ಎಸ್ ಎಸ್ ಎಲ್ ಸಿ ಪರೀಕ್ಷೆ: ವಿಜ್ಙಾನ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇಂದು ವಿಜ್ಞಾನ, ರಾಜ್ಯಶಾಸ್ತ್ರ ಮತ್ತು ಪೌರನೀತಿ(ಅಂಧ ಮತ್ತು ಕಲಿಕಾ ನ್ಯೂನತೆ ಇರುವ ಮಕ್ಕಳಿಗೆ) ಹಿಂದೂಸ್ತಾನಿ ಸಂಗೀತ/ಕರ್ನಾಟಕ ಸಂಗೀತ (ಅಂಧ ಮತ್ತು ಕಲಿಕಾ ನ್ಯೂನತೆ ಇರುವ ಮಕ್ಕಳಿಗೆ)ವಿಷಯದ ಪರೀಕ್ಷೆಗಳು ನಡದಿವೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಂದು ವಿಜ್ಞಾನ, ರಾಜ್ಯಶಾಸ್ತ್ರ ಮತ್ತು ಪೌರನೀತಿ (ಅಂಧ ಮತ್ತು ಕಲಿಕಾ ನ್ಯೂನತೆ ಇರುವ ಮಕ್ಕಳಿಗೆ) ಹಿಂದೂಸ್ತಾನಿ ಸಂಗೀತ/ಕರ್ನಾಟಕ ಸಂಗೀತ (ಅಂಧ ಮತ್ತು ಕಲಿಕಾ ನ್ಯೂನತೆ ಇರುವ ಮಕ್ಕಳಿಗೆ) ವಿಷಯದ ಪರೀಕ್ಷೆಗಳು ನಡೆದಿವೆ.

ಜಯನಗರದ ವಿಜಯ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಇಂದು 420 ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ವಿಜ್ಞಾನದ ಪತ್ರಿಕೆಗೆ ಖುಷಿಯಿಂದ ಉತ್ತರಿಸಿದ್ದಾರೆ.

ಪರೀಕ್ಷಾ ಕೇಂದ್ರದಿಂದ ಹೊರಬಂದ ಪ್ರತಿಯೊಬ್ಬ ವಿದ್ಯಾರ್ಥಿಯು ನಗುಮುಖದೊಂದಿಗೆ ಉತ್ತಮವಾಗಿ ಪರೀಕ್ಷೆಯನ್ನು ಬರೆದುದಾಗಿ ತಮ್ಮ ಸಹಪಾಠಿಗಳ ಜೊತೆ ಸಂಭ್ರಮ ಹಂಚಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿಜ್ಙಾನ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ವಿಜ್ಙಾನ ಪರೀಕ್ಷೆ ಕುರಿತು ವಿದ್ಯಾರ್ಥಿ ಮಾಝ್ ಮಾತನಾಡಿ " ಪರೀಕ್ಷೆ ಎಂದಿನಂತೆ ಸುಲಭವಾಗೇ ಇತ್ತು, ಚೆನ್ನಾಗಿ ಓದಿದವರಿಗೆ ನಿಜಕ್ಕೂ ಇದು ಉತ್ತಮವಾದ ಪತ್ರಿಕೆ, ಬಹು ಆಯ್ಕೆಯ ಪ್ರಶ್ನೆಗಳಾಗಲಿ ಅಥವಾ ಸಬ್ಜೆಕ್ಟಿವ್ ಪ್ರಶ್ನೆಗಳಾಗಲಿ ಯಾವುದರಲ್ಲೂ ಗೊಂದಲಗಳಿರಲಿಲ್ಲ. ಉತ್ತಮವಾಗಿ ಬರೆದಿರುವ ವಿಶ್ವಾಸವಿದೆ ಹಾಗಾಗಿ ಉತ್ತಮ ಅಂಕಗಳನ್ನು ನಿರೀಕ್ಷಿಸಬಹುದಾಗಿದೆ" ಎಂದು ಹೇಳಿದರು.

ಮತ್ತೋರ್ವ ವಿದ್ಯಾರ್ಥಿ ಸಯ್ಯದ್ ಮಾತನಾಡಿ "ಶಾಲೆಗಳಲ್ಲಿ ಪ್ರಿಪರೇಟರಿ ಪರೀಕ್ಷೆಗಳಿಗೆ ಹೋಲಿಸಿದರೆ ಈ ಪತ್ರಿಕೆಯೇ ಸುಲಭವಾಗಿತ್ತು. ನಮಗೆ ಶಾಲೆಯಲ್ಲಿ ಇದಕ್ಕಿಂತ ಕಷ್ಟವಾದ ಪ್ರಶ್ನೆಗಳನ್ನು ಹೊಂದಿದ್ದ ಪತ್ರಿಕೆಗೆ ತಯಾರಿ ಮಾಡಿದ್ದರು. ಆದರೆ ಈ ಪತ್ರಿಕೆ ತುಂಬ ಸರಳವಾಗಿದೆ" ಎಂದು ತಿಳಿಸಿದರು.

ವಿಜ್ಞಾನ ಪ್ರಶ್ನೆಪತ್ರಿಕೆ ವಿಶ್ಲೇಷಣೆ

80 ಅಂಕಗಳ ವಿಜ್ಞಾನ ಪ್ರಶ್ನೆಪತ್ರಿಕೆಯು ಒಟ್ಟು 42 ಪ್ರಶ್ನೆಗಳನ್ನು ಒಳಗೊಂಡಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ವಿಷಯಗಳನ್ನು ಒಳಗೊಂಡಿದ್ದು ಉತ್ತರಿಸಲು ಮೂರು ಗಂಟೆಯ ಕಾಲಾವಕಾಶ ನೀಡಲಾಗಿತ್ತು.

ಪ್ರಶ್ನೆಪತ್ರಿಕೆಯಲ್ಲಿ ಸಬ್ಜೆಕ್ಟಿವ್ ಮತ್ತು ಆಬ್ಜೆಕ್ಟಿವ್ ಎರಡೂ ಮಾದರಿಯ ಪ್ರಶ್ನೆಗಳನ್ನು ಕೇಳಲಾಗಿದ್ದು ಪ್ರತಿಯೊಂದಕ್ಕು ಉತ್ತರಿಸಲು ಸೂಚನೆಗಳನ್ನು ನೀಡಲಾಗಿದೆ. ಪತ್ರಿಕೆಯನ್ನು ಯಾವುದೇ ವಿಭಾಗವಾಗಿ ರೂಪಿಸದೇ ಹೋದರು ಪ್ರಶ್ನೆಪತ್ರಿಕೆಯು ಕ್ರಮವಾಗಿ ಒಂದು, ಎರಡು, ಮೂರು ಮತ್ತು ನಾಲ್ಕು ಅಂಕಗಳಿಗೆ ತಕ್ಕಹಾಗೆ ವಿಂಗಡಿಸಲಾಗಿದೆ.

  • ಪ್ರಶ್ನೆಪತ್ರಿಕೆಯ ಮೊದಲ ಹತ್ತು ಪ್ರಶ್ನೆಗಳು ಆಬ್ಜೆಕ್ಟಿವ್ ಪ್ರಶ್ನೆಗಳಾಗಿದ್ದು ಪ್ರತಿ ಪ್ರಶ್ನೆಗೂ ಒಂದು ಅಂಕ ನಿಗದಿಪಡಿಸಲಾಗಿರುತ್ತದೆ. ನಂತರದಲ್ಲಿ ಹೊಂದಿಸಿ ಬರೆಯಿರಿ ಮತ್ತು ಯಾವುದೇ ಆಯ್ಕೆಗಳಿಲ್ಲದ ಏಳು ಒಂದು ಅಂಕದ ಸಬ್ಜೆಕ್ಟಿವ್ ಪ್ರಶ್ನೆಗಳನ್ನು ಕೇಳಲಾಗಿದೆ.
  • ಒಂದಂಕದ ಪ್ರಶ್ನೆಗಳ ನಂತರ ಎರಡು ಅಂಕದ ಹದಿನಾರು ಪ್ರಶ್ನೆಗಳ ಸಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳನ್ನು ಕೇಳಲಾಗಿದೆ.
  • ಮೂರು ಅಂಕದ ಪ್ರಶ್ನೆಗಳಲ್ಲಿ ಒಟ್ಟು ಐದು ಪ್ರಶ್ನೆಗಳನ್ನು ಕೇಳಲಾಗಿದ್ದು ಕೆಲವೊಂದು ಪ್ರಶ್ನೆಗಳಿಗೆ ಆಯ್ಕೆ ನೀಡಲಾಗಿದೆ. ಇದರಲ್ಲಿ ಚಿತ್ರ ಬಿಡಿಸಿ ವಿವರಿಸುವ ಪ್ರಶ್ನೆಗಳು ಸೇರಿವೆ.
  • ಪ್ರಶ್ನೆಪತ್ರಿಕೆಯ ಕೊನೆಯಲ್ಲಿ ನಾಲಕ್ಕು ಅಂಕದ ಮೂರು ಪ್ರಶ್ನೆಗಳನ್ನು ಕೇಳಲಾಗಿದೆ.ಈ ಭಾಗದಲ್ಲೂ ಚಿತ್ರ ಬಿಡಿಸಿ ವಿವರಿಸುವ ಪ್ರಶ್ನೆಗಳನ್ನು ಕೇಳಲಾಗಿದೆ.

ಇದನ್ನು ಗಮನಿಸಿ: ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿ

For Quick Alerts
ALLOW NOTIFICATIONS  
For Daily Alerts

English summary
Science paper went well as it was very easy and straight forward questions were asked and the students were able to finish the paper within the allotted time.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X