Karnataka SSLC Toppers List 2020: ಎಸ್‌ಎಸ್‌ಎಲ್‌ಸಿ ಟಾಪರ್ಸ್ ಪಟ್ಟಿ ಇಲ್ಲಿದೆ

ಕರ್ನಾಟಕದ 2019-20ನೇ ಸಾಲಿನ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಈ ವರ್ಷದ ಎಸ್‌ಎಸ್‌ಎಲ್‌ಸಿ ಟಾಪರ್ಸ್ ಬಗ್ಗೆ ಇಲ್ಲಿದೆ ಮಾಹಿತಿ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2020 ಟಾಪರ್ಸ್ ಪಟ್ಟಿ

ಪ್ರತಿ ವರ್ಷದಂತೆ ಈ ಭಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ ಆರು ಮಂದಿ 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಕಳೆದ ವರ್ಷ ಇಬ್ಬರು ಮಾತ್ರ ಪೂರ್ಣ ಅಂಕವನ್ನು ಗಳಿಸಿದ್ದರು.

625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳಿವರು:

ಶಿರಸಿಯ ಮಾರಿಕಾಂಬಾ ಶಾಲೆಯ ಸನ್ನಿಧಿ ಮಹಾಬಲೇಶ್ವರ ಹೆಗಡೆ, ನಾಗಸಂದ್ರದ ಸೇಂಟ್ ಮೇರಿಸ್ ಹೈಸ್ಕೂಲಿನ ಚಿರಾಯು ಕೆಎಸ್ , ಬೆಂಗಳೂರಿನ ಪೂರ್ಣ ಪ್ರಜ್ಞಾ ಎಜುಕೇಷನ್ ಸೆಂಟರ್‌ನ ನಿಖಿಲೇಶ್ ಎನ್ ಮರಳಿ, ಹುಬ್ಬಳ್ಳಿಯ ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮೀಡಿಯಂ ಬಾಯ್ಸ್ ಹೈಸ್ಕೂಲ್ ಮಾರದೇವನಹಳ್ಳಿಯ ಧೀರಜ್ ರೆಡ್ಡಿ ಎಂಪಿ, ಸುಳ್ಯದ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಮ್ ಹೈಸ್ಕೂಲಿನ ಅನುಷ್ ಎಎಲ್, ಚಿಕ್ಕಮಗಳೂರಿನ ಸೇಂಟ್ ಜೋಸೆಫ್ ಕಾನ್ವೆಂಟ್ ಗರ್ಲ್ಸ್‌ ಹೈಸ್ಕೂಲಿನ ತನ್ಮಯಿ ಐಪಿ 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.

625ಕ್ಕೆ 624 ಅಂಕ ಪಡೆದ ವಿದ್ಯಾರ್ಥಿಗಳು:

ಉತ್ತರ ಕನ್ನಡದ ಸಿದ್ದಾಪುರದ ಪ್ರಶಾಂತಿ ಇಂಗ್ಲಿಷ್ ಮೀಡಿಯಮ್ ಹೈಸ್ಕೂಲ್‌ನ ಅನಿರುಧ್ ಸುರೇಶ್ ಗುತ್ತೀಕಾರ್ ಹಾಗೂ ಬೆಂಗಳೂರು ರಾಜಾಜಿನಗರದ ವಿವಿಎಸ್ ಸರ್ದಾರ್ ಪಟೇಲ್ ಇಂಗ್ಲಿಷ್ ಹೈಸ್ಕೂಲ್ ನ ಅಮೋಘ್ ಜಿಕೆ 625ಕ್ಕೆ 624 ಅಂಕಗಳನ್ನು ಪಡೆದಿದ್ದಾರೆ.

ಈ ಬಾರಿ 52,219 ಮೌಲ್ಯಮಾಪಕರು ಸುಮಾರು 8 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದ್ದಾರೆ. ಜುಲೈ 14 ರಿಂದ ಮೌಲ್ಯಮಾಪನ ಆರಂಭವಾಗಿತ್ತು. ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಲಾಕ್‌ಡೌನ್ ಇದ್ದ ಕಾರಣ ಎರಡು ದಿನ ತಡವಾಗಿ ಆರಂಭವಾಗಿತ್ತು. ಈ ವರ್ಷ 71.80 ಶೇಕಡಾವಾರು ಫಲಿತಾಂಶ ಬಂದಿದೆ. ಕಳೆದ ವರ್ಷ 73.70 ಫಲಿತಾಂಶ ಬಂದಿತ್ತು. 5,82,316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳ ಫಲಿತಾಂಶ ಶೇ. 72.79 ಅಷ್ಟಿದೆ. ಅನುದಾನಿತ ಶಾಲೆಗಳು 70.60, ಶೇ. 82.31, 2,28,734 ಅನುತ್ತೀರ್ಣ ರಾಗಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Karnataka sslc result 2020 announced today. Check toppers list here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X