ಶಿಕ್ಷಣ ಇಲಾಖೆಯ ಎಡವಟ್ಟಿಗೆ ವಿದ್ಯಾರ್ಥಿಗಳ ಬೇಸರ

ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಸುಗಮವಾಗಿ ನಡೆದವು ಎಂದು ಹಿಗ್ಗುತ್ತಿದ್ದ ಶಿಕ್ಷಣ ಇಲಾಖೆ ತನ್ನ ಎಡವಟ್ಟಿನಿಂದ ತಲೆ ತಗ್ಗಿಸುವಂತಾಗಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದವರೆಗೂ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿರುವ ಇಲಾಖೆಯು ಈಗ ಅಂಕ ವ್ಯತ್ಯಾಸ, ಉತ್ತರ ಪತ್ರಿಕೆ ಬದಲು ಹೀಗೆ ಸಾಲು ಸಾಲು ತಪ್ಪುಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಟೀಕೆಗೆ ಒಳಗಾಗಿದೆ.

ಅಂಕಗಳ ವ್ಯತ್ಯಾಸ

ದಾವಣಗೆರೆಯ ಸೋಮೇಶ್ವರ ವಿದ್ಯಾಲಯದ ಗಣೇಶ್ ಎಂಬ ವಿದ್ಯಾರ್ಥಿ ಮರು ಎಣಿಕೆಗೆ ಹಾಕಿದಾಗ 20 ಅಂಕಗಳು ವ್ಯತ್ಯಾಸ ಆಗಿರುವುದು ಬೆಳಕಿಗೆ ಬಂದಿದೆ. ಮೌಲ್ಯಮಾಪನ ಮಾಡಿದ ಎಲ್ಲ ಅಂಕಗಳನ್ನು ಶೀಟ್ ಗೆ ಅಪ್ ಡೇಟ್ ಮಾಡಲಾಗಿದೆ. ಈ ವಿದ್ಯಾರ್ಥಿಗೆ ಒಟ್ಟು 51 ಅಂಕಗಳು ಲಭಿಸಿವೆ, ಆದರೆ ಸರಿಯಾಗಿ ಎಣಿಕೆ ಮಾಡದೆ 31 ಅಂಕಗಳೆಂದು ನಮೂದಿಸಲಾಗಿದೆ.

ಶಿಕ್ಷಣ ಇಲಾಖೆಯ ಎಡವಟ್ಟು

 

ಮರು ಎಣಿಕೆಗೆ ಹಾಕಿ ಉತ್ತರ ಪತ್ರಿಕೆ ತರಿಸಿ ಅಂಕಗಳನ್ನು ಪರಿಶೀಲಿಸಿದಾದ ಈ ರೀತಿಯ ಎಡವಟ್ಟು ಆಗಿರುವುದು ಕಂಡು ಬಂದಿದೆ. ಬಿಟ್ಟು ಹೋದ ಅಂಕ ಸೇರಿದ್ದರಿಂದ ಈ ವಿದ್ಯಾರ್ಥಿಗೆ ಉತ್ತಮ ದರ್ಜೆಯ ಫಲಿತಾಂಶ ಲಭಿಸಿದಂತಾಗಿದೆ.

ಅಂಕ ವ್ಯತ್ಯಾಸದಿಂದ ತಪ್ಪಿದ ಟಾಪರ್ ಪಟ್ಟ

ಇನ್ನು ಗಣೇಶ್ ಓದುತ್ತಿರುವ ಶಾಲೆಯ ಮತ್ತೊಬ್ಬ ವಿದ್ಯಾರ್ಥಿನಿ ಮರು ಎಣಿಕೆ ಮೂಲಕ ನಾಲ್ಕ ಅಂಕ ಪಡೆದುಕೊಂಡಿದ್ದಾರೆ. ಇಂಗ್ಲಿಷ್ ವಿಷಯದಲ್ಲಿ ನಿರೀಕ್ಷಿಸಿದಷ್ಟು ಅಂಕ ಬಂದಿಲ್ಲ ಎಂದು ಮರು ಎಣಿಕೆಯ ಮೊರೆ ಹೋದಾಗ ನಾಲ್ಕು ಅಂಕಗಳು ಏರಿಕೆ ಆಗಿವೆ. ಈ ವಿದ್ಯಾರ್ಥಿನಿಗೆ 76 ಅಂಕ ನಮೂದಿಸಲಾಗಿದೆ. ಆದರೆ ಉತ್ತರ ಪತ್ರಿಕೆ ಪಡೆದು ಎಣಿಕೆ ಮಾಡಿದಾಗ 80 ಅಂಕಗಳು ಲಭಿಸಿದೆ. ಇದರಿಂದ ಆಕೆಯ ಒಟ್ಟು ಅಂಕಗಳು ಹೆಚ್ಚಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದ್ದಾಳೆ.

ಮೊದಲೇ ಸರಿಯಾಗಿ ಅಂಕವನ್ನು ನೀಡಿದಿದ್ದರೆ ಈಕೆ ಮೊದಲೇ ಸಂಭ್ರಮ ಪಡುತ್ತಿದ್ದಳು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ ಈಕೆಯ ಶಿಕ್ಷಕರು ಮತ್ತು ಪೋಷಕರು.

ಬದಲಿ ಉತ್ತರ ಪತ್ರಿಕೆ

ವಿಜ್ಞಾನ ಕೇಳಿದರೆ ಗಣಿತ ಉತ್ತರಪತ್ರಿಕೆ ನೀಡಿರುವ ಮತ್ತೊಂದು ಪ್ರಕರಣ ನಡೆದಿದೆ. ಶಕ್ತಿ ಎಂಬ ವಿದ್ಯಾರ್ಥಿನಿ ವಿಜ್ಞಾನದ ವಿಷಯ ಮರು ಎಣಿಕೆಗೆ ಶುಲ್ಕ ಪಾವತಿಸಿದ್ದರು. ಆದರೀಗ ಗಣಿತದ ಉತ್ತರ ಪತ್ರಿಕೆ ಕಳುಹಿಸಿದ್ದಾರೆ. ಈ ಬಗ್ಗೆ ಮಂಡಳಿ ಪ್ರಶ್ನಿಸಿದರೆ ನಿಮಗೆ ಕಳುಹಿಸಿರುವ ಉತ್ತರ ಪತ್ರಿಕೆ ವಾಪಾಸು ಕಳುಹಿಸಿ ನಂತರ ವಿಜ್ಞಾನ ಪತ್ರಿಕೆ ಕಳುಹಿಸುವುದಾಗಿ ಮರು ಉತ್ತರ ಸಿಕ್ಕಿದೆ.

ಇಲಾಖೆಯ ಬೇಜವಬ್ದಾರಿತನ

ಮರು ಎಣಿಕೆ, ಮರು ಮೌಲ್ಯಮಾಪನದ ಮೊರೆ ಹೋಗಿದ್ದ ಕೆಲ ವಿದ್ಯಾರ್ಥಿಗಳಿಗೆ ಇಪ್ಪತ್ತು ಅಂಕಗಳಷ್ಟು ವ್ಯತ್ಯಾಸವಾಗಿರುವುದು ಪರೀಕ್ಷಾ ಮಂಡಳಿಯ ಬೇಜವಾಬ್ಧಾರಿತನಕ್ಕೆ ಸಾಕ್ಷಿಯಾಗಿದೆ. ಮೌಲ್ಯಮಾಪನವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ , ಅಂಕ ಸರಿಪಡಿಸಿಕೊಳ್ಳಲು ಬೆಂಗಳೂರಿನ ಮಂಡಳಿ ಕಚೇರಿ ಅಲೆಯಬೇಕು. ಒಂದೆರೆಡು ಅಂಕಗಳು ವ್ಯತ್ಯಾಸವಾಗುವುದು ಸಾಮಾನ್ಯ, ಎಣಿಕೆಯಲ್ಲಿ ತಪ್ಪಾಗಿರಬಹುದು ಅಥವಾ ಅಂಕ ನೀಡುವಲ್ಲಿ ವ್ಯತ್ಯಾಸ ಆಗಿರಬಹುದು ಎಂದೆಣಿಸಬಹುದು. ಆದರೆ ಸುಮಾರು 20 ರಷ್ಟು ಅಂಕಗಳ ವ್ಯತ್ಯಾಸ ವಿದ್ಯಾರ್ಥಿ ಭವಿಷ್ಯದ ಜತೆಗಿನ ಚೆಲ್ಲಾಟವಿದು ಎಂದು ಕ್ರೋಶ ವ್ಯಕ್ತಪಡಿಸುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
SSLC evaluation blunder continued this year also. After applying for retotaling student who is from Davanagere got 20 marks.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X