School Reopening In These States: ಈ ಎಲ್ಲಾ ರಾಜ್ಯಗಳಲ್ಲಿ ಇಂದಿನಿಂದ ಶಾಲೆ ಕಾಲೇಜು ಆರಂಭ

ಕೊರೋನಾ ಕಾರಣದಿಂದಾಗಿ ಈ ವರ್ಷ ಶಾಲೆ ಮತ್ತು ಕಾಲೇಜುಗಳ ಆರಂಭ ವಿಳಂಬವಾಗಿದೆ. ಎಲ್ಲಾ ರಾಜ್ಯ ಸರ್ಕಾರಗಳೂ ಪರಿಸ್ಥಿತಿಯನ್ನು ಗಮನಿಸಿಕೊಂಡು ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಆರಂಭಿಸುತ್ತಿವೆ. ಹಾಗೆಯೇ ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಇಂದಿನಿಂದ ಯಾವೆಲ್ಲಾ ರಾಜ್ಯಗಳಲ್ಲಿ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ತರಗತಿಗಳು ಪುನರಾರಂಭಗೊಳ್ಳಲಿವೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

 
ಈ ಎಲ್ಲಾ ರಾಜ್ಯಗಳಲ್ಲಿ ಇಂದಿನಿಂದ ಶಾಲೆ ಕಾಲೇಜು ಆರಂಭ

ಆಂಧ್ರ ಪ್ರದೇಶ:

ಆಂಧ್ರಪ್ರದೇಶದಲ್ಲಿ ಇಂದಿನಿಂದ 1 ರಿಂದ 5ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳನ್ನು ಪುನರಾರಂಭಿಸಲಾಗಿದೆ. ಆಂಧ್ರ ಪ್ರದೇಶದ ಶಿಕ್ಷಣ ಇಲಾಖೆ ಈ ಕುರಿತು ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ. ಶಾಲೆಗಳು ಪೂರ್ಣ ದಿನ ಕಾರ್ಯನಿರ್ವಹಿಸಲಿದ್ದು, ವಿದ್ಯಾರ್ಥಿಗಳಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸಿಲ್ಲ ಮತ್ತು ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರ ಲಿಖಿತ ರೂಪದ ಒಪ್ಪಿಗೆ ಪತ್ರದೊಂದಿಗೆ ಮಾತ್ರ ಪ್ರವೇಶಿಸಬೇಕಿರುತ್ತದೆ.

ನವದೆಹಲಿ:

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ದೆಹಲಿ ವಿಶ್ವವಿದ್ಯಾಲಯ (ಡಿಯು) ಇಂದಿನಿಂದ ಆಫ್‌ಲೈನ್ ತರಗತಿಗಳನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳು ತಮ್ಮ ಪ್ರಯೋಗಾಲಯ, ಗ್ರಂಥಾಲಯ ಮತ್ತು ವಿವಿಧ ಚಟುವಟಿಕೆಗಳಿಗೆ ಸಣ್ಣ ಬ್ಯಾಚ್ ಗಳಾಗಿ ಹಾಜರಾಗಬಹುದು. ವಿಶ್ವವಿದ್ಯಾಲವು ಇಂದಿನಿಂದ ಶೇ.100 ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲಿದೆ.

ಗುಜರಾತ್:

ಗುಜರಾತ್ ರಾಜ್ಯದಲ್ಲಿ ಇಂದಿನಿಂದ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳನ್ನು ಪುನರಾರಂಭಿಸಲಾಗಿದೆ.

ಈ ಎಲ್ಲಾ ರಾಜ್ಯಗಳಲ್ಲಿ ಇಂದಿನಿಂದ ಶಾಲೆ ಕಾಲೇಜು ಆರಂಭ

ಹರಿಯಾಣ:

ಹರಿಯಾಣ ರಾಜ್ಯದಲ್ಲಿ ಇಂದಿನಿಂದ 6 ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:30ರ ವರೆಗೆ ತರಗತಿಗಳು ನಡೆಯಲಿವೆ. ವಿದ್ಯಾರ್ಥಿಗಳು ಶಾಲೆಗೆ ಪೋಷಕರ ಅನುಮತಿ ಪತ್ರ ಜೊತೆಗೆ ವೈದ್ಯರಿಂದ ಪ್ರಮಾಣ ಪತ್ರ ತೆಗೆದುಕೊಂಡು ಹಾಜರಾಗಬೇಕಿರುತ್ತದೆ.

ಹಿಮಾಚಲ ಪ್ರದೇಶ:

ಹಿಮಾಚಲ ಪ್ರದೇಶ ಸರ್ಕಾರ ಇಂದಿನಿಂದ 5, 8 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಜ್ಯದ ಬಯಲು ಪ್ರದೇಶಗಳಲ್ಲಿ ಶಾಲೆಗಳನ್ನು ಮತ್ತೆ ತೆರೆಯಲಿದೆ. ಕೈಗಾರಿಕಾ ತರಬೇತಿ ಸಂಸ್ಥೆಗಳು, ಪಾಲಿಟೆಕ್ನಿಕ್ಸ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಇಂದಿನಿಂದ ದೈಹಿಕ ತರಗತಿಗಳನ್ನು ಪ್ರಾರಂಭಿಸಲಿವೆ.

 
ಈ ಎಲ್ಲಾ ರಾಜ್ಯಗಳಲ್ಲಿ ಇಂದಿನಿಂದ ಶಾಲೆ ಕಾಲೇಜು ಆರಂಭ

ಜಮ್ಮು ಮತ್ತು ಕಾಶ್ಮೀರ:

ಜಮ್ಮು ಪ್ರದೇಶದ ಬೇಸಿಗೆ ವಲಯದ ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಇಂದಿನಿಂದ 10 ರಿಂದ 12 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಪುನರಾರಂಭಿಸಲಿವೆ. ಆದಾಗ್ಯೂ, ಕಾಶ್ಮೀರ ವಿಭಾಗ ಮತ್ತು ಜಮ್ಮು ವಿಭಾಗದ ಚಳಿಗಾಲದ ವಲಯ ಪ್ರದೇಶಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಫೆಬ್ರವರಿ 15 ರಿಂದ ಆಫ್‌ಲೈನ್ ತರಗತಿಗಳನ್ನು ಆರಂಭ ಮಾಡಲಿವೆ.

ಮೇಘಾಲಯ:

ಮೇಘಾಲಯವು ಫೆಬ್ರವರಿ 1 ರಿಂದ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳನ್ನು ಪುನರಾರಂಭಿಸಿದೆ. ಆಫ್‌ಲೈನ್ ತರಗತಿಗಳಿಗೆ ಪಾಠ ವ್ಯವಹಾರ, ನಿಯೋಜನೆಗಳು, ಆನ್‌ಲೈನ್ ಸಂವಹನ ಮತ್ತು ಸಮಾಲೋಚನೆಗಾಗಿ ಕಾಲೇಜುಗಳನ್ನು ಮತ್ತೆ ತೆರೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಆದಾಗ್ಯೂ, ಆಫ್‌ಲೈನ್ ತರಗತಿಗಳು ಸಹ ಏಕಕಾಲದಲ್ಲಿ ನಡೆಯಲಿವೆ.

ಈ ಎಲ್ಲಾ ರಾಜ್ಯಗಳಲ್ಲಿ ಇಂದಿನಿಂದ ಶಾಲೆ ಕಾಲೇಜು ಆರಂಭ

ಒಡಿಶಾ:

ಒಡಿಶಾ ಸರ್ಕಾರ ಇಂದಿನಿಂದ ಅಂಗನವಾಡಿ ಕೇಂದ್ರಗಳನ್ನು ಪುನರಾರಂಭಿಸಿದೆ. ರಾಜ್ಯದಲ್ಲಿ ಕ್ಷೀಣಿಸುತ್ತಿರುವ ಕೋವಿಡ್ -19 ಸಕ್ರಿಯ ಪ್ರಕರಣಗಳನ್ನು ಪರಿಗಣಿಸಿ ಒಡಿಶಾ ಅಂಗನವಾಡಿ ಕೇಂದ್ರಗಳನ್ನು ಮತ್ತೆ ತೆರೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪಂಜಾಬ್:

ಪಂಜಾಬ್ ನಲ್ಲಿ ಇಂದಿನಿಂದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಅಂಗನವಾಡಿ ಮತ್ತು ಪೂರ್ವ ಪ್ರಾಥಮಿಕ ತರಗತಿಗಳನ್ನು ತೆರೆಯಲಾಗಿದೆ. ಅಂಗನವಾಡಿ ಕೇಂದ್ರಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಕಾರ್ಯನಿರ್ವಹಿಸಲಿದ್ದು, ಪೂರ್ವ ಪ್ರಾಥಮಿಕ ತರಗತಿಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಕಾರ್ಯನಿರ್ವಹಿಸಲಿವೆ.

ಈ ಎಲ್ಲಾ ರಾಜ್ಯಗಳಲ್ಲಿ ಇಂದಿನಿಂದ ಶಾಲೆ ಕಾಲೇಜು ಆರಂಭ

ತೆಲಂಗಾಣ:

ತೆಲಂಗಾಣ ರಾಜ್ಯವು ಇಂದಿನಿಂದ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ಮತ್ತು ಕಾಲೇಜುಗಳನ್ನು ಮತ್ತೆ ತೆರೆಯಲಿದೆ. ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 4:45 ರವರೆಗೆ ಶಾಲೆಗಳು ಕಾರ್ಯನಿರ್ವಹಿಸಲಿದ್ದು, ಹೈದರಾಬಾದ್ ಮತ್ತು ಸಿಕಂದರಾಬಾದ್‌ನಲ್ಲಿ ಬೆಳಿಗ್ಗೆ 8:45 ರಿಂದ ಸಂಜೆ 4 ರವರೆಗೆ ನಡೆಯಲಿದೆ. 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮತ್ತು ಡಿಜಿಟಲ್ ತರಗತಿಗಳು ಬೆಳಿಗ್ಗೆ 10 ರಿಂದ 11 ರವರೆಗೆ ಮತ್ತು 9 ನೇ ತರಗತಿಗೆ ಸಂಜೆ 4 ರಿಂದ ಸಂಜೆ 5 ರವರೆಗೆ ನಡೆಯಲಿದೆ.

ಕರ್ನಾಟಕ:

ಕರ್ನಾಟಕ ಸರ್ಕಾರವು ಇಂದಿನಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳನ್ನು ಪುನರಾರಂಭಿಸಲಿದೆ.

For Quick Alerts
ALLOW NOTIFICATIONS  
For Daily Alerts

English summary
Schools and colleges are reopening in these states from today. check list here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X