ಆರೋಗ್ಯ ಇಲಾಖೆಯಲ್ಲಿ 12 ಸಾವಿರಕ್ಕು ಅಧಿಕ ಹುದ್ದೆಗಳು

Posted By:

ಆರೋಗ್ಯ ಇಲಾಖೆಯಲ್ಲಿ ಅವಶ್ಯವಿರುವ 12 ಸಾವಿರಕ್ಕು ಹೆಚ್ಚು ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾಗಿದ್ದು ಇನ್ನೊಂದು ವಾರದೊಳಗೆ ನೇಮಕಾತಿಯ ಅಧಿಸೂಚನೆ ಹೊರಬಿಳಲಿದೆ.

ಆರೋಗ್ಯ ಹಾಗೂ ಆಯುಷ್ ಇಲಾಖೆಯಲ್ಲಿ ಹನ್ನೆರೆಡು ಸಾವಿರುಕ್ಕೂ ಹೆಚ್ಚಿನ ಹುದ್ದೆಗಳ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಇನ್ನೊಂದು ವಾರದಲ್ಲಿ ನೇಮಕಾತಿಯ ಅಧಿಸೂಚನೆ ಪ್ರಕಟವಾಗಲಿದ್ದು, ಮುಂದಿನ ವರ್ಷದೊಳಗೆ ನೇಮಕಾತಿ ಪ್ರಕ್ರಿಯೆ ನಡೆಸುವುದಾಗಿ ವರದಿಯಾಗಿದೆ.

ಬುಧವಾರ ನಡೆದ ಸಚಿಚ ಸಂಪುಟದಲ್ಲಿ ಆರೋಗ್ಯ ಇಲಾಖೆಯಲ್ಲಿನ ನೇಮಕಾತಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ನೇಮಕಾತಿಯನ್ನು ಕೆಪಿಎಸ್ಸಿ ಬದಲು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸಂಪುಟ ನಿರ್ಧರಿಸಿದೆ.

ಆರೋಗ್ಯ ಇಲಾಖೆ ನೇಮಕಾತಿ

ಒಂದು ವಾರದಲ್ಲಿ ಅಧಿಸೂಚನೆ

ವಿಶೇಷ ನೇಮಕ ನಿಯಮಕ್ಕೆ ಸಂಬಂಧಿಸಿ ಇನೊಂದು ವಾರದಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗುತ್ತದೆ. ಇದಕ್ಕೆ ಸಾರ್ವಜನಿಕರ ಆಕ್ಷೇಪಣೆ ಸ್ವೀಕರಿಸಿ ಅಂತಿಮವಾಗಿ ಅಧಿಸೂಚನೆ ಪ್ರಕಟಿಸಲಾಗುವುದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ನೂತನ ನಿಯಮದ ಪ್ರಕಾರ ಆರೋಗ್ಯ ಇಲಾಖೆಯಲ್ಲಿ 1285 ತಜ್ಞ ವೈದ್ಯರು, 684 ವೈದ್ಯಾಧಿಕಾರಿಗಳು, 8137 ಅರೆ ವೈದ್ಯಾಧಿಕಾರಿಗಳು, 1753 ಶುಶ್ರೂಷಕರು ಹಾಗೂ ಆಯುಷ್ ಇಲಾಖೆಯಲ್ಲಿ 285 ವೈದ್ಯರನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ.

ನೇರ ನೇಮಕಾತಿ

ಆಸ್ಪತ್ರೆಗಳಿಗೆ ತುರ್ತಾಗಿ ವೈದ್ಯರ ಅಗತ್ಯವಿರುವ ಹಿನ್ನೆಲೆಯಲ್ಲಿ ಕೆಪಿಎಸ್​ಸಿ ಬದಲಾಗಿ ನೇರ ನೇಮಕಾತಿ ನಡೆಸಲು ಸರ್ಕಾರ ನಿರ್ಧರಿಸಿದೆ. ಶುಶ್ರೂಷಕರ ಹುದ್ದೆಗೆ ಈಗಾಗಲೇ ಗುತ್ತಿಗೆ ಸೇವೆಯಲ್ಲಿರುವರಿಗೆ ನಿರ್ದಿಷ್ಟ ಅಂಕ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಅಧಿಸೂಚನೆ ಯಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ಈ ಮೂಲಕ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಹಿತ ಕಾಯುವ ಕೆಲಸ ಮಾಡಲಾಗುವುದು ಎಂದು ಜಯಚಂದ್ರ ಹೇಳಿದ್ದಾರೆ

English summary
Karnataka state government decided to recruit 12,144 posts in health and aayush department this year

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia