ಸುಷ್ಮಾ ಸ್ವರಾಜ್ ಅವರ ಶೈಕ್ಷಣಿಕ ಜೀವನಚರಿತ್ರೆ ಮತ್ತು ರಾಜಕೀಯ ವೃತ್ತಿ: ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಭಾರತೀಯ ಜನತಾ ಪಕ್ಷದ ನಾಯಕರಾಗಿ ಹೆಸರುವಾಸಿಯಾದ ಸುಷ್ಮಾ ಸ್ವರಾಜ್ ಅವರು ಎಲ್ಲಾ ಪಕ್ಷದ ವ್ಯಾಪ್ತಿಯಲ್ಲಿ ವಿಶೇ‍ಷ ರಾಜಕಾರಣಿಗಳಲ್ಲಿ ಒಬ್ಬರು ಎಂದೇ ಹೇಳಬಹುದು.

ಸುಷ್ಮಾ ಸ್ವರಾಜ್ ಅವರ ಶೈಕ್ಷಣಿಕ ಜೀವನಚರಿತ್ರೆ

ಸುಷ್ಮಾ ಸ್ವರಾಜ್‌ ರವರು ಫೆಬ್ರವರಿ 14, 1952 ರಲ್ಲಿ ಹರಿಯಾಣದ ಅಂಬಾಲಾ ಕ್ಯಾಂಟ್ನಲ್ಲಿ ಜನಿಸಿದರು. ಅವರು ತಮ್ಮ 25 ನೇ ವಯಸ್ಸಿನಲ್ಲಿ ( 1977) ಹರಿಯಾಣದ ಕ್ಯಾಬಿನೆಟ್ ಮಂತ್ರಿಯಾದರು ಮತ್ತು ಇಂದಿರಾ ಗಾಂಧಿ ನಂತರ ವಿದೇಶಾಂಗ ಸಚಿವೆಯಾದ ಅತ್ಯಂತ ಕಿರಿಯ ಮಹಿಳೆ ಎಂಬ ಪಾತ್ರಕ್ಕೆ ಹೆಗ್ಗಳಿಕೆಯಾಗಿದ್ದಾರೆ.

ಸುಷ್ಮಾ ಸ್ವರಾಜ್ ಅವರ ಶೈಕ್ಷಣಿಕ ಹಿನ್ನೆಲೆ:

* ಸುಷ್ಮಾ ಸ್ವರಾಜ್ ಅವರು ಅಂಬಾಲಾ ಕಂಟೋನ್ಮೆಂಟ್‌ನ ಸನಾತನ ಧರ್ಮ ಕಾಲೇಜಿನಲ್ಲಿ ಪದವಿ ಮುಗಿಸಿದರು ಮತ್ತು ರಾಜಕೀಯ, ವಿಜ್ಞಾನ ಮತ್ತು ಸಂಸ್ಕೃತದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.

* ನಂತರ ಛಂದೀಘರ್‌ನ ಪಂಜಾಬ್ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಎಲ್ ಎಲ್ ಬಿ ಯಲ್ಲಿ ಪದವಿ ಮಾಡಿದರು. 1970 ರಲ್ಲಿ ಅಂಬಾಲಾ ಕಂಟೋನ್ಮೆಂಟ್‌ನ ಎಸ್‌ಡಿ ಕಾಲೇಜಿನಲ್ಲಿ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾದರು.

* ಎಸ್‌ಡಿ ಕಾಲೇಜಿನಲ್ಲಿ ಸತತ ಮೂರು ವರ್ಷಗಳ ಕಾಲ ಸುಷ್ಮಾ ಎನ್‌ಸಿಸಿಯ ಅತ್ಯುತ್ತಮ ಕೆಡೆಟ್ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದರು.

* ಸತತ ಮೂರು ವರ್ಷಗಳ ಕಾಲ, ಹರಿಯಾಣದ ಭಾಷಾ ಇಲಾಖೆಯು ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಹಿಂದಿ ಭಾಷಣಕಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

* ಎಸಿ ಬಾಲಿ ಸ್ಮಾರಕ ಘೋಷಣೆ ಸ್ಪರ್ಧೆಯಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ಹಿಂದಿ ಭಾಷೆಯ ಅತ್ಯುತ್ತಮ ಭಾಷಣಕಾರ್ತಿ ಎಂದೇ ಖ್ಯಾತಿಪಡೆದರು.

* ಪಠ್ಯೇತರ ಚಟುವಟಿಕೆಗಳಲ್ಲಿ ಸುಷ್ಮಾ ಸ್ವರಾಜ್ ಹೆಚ್ಚು ತೊಡಗಿಕೊಂಡಿದ್ದರು. ಚರ್ಚೆಗಳು, ಭಾಷಣ ಸ್ಪರ್ಧೆಗಳು, ಪಠಣಗಳು, ನಾಟಕಗಳು ಮತ್ತು ಇತರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಕವನ ಮತ್ತು ಸಾಹಿತ್ಯವನ್ನು ತೀವ್ರವಾಗಿ ಓದುತ್ತಿದ್ದರಲ್ಲದೇ, ಶಾಸ್ತ್ರೀಯ ಸಂಗೀತ, ಕವನ, ಲಲಿತಕಲೆ ಮತ್ತು ನಾಟಕಗಳ ಬಗ್ಗೆಯೂ ಆಸಕ್ತಿ ವಹಿಸಿದ್ದರು.

* ಅವರು ನಾಲ್ಕು ವರ್ಷಗಳ ಕಾಲ ಹರಿಯಾಣ ರಾಜ್ಯದ ಹಿಂದಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಕೂಡ ಆಗಿದ್ದರು.

ರಾಜಕೀಯ ಜೀವನದ ಪ್ರಮುಖ ಘಟ್ಟಗಳ ಸಂಕ್ಷಿಪ್ತ ಚಿತ್ರಣ:

1977 ರಲ್ಲಿ: ಹರಿಯಾಣ ವಿಧಾನಸಭೆಗೆ ಮೊದಲ ಬಾರಿ ಆಯ್ಕೆಯಾದರು.

1979-82 ರಲ್ಲಿ: ದೇವಿಲಾಲ್‌ ಮಂತ್ರಿಮಂಡಳದಲ್ಲಿ ಸಂಪುಟ ಸಚಿವೆಯಾದರು.

1982, 87 ರಲ್ಲಿ: ಶಾಸಕಿಯಾಗಿ ಮರು ಆಯ್ಕೆಗೊಂಡರು.

1987-90 ರಲ್ಲಿ: ಹರಿಯಾಣದ ಬಿಜೆಪಿ-ಲೋಕದಳ ಸರಕಾರದಲ್ಲಿ ಸಚಿವೆಯಾದರು.

1990 ರಲ್ಲಿ: ಮೊದಲ ಸಲ ರಾಜ್ಯಸಭೆಗೆ ಆಯ್ಕೆಯಾದರು.

1996 ರಲ್ಲಿ: ಲೋಕಸಭೆಗೆ ಆಯ್ಕೆಯಾದುರು ಹಾಗೂ ವಾಜಪೇಯಿ ಸಂಪುಟದಲ್ಲಿ ಸಚಿವೆಯಾದರು.

1998 ರಲ್ಲಿ: ಲೋಕಸಭೆಗೆ ಮರು ಆಯ್ಕೆಗೊಂಡು ಕೇಂದ್ರ ಮಂತ್ರಿಮಂಡಳದಲ್ಲಿ ಸಚಿವೆಯಾದರು.

1998 ರಲ್ಲಿ: ಅಕ್ಟೋಬರ್‌ನಿಂದ ಡಿಸೆಂಬರ್‌ ವರೆಗೆ ದಿಲ್ಲಿ ಮುಖ್ಯಮಂತ್ರಿಯಾದರು.

2000-06 ರಲ್ಲಿ: ರಾಜ್ಯಸಭೆ ಸದಸ್ಯೆಯಾದರು ವಾಜಪೇಯಿ ಸಂಪುಟದಲ್ಲಿ ಮಹತ್ವದ ಖಾತೆಗಳ ನಿರ್ವಹಣೆ ಮಾಡಿದರು.

2009 ರಲ್ಲಿ: ಲೋಕಸಭೆಗೆ ಮರು ಆಯ್ಕೆಗೊಂಡರು, ಪ್ರತಿಪಕ್ಷ ನಾಯಕಿಯಾಗಿ ಕಾರ್ಯನಿರ್ವಜಹಿಸಿದರು.

2014 ರಲ್ಲಿ: ಲೋಕಸಭೆಗೆ ಆಯ್ಕೆಗೊಂಡು ಮೋದಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ ಕಾರ್ಯನಿರ್ವಹಿಸಿದರು.

For Quick Alerts
ALLOW NOTIFICATIONS  
For Daily Alerts

English summary
Sushma Swaraj passed away at the age of 67. Know about her education biography & political career. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X