ದೂರ ಶಿಕ್ಷಣ ಮೂಲಕ ಇಂಜಿನಿಯರಿಂಗ್ ಗೆ ಬ್ರೇಕ್ ಹಾಕಿದ ಸುಪ್ರೀಂ ಕೋರ್ಟ್

Posted By:

ದೂರ ಶಿಕ್ಷಣ ವ್ಯವಸ್ಥೆ ಮೂಲಕ ಇಂಜಿನಿಯರಿಂಗ್ ಶಿಕ್ಷಣ ನೀಡುವುದನ್ನು ನಿರ್ಬಂಧಿಸಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ.

2005ರ ಬಳಿಕ ದೂರ ಶಿಕ್ಷಣದ ಮೂಲಕ ಪಡೆದ ಎಲ್ಲಾ ತಾಂತ್ರಿಕ ಪದವಿಗಳು ಅನೂರ್ಜಿತ ಎಂದು ಘೋಷಿಸಿದೆ.

ದೂರ ಶಿಕ್ಷಣದ ತಾಂತ್ರಿಕ ಕೋರ್ಸ್ ರದ್ದು

ಪ್ರಮುಖವಾಗಿ ನಾಲ್ಕು ಡೀಮ್ಡ್ ವಿವಿಗಳಾದ ರಾಜಸ್ಥಾನದ ಜೆಆರ್ ಎನ್ ರಾಜಸ್ಥಾನ ವಿದ್ಯಾಪೀಠ, ರಾಜಸ್ಥಾನದ ಇನ್ಸ್ಟಿಟ್ಯುಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಸಂಸ್ಥೆ, ಅಲಹಾಬಾದ್ ನ ಕೃಷಿ ಶಿಕ್ಷಣ ಸಂಸ್ಥೆ, ತಮಿಳು ನಾಡಿನ ವಿನಾಯಕ ಮಿಷನ್ ಸಂಶೋಧನಾ ಪ್ರತಿಷ್ಠಾನದಿಂದ ದೂರ ಶಿಕ್ಷಣದ ಮೂಲಕ ಇಂಜಿನಿಯರಿಂಗ್ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳ ಡಿಗ್ರಿಗಳನ್ನು ರದ್ದುಪಡಿಸಲಾಗಿದೆ.

ನಾಲ್ಕು ಡೀಮ್ಡ್ ವಿವಿಗಳಿಂದ 2001 ರಿಂದಲೇ ಪಡೆದ ಪದವಿಗಳು ಅನೂರ್ಜಿತ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತಾದರೂ ಬಳಿಕ 2001 ರಿಂದ 2005 ರ ವರೆಗೆ ಪದವಿ ಪಡೆದವರಿಗೆ ವಿನಾಯಿತಿ ನೀಡಿತು.

ಈ ಅವಧಿಯಲ್ಲಿ ಡಿಗ್ರಿ ಪಡೆದವರು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಗಳಿಗೆ ಹಾಜರಾಗುವುದಕ್ಕೆ ಅನುಮತಿ ನೀಡಿತು.

ಡಿಗ್ರಿ ರದ್ದತಿ ಮಾತ್ರವಲ್ಲ, ಅದರ ಅಧಾರದಲ್ಲಿ ನೀಡಲಾದ ಎಲ್ಲಾ ಸವಲತ್ತುಗಳನ್ನು ಹಿಂದೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

English summary
The Supreme Court on Friday ruled that technical education cannot be provided through the process of correspondence courses.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia