ವಿದ್ಯಾರ್ಥಿಗಳಿಗೆ ಉಚಿತ ಲ್ಯಾಬೊರೇಟರಿ ಟೂಲ್‌ ಕಿಟ್‌ ನೀಡಲು ರಾಜ್ಯ ಸರ್ಕಾರ ನಿರ್ಧಾರ

ಉಚಿತ ಲ್ಯಾಬೊರೇಟರಿ ಟೂಲ್‌ ಕಿಟ್‌ ಅಮೆಜಾನ್‌ ಕಿಂಡಲ್, 4 ಜಿ ಸಾಮರ್ಥ್ಯದ ಡೊಂಗಲ್, ಸೈಂಟಿಫಿಕ್‌ ಕ್ಯಾಲ್ಕುಲೇಟರ್‌ ಮತ್ತು ಪೆನ್‌ ಡ್ರೈವ್‌ ಅನ್ನು ಈ ಕಿಟ್ ಒಳಗೊಂಡಿರುತ್ತದೆ.

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಬೊರೇಟರಿ ಟೂಲ್‌ ಕಿಟ್‌ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ವಾರ್ಷಿಕ ₹ 5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಪರಿಶಿಷ್ಟ ಜಾತಿ ಮತ್ತು ಪಂಗಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಈ ಕಿಟ್ ದೊರೆಯಲಿದ್ದು, ಅಮೆಜಾನ್‌ ಕಿಂಡಲ್, 4 ಜಿ ಸಾಮರ್ಥ್ಯದ ಡೊಂಗಲ್, ಸೈಂಟಿಫಿಕ್‌ ಕ್ಯಾಲ್ಕುಲೇಟರ್‌ ಮತ್ತು ಪೆನ್‌ ಡ್ರೈವ್‌ ಅನ್ನು ಈ ಕಿಟ್ ಒಳಗೊಂಡಿರುತ್ತದೆ.

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಬೊರೇಟರಿ ಟೂಲ್‌ ಕಿಟ್‌

ಸಮಾಜ ಕಲ್ಯಾಣ ಇಲಾಖೆ 'ಎಸ್‌ಸಿಪಿ-ಟಿಎಸ್‌ಪಿ' ಯೋಜನೆಯಿಂದ ಈ ಯೋಜನೆಗೆ ಅನುದಾನ ನೀಡಲಿದೆ.ಈಗಾಗಲೇ ಯೋಜನೆಯ ಅನುಷ್ಠಾನಕ್ಕಾಗಿ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳ ನಿಖರ ಸಂಖ್ಯೆ ತಿಳಿಸುವಂತೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ತಾಂತ್ರಿಕ ಶಿಕ್ಷಣ ಇಲಾಖೆ ಪತ್ರ ಬರೆಯಲಾಗಿದೆ.

'ಪ್ರತಿ ಟೂಲ್‌ಕಿಟ್‌ನ ಮೌಲ್ಯ ₹ 6,500 ಇರಲಿದ್ದು, ಟೂಲ್‌ ಕಿಟ್‌ ಏನೆಲ್ಲ ಸಾಧನಗಳನ್ನು ಹೊಂದಿರಬೇಕು ಎಂಬುದನ್ನು ಸದ್ಯದಲ್ಲೇ ಅಂತಿಮಗೊಳಿಸುತ್ತೇವೆ' ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್‌.ಯು.ತಳವಾರ ತಿಳಿಸಿದ್ದಾರೆ.

ತಜ್ಞರ ಸಮಿತಿ

ಟೂಲ್‌ಕಿಟ್‌ನಲ್ಲಿ ಯಾವ ಸಾಧನಗಳು ಇರಬೇಕು ಎಂಬುದರ ಸಲಹೆ ಪಡೆಯಲು ರಾಜ್ಯ ಸರ್ಕಾರ ವಿಷಯ ತಜ್ಞರ ಸಮಿತಿ ರಚಿಸಿದೆ. ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌, ಮೆಕ್ಯಾನಿಕಲ್‌, ಕಂಪ್ಯೂಟರ್‌ ಸೈನ್ಸ್‌ ಮತ್ತು ಟೆಕ್ಸ್‌ಟೈಲ್‌ ಟೆಕ್ನಾಲಜಿ ಎಂಜಿನಿಯರಿಂಗ್‌ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಿಂಡಲ್ ಇ- ರೀಡರ್‌, 32 ಜಿಬಿ ಪೆನ್‌ಡ್ರೈವ್‌, ವೈಫೈ ಡೊಂಗಲ್ ಮತ್ತು ಕ್ಯಾಲ್ಕುಲೇಟರ್‌ ಒದಗಿಸಲು ಸಮಿತಿ ಸಲಹೆ ನೀಡಿದೆ.

For Quick Alerts
ALLOW NOTIFICATIONS  
For Daily Alerts

English summary
The State Government has decided to provide free laboratory tool kit to Scheduled Caste and Scheduled Tribes students who are studying in government engineering colleges.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X