ಐಐಟಿ ಪ್ಲೇಸ್ಮೆಂಟ್ ಸೀಸನ್: 11.41 ಲಕ್ಷ ಸಂಬಳಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

ಐಐಟಿ ಮುಂಬೈ ವಿದ್ಯಾಸಂಸ್ಥೆಯ ಪ್ಲೇಸ್ಮೆಂಟ್ ಸೀಸನ್ 2016-17 ರಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಲ್ಲಿ 1114 ಮಂದಿಗೆ ಸರಾಸರಿ ವಾರ್ಷಿಕ ಸಂಬಳ 11.41 ಲಕ್ಷ ರೂಪಾಯಿು ಉದ್ಯೋಗ ಲಭಿಸಿದೆ.

ಐಐಟಿ-ಮುಂಬೈ ಮಹಾ ವಿದ್ಯಾಸಂಸ್ಥೆಯ ಸಾವಿರಾರು ಅಭ್ಯರ್ಥಿಗಳು ಭಾರಿ ಮೊತ್ತದ ಸಂಬಳವಿರುವ ಉದ್ಯೋಗ ಪಡೆದುಕೊಂಡಿದ್ದಾರೆ.

ಐಐಟಿ ಮುಂಬೈ ವಿದ್ಯಾಸಂಸ್ಥೆಯ ಪ್ಲೇಸ್ಮೆಂಟ್ ಸೀಸನ್ 2016-17 ರಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಲ್ಲಿ 1114 ಮಂದಿಗೆ ಸರಾಸರಿ ವಾರ್ಷಿಕ ಸಂಬಳ 11.41 ಲಕ್ಷ ರೂಪಾಯಿು ಉದ್ಯೋಗ ಲಭಿಸಿದೆ.

ಐಐಟಿ ಪ್ಲೇಸ್ಮೆಂಟ್ ಸೀಸನ್

ಖ್ಯಾತ ಅಂತರಾಷ್ಟ್ರೀಯ ಸಂಸ್ಥೆಗಳು ಒಳಗೊಂಡಂತೆ ಒಟ್ಟು 305 ಕಂಪನಿಗಳು ನೇಮಕಾತಿಯಲ್ಲಿ ಭಾಗವಹಿಸಿದ್ದವು. ಎರಡು ಹಂತಗಳಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕಂಪನಿಗಳು ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ, ಕನ್ಸಲ್ಟಿಂಗ್, ಅನಾಲಿಟಿಕ್ಸ್ ಮತ್ತು ಸಾಫ್ಟ್​ವೇರ್ ಸೇರಿದಂತೆ ಅನೇಕ ವಿಭಾಗಗಳಿಗೆ ನಾನಾ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡವು.

ಪ್ರಮುಖ ಕಂಪನಿಗಳು

Airbus Group, Bain & Company, Boston Consulting Group, Google, Goldman Sachs, Intel, Microsoft, ONGC, Procter & Gamble, Samsung R&D, Texas Instruments, Tata Steel and Qualcomm, ನೇಮಕ ಮಾಡಿಕೊಂಡ ಪ್ರಮುಖ ಕಂಪನಿಗಳು.

ಜಪಾನ್ ಮತ್ತು ಸಿಂಗಾಪೂರದಿಂದ ಬಂದ ಕಂಪನಿಗಳು ಹೆಚ್ಚು ಅಭ್ಯರ್ಥಿಗಳನ್ನ ನೇಮಕ ಮಾಡಿಕೊಂಡ ಅಂತರಾಷ್ಟ್ರೀಯ ಕಂಪನಿಗಳು. Murata Group Japan, NEC Japan ಮತ್ತು Schlumberger Asia Services ನೇಮಕಾತಿ ಮಾಡಿಕೊಂಡ ಪ್ರಮುಖ ಅಂತರಾಷ್ಟ್ರೀಯ ಕಂಪನಿಗಳು.

ಈ ಬಾರಿ ನೂತನ ಪದವಿಧರರನ್ನು ಸಂಶೋಧನೆ ಮತ್ತು ಅಭಿವೃದ್ಧಿ (ರಿಸರ್ಚ್ ಆ್ಯಂಡ್ ಡೆವಲಪಮೆಂಟ್) ವಿಭಾಗಕ್ಕೆ ನೇಮಕ ಮಾಡಿಕೊಂಡಿರುವ ಹೊಸ ಬೆಳವಣಿಗೆಯನ್ನು ಐಐಟಿ-ಬಿ ಗಮನಿಸಿದೆ. ಒಟ್ಟು 32 ರಿಸರ್ಚ್ ಆ್ಯಂಡ್ ಡೆವಲಪಮೆಂಟ್ ಸಂಸ್ಥೆಗಳು 118 ಆಕಾಂಕ್ಷಿಗಳಿಗೆ ಉದ್ಯೋಗ ನೀಡಿವೆ.

ಒಟ್ಟು 67 ವಿದೇಶ ಉದ್ಯೋಗಾವಕಾಶಗಳನ್ನು ಸಂಸ್ಥೆಗಳು ನೀಡಿದ್ದರೇ, ವಿದ್ಯಾಭ್ಯಾಸ ಮುಕ್ತಾಯಗೊಳ್ಳುವ ಮುಂಚೆಯೇ (ಪ್ರೀ-ಪ್ಲೇಸ್​ಮೆಂಟ್) 59 ವಿದ್ಯಾರ್ಥಿಗಳು ನೌಕರಿ ಗಿಟ್ಟಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸಹಕಾರಿಯಾದ ಇಂಟರ್ನಶಿಪ್

ಕೆಲವು ವರ್ಷಗಳಿಂದ ಇಂಟರ್ನ್​ಶಿಪ್ ಕೂಡ ಪ್ರಾಮುಖ್ಯತೆ ಪಡೆದಿದ್ದು, ವಿದ್ಯಾರ್ಥಿಗಳಿಗೆ ಒಂದು ಸಂಸ್ಥೆ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಮತ್ತು ಯಾವ ಉದ್ಯೋಗ ಅವರಿಗೆ ಹೊಂದಾಣಿಕೆ ಆಗುತ್ತದೆ ಎಂದು ತಿಳಿಸುವಲ್ಲಿ ಇಂಟರ್ನ್​ಶಿಪ್ ಸಹಕಾರಿಯಾಗಿದೆ. ಈ ಬಾರಿ ಒಟ್ಟು 650 ಸಂಸ್ಥೆಗಳು 1,107 ಇಂಟರ್ನ್​ಶಿಪ್ ನೀಡಿವೆ ಎಂದು ಪ್ರಕಟಣೆ ತಿಳಿಸಿದೆ.

For Quick Alerts
ALLOW NOTIFICATIONS  
For Daily Alerts

English summary
Over 300 companies, including top -notch MNCs, took part in the 2016-17 placement season at IIT Bombay (IIT-B), where 1,114 jobs were offered with an average gross salary of Rs11.41 lakh per annum.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X