2751 ಬೋಧಕ ಹುದ್ದೆಗಳ ನೇಮಕಕ್ಕೆ ರಾಜ್ಯ ಸರ್ಕಾರ ನಿರ್ಧಾರ

Posted By:

ಅನುದಾನಿತ ಖಾಸಗಿ ಪ್ರೌಢಶಾಲೆಗಳಲ್ಲಿ ನಿವೃತ್ತಿ, ರಾಜಿನಾಮೆ ಮತ್ತು ನಿಧನದಿಂದ ಖಾಲಿಯಾಗಿದ್ದ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾಗಿದೆ.

ಒಟ್ಟು 2,751 ಬೋಧಕರ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಆರ್ಥಿಕ ಮಿತವ್ಯಯ ಸಡಿಲಿಸಿ ಅನುಮತಿ ನೀಡಿದೆ.

2751 ಬೋಧಕ ಹುದ್ದೆಗಳ ನೇಮಕಾತಿ

ಅನುದಾನಿತ ಪ್ರೌಢಶಾಲೆಗಳಲ್ಲಿ 2012 ರ ಡಿಸೆಂಬರ್‌ 31 ರವರೆಗೆ ಖಾಲಿ ಉಳಿದಿದ್ದ 1476 ಬೋಧಕ ಹುದ್ದೆಗಳು ಮತ್ತು 2013 ಜನವರಿ 1 ರಿಂದ 2014ರ ಡಿಸೆಂಬರ್‌ 31ರವರೆಗೆ ಬಾಕಿ ಉಳಿದಿದ್ದ ಬೋಧಕ ಹುದ್ದೆಗಳನ್ನು (ವೃತ್ತಿ, ಚಿತ್ರಕಲೆ, ಸಂಗೀತ ಶಿಕ್ಷಕರನ್ನು ಹೊರತುಪಡಿಸಿ) ಭರ್ತಿ ಮಾಡುವುದಾಗಿ ತಿಳಿಸಲಾಗಿದೆ.

ಈ ಹುದ್ದೆಗಳ ನೇಮಕಾತಿಯು ಕೆಲವು ಷರತ್ತುಗಳಿಗೆ ಒಳಪಟ್ಟಿದ್ದು, ಶಾಲೆಗಳ ಫಲಿತಾಂಶ, ವಿದ್ಯಾರ್ಥಿಗಳ ದಾಖಲಾತಿ, ವಿದ್ಯಾರ್ಥಿಗಳ ಹಾಜರಾತಿ ಸೇರಿದಂತೆ ಇನ್ನು ಕೆಲವು ಷರತ್ತುಗಳ ಅನ್ವಯ ಎಲ್ಲಾ ಹುದ್ದೆಗಳನ್ನು ಭರ್ತಿಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಷರತ್ತುಗಳು

  • ಖಾಲಿ ಹುದ್ದೆಗಳ ಭರ್ತಿ ಅನುಮೋದನೆ ಶಿಕ್ಷಕರುಗಳಿಗೆ ಮಾತ್ರ ಅನ್ವಯಿಸುತ್ತದೆ.
  • ನಿರ್ದಿಷ್ಟ ಖಾಲಿ ಹುದ್ದೆಗಳು ಅನುದಾನಿತ ಹುದ್ದೆಗಳಾಗಿರಬೇಕು.
  • ಅನುದಾನಿತ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಕಳೆದ 5 ಶೈಕ್ಷಣಿಕ ವರ್ಷಗಳ ಜಿಲ್ಲಾ ಸರಾಸರಿ ಫಲಿತಾಂಶಕ್ಕಿಂತ ಉತ್ತಮವಾಗಿರಬೇಕು.
  • ಅನುದಾನಿತ ಶಾಲೆಯು ಕನಿಷ್ಠ ಮಕ್ಕಳ ಹಾಜರಾತಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಹಾಜರಾತಿ/ ದಾಖಲಾತಿ ನಿಗದಿತ ಮಟ್ಟದಲ್ಲಿರು ವುದನ್ನು ಸ್ಟೂಡೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌ ಅನ್ವಯ ಖಚಿತಪಡಿಸಿಕೊಳ್ಳಬೇಕು.

English summary
Karnataka state government decided to recruit 2751 teaching posts in government aided private schools under some conditions.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia