Prize Money For Students 2022: ಪ್ರೋತ್ಸಾಹಧನಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ..ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನ

ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ವಿವಿಧ ಕೋರ್ಸ್‌ಗಳನ್ನು ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ. ವಿವಿಧ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಮಾತ್ರ ಈ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿರುತ್ತದೆ.

 
ಪ್ರೋತ್ಸಾಹಧನಕ್ಕಾಗಿ ಪ.ಜಾ ಮತ್ತು ಪ.ಪಂಗಡ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ. ಆನ್‌ಲೈನ್‌ ಅರ್ಜಿಗಳನ್ನು ಮಾತ್ರ ಸಲ್ಲಿಸಬೇಕು. ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ಕಾಲೇಜಿನ ಹೆಸರು ಇಲ್ಲದೆ ಇರುವ ಸಂದರ್ಭದಲ್ಲಿ ಕಾಲೇಜಿನ ಹೆಸರನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಸೇರಿಸಲು ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ / ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಲು ಸೂಚಿಸಲಾಗಿದೆ.

ಕೋರ್ಸ್ ಅನುಸಾರ ಪ್ರೋತ್ಸಾಹಧನ ಮೊತ್ತ ಹೀಗಿದೆ :

ಕೋರ್ಸ್ ಅನುಸಾರ ಪ್ರೋತ್ಸಾಹಧನ ಮೊತ್ತ ಹೀಗಿದೆ :

ದ್ವಿತೀಯ ಪಿಯುಸಿ, 3 ವರ್ಷದ ಪಾಲಿಟೆಕ್ನಿಕ್ ಡಿಪ್ಲೊಮ : 20,000

ಪದವಿ : 25,000

ಯಾವುದೇ ಸ್ನಾತಕೋತ್ತರ ಪದವಿ : 30,000

ಅಗ್ರಿಕಲ್ಚರ್, ಇಂಜಿನಿಯರ್, ವೆಟರಿನರಿ, ಮೆಡಿಷನ್‌: 35,000

ಅರ್ಜಿ ಸಲ್ಲಿಕೆ :

ಅರ್ಜಿ ಸಲ್ಲಿಕೆ :

ವಿದ್ಯಾರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://sw.kar.nic.in/index.aspx ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಅಗತ್ಯ ದಾಖಲೆಗಳಾದ ಅಂಕಪಟ್ಟಿ, ಪಾಸ್ ಸರ್ಟಿಫಿಕೇಟ್‌, ಆಧಾರ್ ಕಾರ್ಡ್‌, ಬ್ಯಾಂಕ್‌ ಪಾಸ್‌ ಪುಸ್ತಕ, ಫೋಟೋ ಇತರೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಿರುತ್ತದೆ. ಈ ಮೂಲಕ ಡಿಸೆಂಬರ್ 31,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಆನ್‌ಲೈನ್ ಅರ್ಜಿಕೆಗೆ ಈ ಲಿಂಕ್ : https://sw.kar.nic.in/swprizemoney/WebPages/validation.aspx

ಅರ್ಜಿ ಮರುಮುದ್ರಣ :
 

ಅರ್ಜಿ ಮರುಮುದ್ರಣ :

ಅಭ್ಯರ್ಥಿಗಳು ನೀವು ನಿಮ್ಮ ಕೋರ್ಸ್ ನಲ್ಲಿ ಉತ್ತೀರ್ಣರಾದ ವರ್ಷವನ್ನು ಆಯ್ಕೆ ಮಾಡಿ. ತದನಂತರ ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ. ಅಂತಿಮವಾಗಿ ಡೌನ್‌ಲೋಡ್ ಮಾಡಿಕೊಳ್ಳಿ.

ಅರ್ಜಿ ಮರುಮುದ್ರಣ ಲಿಂಕ್: https://sw.kar.nic.in/swprizemoney/WebPages/ReprintAcknowledgement.aspx

ಅರ್ಜಿ ತಿದ್ದುಪಡಿ :

ಅರ್ಜಿ ತಿದ್ದುಪಡಿ :

ಒಂದು ವೇಳೆ ನೀವು ಅರ್ಜಿ ತಿದ್ದುಪಡಿ ಮಾಡುವುದಿದ್ದಲ್ಲಿ ನೀವು ನಿಮ್ಮ ಕೋರ್ಸ್ ನಲ್ಲಿ ಉತ್ತೀರ್ಣರಾದ ವರ್ಷ, ರಿಜಿಸ್ಟ್ರೇಶನ್ ಸಂಖ್ಯೆ, ಜನ್ಮ ದಿನಾಂಕ ಮತ್ತು ನೀವು ಸಿಬಿಎಸ್ಇ/ಕರ್ನಾಟಕ/ಇತರೆ ರಾಜ್ಯ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಲ್ಲಿ ಆಯ್ಕೆ ಮಾಡಿಕೊಳ್ಳಿ.

ಅರ್ಜಿ ತಿದ್ದುಪಡಿಗೆ ಲಿಂಕ್ : https://sw.kar.nic.in/swprizemoney/WebPages/EditProcessPage.aspx

ಕಾಲೇಜು/ವಿಶ್ವವಿದ್ಯಾಲಯ ಪಟ್ಟಿ :

ಕಾಲೇಜು/ವಿಶ್ವವಿದ್ಯಾಲಯ ಪಟ್ಟಿ :

ಕಾಲೇಜು ಅಥವಾ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ನೀವು ಅಧ್ಯಯನ ಮಾಡಿದ ಕಾಲೇಜು ಮತ್ತು ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿ.

ಕಾಲೇಜು/ವಿಶ್ವವಿದ್ಯಾಲಯ ಪಟ್ಟಿ ಲಿಂಕ್ : https://sw.kar.nic.in/swprizemoney/WebPages/UniversityList.aspx

ಅರ್ಜಿಯ ಸ್ಥಿತಿ :

ಅರ್ಜಿಯ ಸ್ಥಿತಿ :

ಅಭ್ಯರ್ಥಿಗಳು ನಿಮ್ಮ ಅರ್ಜಿಯ ಸ್ಥಿತಿಯನ್ನು ವೀಕ್ಷಿಸಲು ನಿಮ್ಮ ಅರ್ಜಿ ಸಂಖ್ಯೆ ಅಥವಾ ಕಾಲೇಜು ಆಯ್ಕೆ ಮಾಡಿ. ತದನಂತರ ನಿಮ್ಮ ಅರ್ಜಿ ಸಂಖ್ಯೆ ಅಥವಾ ಕಾಲೇಜು ವಿವರವನ್ನು ಭರ್ತಿ ಮಾಡಿ. ತದನಂತರ ವೀಕ್ಷಿಸಬಹುದು.

ಅರ್ಜಿಯ ಸ್ಥಿತಿ ವೀಕ್ಷಿಸಲು ಈ ಲಿಂಕ್ : https://sw.kar.nic.in/swprizemoney/WebPages/ApplicationStatus.aspx

ಅರ್ಜಿಯ ಅಂಕಿ ಅಂಶ :

ಅರ್ಜಿಯ ಅಂಕಿ ಅಂಶ :

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಮೊದಲು ಪ್ರೋತ್ಸಾಹಧನದ ಅಂಕಿ ಅಂಶಗಳನ್ನು ವೀಕ್ಷಿಸಬಹುದು.

ಅರ್ಜಿಯ ಅಂಕಿ ಅಂಶ ವೀಕ್ಷಿಸಲು ಲಿಂಕ್ : https://sw.kar.nic.in/swprizemoney/WebPages/ApplicationStatistics.aspx

For Quick Alerts
ALLOW NOTIFICATIONS  
For Daily Alerts

English summary
Karnataka social welfare department invited applications from sc st students who complete course in first attempt and first class for prize money. Candidates can apply before December 31.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X