ಎಸ್ ಎಸ್ ಎಲ್ ಸಿ: ಜೂನ್ 15ಕ್ಕೆ ಸಪ್ಲಿಮೆಂಟರಿ ಪರೀಕ್ಷೆ

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವು ಹೊರಬಿದಿದ್ದು, ಈ ಬಾರಿಯ ಪರೀಕ್ಷೆಯಲ್ಲಿ 2,75,152 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಜೂನ್ 15 ರಿಂದ ಸಪ್ಲಿಮೆಂಟರಿ ಪರೀಕ್ಷೆಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳು ದಿನಾಂಕ 22-05-2017 ರೊಳಗೆ ನೋಂದಾಯಿಸಲು ಸೂಚಿಸಲಾಗಿದೆ.

ಶುಲ್ಕ ಪಾವತಿಸಲು ನಿಗದಿಪಡಿಸಿರುವ ದಿನಾಂಕಗಳು

 • ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ಕಡೆಯ ದಿನಾಂಕ: 22-05-2017
 • ಶಾಲೆಯವರು ಪರೀಕ್ಷಾ ಶುಲ್ಕವನ್ನು ಒಂದೇ ಕಂತಿನಲ್ಲಿ ಬ್ಯಾಂಕಿಗೆ ಜಮಾ ಮಾಡಬೇಕಾದ ದಿನಾಂಕ: 24-05-2017
 • ಶಾಲೆಯವರು ಪರೀಕ್ಷಾ ಅರ್ಜಿಗಳನ್ನು ಮೂಲ ಚಲನ್ ಸಹಿತ ಮಂಡಳಿಗೆ ಸಲ್ಲಿಸಬೇಕಾದ ದಿನಾಂಕ: 25-05-2017

ಎಸ್ ಎಸ್ ಎಲ್ ಸಿ ಸಪ್ಲಿಮೆಂಟರಿ ಪರೀಕ್ಷೆ

 

ಶುಲ್ಕದ ವಿವರಗಳು

 • ಒಂದು ವಿಷಯಕ್ಕೆ : ರೂ.240/-
 • ಎರಡು ವಿಷಯಕ್ಕೆ : ರೂ.290/-
 • ಮೂರು ಅಥವಾ ಮೂರಕ್ಕಿಂತ ಮೇಲ್ಪಟ್ಟು: ರೂ.390/-

ಸೂಚನೆ: ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ

ಇತರ ಸೂಚನೆಗಳು

 • ಅಭ್ಯರ್ಥಿಗಳು ಆಯಾ ಶಾಲೆಗಳಲ್ಲಿ ಜೂನ್-2017 ರ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ: 22-05-2017.
 • 2016ರ ಜೂನ್ ಹಾಗೂ ಅದಕ್ಕೂ ಹಿಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಎಂ.ಎಸ್.ಎ ಆಧಾರದ ಮೇಲೆ ಪರೀಕ್ಷಾ ಶುಲ್ಕ ಕಟ್ಟಿಸಿಕೊಳ್ಳಲಾಗುವುದು.
 • ಏಪ್ರಿಲ್ 2015 ರಲ್ಲಿ ಪ್ರಥಮ ಬಾರಿಗೆ ಕುಳಿತ ಪರೀಕ್ಷಾರ್ಥಿಗಳಿಗೆ ತೇರ್ಗಡೆಯಾಗಲು ಸತತ 06 ಪ್ರಯತ್ನಗಳ ಅವಕಾಶಗಳನ್ನು ಕಲ್ಪಿಸಲಾಗಿದೆ. ಏಪ್ರಿಲ್ 2015 ರ ಪರೀಕ್ಷೆಯಲ್ಲಿ ಕುಳಿತು ಈವರೆಗೆ ತೇರ್ಗಡೆಯಾಗದ ಪರೀಕ್ಷಾರ್ಥಿಗಳಿಗೆ ಜೂನ್ 2017 ರ ಪೂರಕ ಪರೀಕ್ಷೆ ಕಡೆಯ ಅವಕಾಶವಾಗಿರುತ್ತದೆ.
 • ಅನುತ್ತೀರ್ಣ ಅಭ್ಯರ್ಥಿಗಳು ಮರುಎಣಿಕೆ ಹಾಗೂ ಛಾಯಾ ಪ್ರತಿಗಾಗಿ ಅರ್ಜಿ ಸಲ್ಲಿಸಲು ಬಯಸಿದಲ್ಲಿ ಫಲಿತಾಂಶಕ್ಕಾಗಿ ಕಾಯದೆ ಪೂರಕ ಪರೀಕ್ಷೆಗಾಗಿ ನಿಗದಿತ ದಿನಾಂಕದೊಳಗೆ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬೇಕು. ಮಂಡಳಿಗೆ ಪಾವತಿಸಬೇಕಾದ ಶುಲ್ಕಗಳು NEFT ಮೂಲಕ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಪಾವತಿಸಬೇಕು.
 • ಜೂನ್-2017 ರ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗಳನ್ನು ದಿನಾಂಕ 15-06-2017 ರಿಂದ 22-06-2017 ರವರೆಗೆ ನಡೆಸಲಾಗುವುದು.

For Quick Alerts
ALLOW NOTIFICATIONS  
For Daily Alerts

English summary
June 2017 supplementary exams will be conducted from 15-06-2017 to 22-06-2017.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X