ಜೆಇಇ ರ್ಯಾಂಕಿಂಗ್ ಕುರಿತು ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್

Posted By:

ಜೆಇಇ 2017 ರ ರ್ಯಾಂಕ್ ಪಟ್ಟಿಯನ್ನು ರದ್ದುಗೊಳಿಸುವ ವಿಚಾರವಾಗಿ ಕೋರಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಜೆಇಇ ಸಂಘಟನಾ ಸಮಿತಿಗೆ ಡಿವಿಷನ್ ಬೆಂಚ್ ನೋಟಿಸ್ ನೀಡಿದೆ.

ರ್ಯಾಂಕ್ ಲಿಸ್ಟ್ ರದ್ದುಗೊಳಿಸುವಂತೆ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು, ಅಲ್ಲದೇ ಹೊಸದಾಗಿ ಕೌನ್ಸಲಿಂಗ್ ನಡೆಸುವಂತೆ ಅರ್ಜಿಯಲ್ಲಿ ತಿಳಿಸಿದ್ದರು. ಈ ಕುರಿತು ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು ಪೂರ್ಣ ವಿವರ ಸಲ್ಲಿಸುವಂತೆ ತಿಳಿಸಿದೆ.

ಜೆಇಇ ರ್ಯಾಂಕ್ ವಿವಾದ: ವಿವರ ಕೇಳಿದ ಸುಪ್ರೀಂ ಕೋರ್ಟ್

ಇದರ ನಡುವೆ ಜೆಇಇ ಅಡ್ವಾನ್ಸ್ಡ್ 2017 ನೇ ಸಾಲಿನ ಸೀಟು ಹಂಚಿಕೆಯು ಜೂನ್ 27 ರಂದು ಪ್ರಾರಂಭವಾಗಿದೆ. ಐಐಟಿಯಲ್ಲಿನ ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಗಾಗಿ ಕೌನ್ಸಲಿಂಗ್ ವೇಳೆ ವಿದ್ಯಾರ್ಥಿಗಳು ಸಲ್ಲಿಸಿರುವ ಆಯ್ಕೆ ಮತ್ತು ಲಭ್ಯವಿರುವ ಒಟ್ಟು ಸ್ಥಾನಗಳ ಆಧಾರದ ಮೇಲೆ ಕಟ್ಆಫ್ ನಿರ್ಧರಿಸಲಾಗಿದೆ.

ಕಟ್ ಆಫ್ ವಿವರ

ಐಐಟಿ ಬಾಂಬೆಗೆ ಒಪನ್ ಕೆಟಗಿರಯಲ್ಲಿ ಕಟ್ ಆಫ್ ರ್ಯಾಂಕ್ 60 ಕ್ಕೆ ನಿಂತಿದ್ದರೆ ಐಐಟಿ ದೆಹಲಿ 115ಕ್ಕೆ ನಿಂತಿದೆ. ಇನ್ನುಳಿದಂತೆ ಐಐಟಿ ಮದ್ರಾಸ್  173  ಐಐಟಿ ಕಾನ್ಪುರ್ಗೆ 230 ಹಾಗೂ ಐಐಟಿ ರೂರ್ಕಿಯಲ್ಲಿ 482 ನೇ ರ್ಯಾಂಕ್ ಗೆ ಕಟ್ ಆಫ್ ನಿಲ್ಲಿಸಿದೆ.

English summary
The Supreme Court on Friday issued notices to the government on a petition that sought quashing of the JEE 2017 rank list. The notices were issued by a Division Bench to the HRD ministry and JEE's organising committee.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia