ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ತೀರ್ಮಾನ

ನೂತನ ತಿದ್ದುಪಡಿಯಂತೆ ಸರ್ಕಾರದ ನಿಯಮಾವಳಿ ಆಧರಿಸಿಯೇ ಖಾಸಗಿ ಶಾಲೆಗಳು ಶುಲ್ಕ ನಿಗದಿ ಮಾಡಬೇಕು. ತರಗತಿವಾರು ಶುಲ್ಕದ ವಿವರವನ್ನು ಶಾಲೆಗಳ ಸೂಚನಾ ಫಲಕದಲ್ಲಿ ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಶುಲ್ಕ ಪಟ್ಟಿ ಪ್ರಕಟಿಸಬೇಕು.

ಖಾಸಗಿ ಶಾಲೆಗಳ ಶುಲ್ಕ ವಸೂಲಿಗೆ ಕಡಿವಾಣ ಬೀಳಲಿದ್ದು, ಈ ಕುರಿತಂತೆ ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಿದೆ.

ಹೆಚ್ಚು ಶುಲ್ಕ ವಸೂಲಿ ಮಾಡುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ, ಬರುವ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.

ನೂತನ ತಿದ್ದುಪಡಿಯಂತೆ ಸರ್ಕಾರದ ನಿಯಮಾವಳಿ ಆಧರಿಸಿಯೇ ಖಾಸಗಿ ಶಾಲೆಗಳು ಶುಲ್ಕ ನಿಗದಿ ಮಾಡಬೇಕು. ತರಗತಿವಾರು ಶುಲ್ಕದ ವಿವರವನ್ನು ಶಾಲೆಗಳ ಸೂಚನಾ ಫಲಕದಲ್ಲಿ ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಶುಲ್ಕ ಪಟ್ಟಿ ಪ್ರಕಟಿಸಬೇಕು.

ಖಾಸಗಿ ಶಾಲೆಗಳಿಗೆ ಕಡಿವಾಣ

ಸರ್ಕಾರದ ನಿಯಮದಂತೆ ಶುಲ್ಕ ಪಟ್ಟಿ ಪ್ರಕಟಿಸದ ಶಾಲೆಗಳ ವಿರುದ್ಧ ದೂರು ನೀಡಲು ಪೋಷಕರಿಗೆ ಅವಕಾಶ ಕಲ್ಪಿಸಲಾಗುವುದು, ಅಲ್ಲದೆ ನಿಗದಿಗಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡಿದಲ್ಲಿ ಪೋಷಕರಿಗೆ ವಾಪಸ್ ಕೊಡಿಸಲಾಗುವುದು' ಎಂದೂ ಅವರು ತಿಳಿಸಿದರು ಎಂದು ಅವರು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ತರಗತಿಗಳು ಮುಗಿದ ಬಳಿಕ ಮುಂದಿನ ವರ್ಷದ ಪ್ರವೇಶಾತಿ ಆರಂಭಿಸಬೇಕು. ಆದರೆ, ಕೆಲವು ಶಾಲೆಗಳು ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಿಸಿರುವುದು ನನ್ನ ಗಮನಕ್ಕೆ ಬಂದಿದೆ. ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಇದರ ಜೊತೆಗೆ ಹೊಸದಾಗಿ ಶಾಲೆ ಆರಂಭಿಸುವ ನಿಯಮದಲ್ಲೂ ಸಾಕಷ್ಟು ಮಾರ್ಪಾಡುಗಳನ್ನು ಮಾಡಿರುವ ಬಗ್ಗೆ ಸಚಿವರು ವಿವರಿಸಿದರು.

ಪ್ರಾಥಮಿಕ ಶಾಲೆ ಅಥವಾ ಪ್ರೌಢಶಾಲೆಗಳನ್ನು ಪ್ರತ್ಯೇಕವಾಗಿ ಆರಂಭಿಸಲು ಪಾಲಿಕೆಗಳ ವ್ಯಾಪ್ತಿಯಲ್ಲಿ 1,000 ಚದರಡಿ ಮತ್ತು ಇತರೆಡೆ 2,000 ಜಾಗ ಇರಬೇಕು. ಒಂದರಿಂದ 10ನೇ ತರಗತಿ ತನಕ ಶಾಲೆ ತೆರೆಯಬೇಕಿದ್ದರೆ ಪಾಲಿಕೆಗಳ ವ್ಯಾಪ್ತಿಯಲ್ಲಿ 1,500 ಚದರಡಿ ಮತ್ತು ಇತರೆಡೆ 3,000 ಚದರಡಿ ಜಾಗ ಇರುವುದು ಕಡ್ಡಾಯ.

ಹೊಸದಾಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಸಣ್ಣಪುಟ್ಟ ಮನೆಗಳಲ್ಲಿ ಆರಂಭಿಸಲು ಅವಕಾಶವಿಲ್ಲ. ಒಂದು ಮಗುವಿಗೆ ಒಂದು ಚದರಡಿ ಜಾಗ ಮೀಸಲಿದ್ದರೆ ಮಾತ್ರ ಅನುಮತಿ ನೀಡಲು ಹೊಸದಾಗಿ ನಿಯಮಾವಳಿ ರೂಪಿಸಲಾಗಿದೆ ಎಂದು ತನ್ವೀರ್ ಸೇಠ್ ತಿಳಿಸಿದರು.

ಪೂರ್ವ ಪ್ರಾಥಮಿಕ ಶಾಲೆಯಿಂದ ಪದವಿ ಪೂರ್ವ ಶಾಲೆ ತನಕ ಒಂದೇ ಆವರಣದಲ್ಲಿ ಶಿಕ್ಷಣ ನೀಡುವುದಾದರೆ ಪಾಲಿಕೆಗಳ ವ್ಯಾಪ್ತಿಯಲ್ಲಿ 2,000 ಚದರಡಿ ಮತ್ತು ಇತರೆಡೆ 4,000 ಚದರಡಿ ಜಾಗ ಇದ್ದರೆ ಮಾತ್ರ ಶಿಕ್ಷಣ ಇಲಾಖೆ ಅನುಮತಿ ನೀಡಲಿದೆ ಎಂದು ವಿವರಿಸಿದರು.

ಹೊಸದಾಗಿ ಶಾಲೆ ತೆರೆಯುವವರಿಗೆ ಈ ನಿಯಮಾವಳಿ ಅನ್ವಯವಾಗಲಿದ್ದು, ಈಗಾಗಲೇ ಇರುವ ಶಾಲೆಗಳ ಪರವಾನಗಿ ನವೀಕರಣ ಸಂದರ್ಭದಲ್ಲಿ ಈ ನಿಯಮ ಪಾಲನೆ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುತ್ತದೆ. ಪಾಲನೆ ಆಗದಿದ್ದರೆ ಶಾಲೆ ಸ್ಥಳಾಂತರ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

For Quick Alerts
ALLOW NOTIFICATIONS  
For Daily Alerts

English summary
The Act has been amended by Karnataka government to take action against private schools which charge higher fees.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X