Swachh Vidyalaya Puraskar 2021-2022 : 'ಸ್ಚಚ್ಛ ವಿದ್ಯಾಲಯ ಪುರಸ್ಕಾರ' ಕ್ಕೆ ಅರ್ಜಿ ಆಹ್ವಾನ

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಸ್ಚಚ್ಛ ವಿದ್ಯಾಲಯ ಪುರಸ್ಕಾರ ಯೋಜನಾ ಸ್ಪರ್ಧೆ 2021-22ಗೆ ಅರ್ಜಿಯನ್ನು ಆಹ್ವಾನಿಸಿದೆ. ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ನಗರ, ಗ್ರಾಮೀಣ ವಿಭಾಗದಲ್ಲಿ ಶಾಲೆ ಆವರಣ, ತರಗತಿಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯದ ಅಭ್ಯಾಸ ಉತ್ತೇಜನಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

 
'ಸ್ಚಚ್ಛ ವಿದ್ಯಾಲಯ ಪುರಸ್ಕಾರ'ಕ್ಕೆ ಅರ್ಜಿ ಆಹ್ವಾನ

ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುತ್ತಿರುವ ಶಾಲೆಗಳನ್ನು ಗುರುತಿಸಿ ಪುರಸ್ಕರಿಸುವ ಜೊತೆಗೆ ಇನ್ನಿತರೆ ಶಾಲೆಗಳಿಗೂ ಸ್ಪೂರ್ತಿ ನೀಡುವ ಉದ್ದೇಶವನ್ನು ಹೊಂದಿದೆ. ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಆಯೋಜಿಸುವ 'ಸ್ಚಚ್ಛ ವಿದ್ಯಾಲಯ ಪುರಸ್ಕಾರ 2021-2022' ರಲ್ಲಿ ಸರ್ಕಾರಿ ಶಾಲೆಗಳು, ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಭಾಗವಹಿಸಲು ಅವಕಾಶ ನೀಡಲಾಗಿದೆ.

ಶಾಲೆಗಳಲ್ಲಿನ ನೀರು, ಶೌಚಾಲಯ, ಸಾಬೂನಿನಿಂದ ಕೈ ತೊಳೆಯೋ ಅಭ್ಯಾಸ, ಉತ್ತಮ ಕಾರ್ಯವಿಧಾನ ಮತ್ತು ನಿರ್ವಹಣೆ ಹಾಗೂ ನಡವಳಿಕೆಯಲ್ಲಿನ ಬದಲಾವಣೆ ಮತ್ತು ಸಾಮರ್ಥ್ಯ ವೃದ್ಧಿಯ ಮಾನದಂಡವನ್ನಾಧರಿಸಿ ಶಾಲೆಗಳ ಶುಚಿತ್ಚವನ್ನು ಪರಿಶೀಲಿಸಲಾಗುತ್ತದೆ.
ಸ್ಚಚ್ಛ ವಿದ್ಯಾಲಯ ಪುರಸ್ಕಾರಕ್ಕೆ ಆಯ್ಕೆಯಾಗುವ ಶಾಲೆಗಳಿಗೆ 50.ಸಾವಿರ ರೂ. ಬಹುಮಾನ, ಪ್ರಮಾಣ ಪತ್ರ ಪ್ರದಾನವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಮಾಡಲಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಸ್ವಚ್ಛ ವಿದ್ಯಾಲಯ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಸ್ಚಚ್ಛ ವಿದ್ಯಾಲಯ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ?:

ಸ್ಟೆಪ್‌ 1 : ಮೊದಲು ಅಧಿಕೃತ ವೆಬ್‌ಸೈಟ್ https://swachhvidyalayapuraskar.com/ ಗೆ ಭೇಟಿ ನೀಡಿ.
ಸ್ಟೆಪ್ 2 : ನಂತರ ಹೋಂ ಪೇಜ್ ನಲ್ಲಿ ಲಭ್ಯವಿರುವ Apply ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಭ್ಯರ್ಥಿಗಳು ಅಲ್ಲಿ Sign Up ಅಥವಾ Login ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4 : ನಂತರ ನಿಮ್ಮ UDISE+ Code ಅನ್ನು ನೀಡಿ (ಒಂದು ನಿಮ್ಮ ಬಳಿ ಈ ಕೋಡ್ ಇಲ್ಲದಿದ್ದಲ್ಲಿ Data capture Fomat ಡೌನ್‌ಲೋಡ್ ಮಾಡಿ ಕೋಡ್ ಪಡೆದುಕೊಳ್ಳಿ)
ಸ್ಟೆಪ್ 5 : ನಿಗದಿತ ಜಾಗದಲ್ಲಿ ಆ ಕೋಡ್ ಅನ್ನು ತುಂಬಿ ನಂತರ ಆನ್‌ಲೈನ್ ಸಮೀಕ್ಷೆಗೆ ಉತ್ತರಿಸಿ
ಸ್ಟೆಪ್ 6 : ಈಗ ಸಂಪೂರ್ಣವಾಗಿ ನಿಮ್ಮ ಅರ್ಜಿಯನ್ನು ಸಬಿಮಿಟ್ ಮಾಡಿ

 

ಪ್ರಮುಖ ದಿನಾಂಕಗಳು :

ಶಾಲೆಗಳಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ : ಜನವರಿ -ಮಾರ್ಚ್ 2022
ಪುರಸ್ಕಾರಕ್ಕೆ ಜಿಲ್ಲಾ ಮಟ್ಟದಲ್ಲಿ ಶಾಲೆಗಳ ಆಯ್ಕೆ : ಏಪ್ರಿಲ್ 1 -ಮೇ 15,2022
ರಾಜ್ಯ/ಕೇಂದ್ರಾಡಳಿತ ಮಟ್ಟದ ಪುರಸ್ಕಾರ ಫಲಿತಾಂಶ : ಮೇ 22,2022
ರಾಜ್ಯ/ಕೇಂದ್ರಾಡಳಿತ ಮಟ್ಟದಲ್ಲಿ ಶಾಲೆಗಳ ಆಯ್ಕೆ : ಮೇ 22 - ಜೂನ್ 30,2022
ರಾಷ್ಟ್ರೀಯ ಮಟ್ಟದ ಫಲಿತಾಂಶ : ಜುಲೈ 1- ಜುಲೈ 7,2022
ರಾಷ್ಟ್ರೀಯ ಮಟ್ಟದಲ್ಲಿ ಪರಿಶೀಲನೆ : ಜುಲೈ 7 - ಸೆಪ್ಟೆಂಬರ್ 7,2022
ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ತಾತ್ಕಾಲಿಕ ದಿನಾಂಕ : ಅಕ್ಟೋಬರ್ 15,2022

ಸ್ವಚ್ಛ ವಿದ್ಯಾಲಯ ಪುರಸ್ಕಾರ :

ಸ್ವಯಂ ಪ್ರೇರಣೆ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2016-17 ರಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸ್ವಚ್ಛ ವಿದ್ಯಾಲಯ ಪುರಸ್ಕಾರವನ್ನು ಸ್ಥಾಪಿಸಲಾಯಿತು.

ಎಸ್ ವಿ ಪಿ 2021-22 ಎಲ್ಲಾ ವರ್ಗದ ಶಾಲೆಗಳಿಗೆ ಅಂದರೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಮುಕ್ತವಾಗಿದೆ. ಶಾಲೆಗಳನ್ನು ಆನ್‌ಲೈನ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ 6 ಉಪ-ವರ್ಗಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ: ನೀರು, ನೈರ್ಮಲ್ಯ, ಸಾಬೂನಿನಿಂದ ಕೈ ತೊಳೆಯುವುದು, ಕಾರ್ಯಾಚರಣೆ ಮತ್ತು ನಿರ್ವಹಣೆ, ನಡವಳಿಕೆ ಬದಲಾವಣೆ ಮತ್ತು ಸಾಮರ್ಥ್ಯ ವರ್ಧನೆ ಮತ್ತು ಹೊಸದಾಗಿ ಸೇರಿಸಲಾದ ಕೋವಿಡ್-19 ಸಿದ್ಧತೆ ಮತ್ತು ಪ್ರತಿಕ್ರಿಯೆಯ ಕುರಿತು ವ್ಯವಸ್ಥೆಯು ಒಟ್ಟಾರೆ ಸ್ಕೋರ್ ಮತ್ತು ರೇಟಿಂಗ್ ಅನ್ನು ಸ್ವಯಂಚಾಲಿತವಾಗಿ ನೀಡುತ್ತದೆ. ಶಾಲೆಗಳು ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 2022 ರವರೆಗೆ ಸಮಯವನ್ನು ನೀಡಲಾಗಿದೆ. ಆದ್ದರಿಂದ ಅವರು ಸೂಕ್ತ ಮತ್ತು ಸುರಕ್ಷಿತ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಪಂಚತಾರಾ ರೇಟಿಂಗ್ ವ್ಯವಸ್ಥೆಯನ್ನು ಆಧರಿಸಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಶಾಲೆಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಅಲ್ಲದೆ, ಪ್ರತಿ ಶಾಲೆಯು ವರ್ಗವಾರು ಅಂಕಗಳು ಮತ್ತು ಶಾಲೆಯ ಒಟ್ಟಾರೆ ರೇಟಿಂಗ್ ಅನ್ನು ತೋರಿಸುವ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಪಡೆಯುತ್ತದೆ. ಶಾಲೆಗಳಲ್ಲಿ ಸುಧಾರಿತ ನೀರು, ನೈರ್ಮಲ್ಯ ಮತ್ತು ಸ್ವಚ್ಛತೆಯ ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Swachh Vidyalaya Puraskar 2021-22 to recognize, inspire and celebrate excellence in sanitation and hygiene practice in schools. Here is how to apply and School Can Apply Till March-End. Know more.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X