ವಿದ್ಯಾರ್ಥಿಗಳ ಬೇಡಿಕೆಗೆ ವಿರೋಧವಾದ ನಿರ್ಧಾರದಿಂದ ವಿಟಿಯು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಎಕ್ಸಿಟ್ ವಿಚಾರವಾಗಿ ವಿದ್ಯಾರ್ಥಿಗಳು ಮುಂದಿಟ್ಟಿದ್ದ ಬೇಡಿಕೆಯನ್ನು ವಿಟಿಯು ಕಡೆಗಣಿಸಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ಶೈಕ್ಷಣಿಕ ಹಾಗು ಕಾರ್ಯನಿರ್ವಾಹಕ ಸದಸ್ಯರ ಸಭೆಯಲ್ಲಿ ವಿದ್ಯಾರ್ಥಿಗಳ ಬೇಡಿಕೆಗಳಿಗೆ ವಿರುದ್ಧವಾಗಿ ನಿರ್ಧಾರ ತೆಗೆದುಕೊಂಡಿದ್ದು ಇದರಿಂದಾಗಿ ವಿದ್ಯಾರ್ಥಿಗಳು ಬೇಸರಗೊಂಡಿದ್ದಾರೆ.

ವಿದ್ಯಾರ್ಥಿಗಳ ಬೇಡಿಕೆ
ನಾನ್ ಸಿಬಿಸಿಎಸ್ ನಿಂದ ಸಿಬಿಸಿಎಸ್ ವರ್ಗಾವಣೆಗೊಂಡಿರುವ ವಿದ್ಯಾರ್ಥಿಗಳು 5ನೇ ಸೆಮಿಸ್ಟರ್ ನಲ್ಲಿ ಎಕ್ಸಿಟ್ ನೀಡುವಂತೆ ಕೇಳಿದ್ದರು. ಸದ್ಯ ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ಪಡೆದ ಡಿಪ್ಲೊಮಾ ವಿದ್ಯಾರ್ಥಿಗಳು 6 ವರ್ಷಗಳ ಅವಧಿಯಲ್ಲಿ ಪದವಿ ಮುಗಿಸಿಕೊಳ್ಳಬೇಕಿದೆ.
ಕೆಲ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿರುವುದರಿಂದ 6 ವರ್ಷದ ಅವಧಿ ವಿಸ್ತರಿಸುವಂತೆ ಕೋರಲಾಗಿತ್ತು. ಲ್ಯಾಟರಲ್ ಎಂಟ್ರಿಗೆ ಎಂಸಿಎ ವಿದ್ಯಾರ್ಥಿಗಳು ಕೂಡ ಎಕ್ಸಿಟ್ ಕೇಳಿದ್ದರು.
ವಿಟಿಯು ನಿರ್ಧಾರ
ಈ ಯಾವ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲವೆಂದು ಸಭೆ ನಿರ್ಣಯ ತೆಗೆದುಕೊಂಡಿದೆ. ನಪಾಸಾದ ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷೆ ಆಯೋಜಿಸಿ ಅವಕಾಶ ಕಲ್ಪಿಸಲಾಗಿದೆ. ಉತ್ತೀರ್ಣರಾಗದ ವಿದ್ಯಾರ್ಥಿಗಳು ಮತ್ತೊಮ್ಮೆ ಅವಕಾಶ ಕೇಳಿದ್ದಾರೆ. ನಿಯಮಗಳ ಹೊರತು ಏನನ್ನು ಮಾಡಲು ಸಾಧ್ಯವಿಲ್ಲವೆಂದು ಸಭೆ ನಿರ್ಧಾರ ತೆಗೆದುಕೊಂಡಿದೆ.


Click it and Unblock the Notifications











