳ ನೇಮಕಾತಿಯ ಪ್ರವೇಶ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಸಿಬ್ಬಂದಿ ನೇಮಕಾತಿ ಆಯೋಗವು ಏಪ್ರಿಲ್ 15,2020 ರಂದು ನಡೆಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಮುಂದಿನ ಪರೀಕ್ಷಾ ದಿನಾಂಕಗಳನ್ನು ಮೇ.3ರ ನಂತರವೇ ನಿಗಧಿಪಡಿಸುವಂತೆ ನಿರ್ಧರಿಸಿವೆ. ಹಾಗಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡತಕ್ಕದ್ದು.
For Daily Alerts