ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿಕ್ಷಣ ಟಿವಿ ಚಾನೆಲ್ ಪ್ರಾರಂಭಿಸಿದ ತಮಿಳು ನಾಡಿನ ಸರ್ಕಾರ

ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿಯೇ ವಿಶೇಷ ಶಿಕ್ಷಣ ಟಿವಿ ಚಾನೆಲ್ ಅನ್ನು ತಮಿಳುನಾಡಿನ ಸರ್ಕಾರ ಪ್ರಾರಂಭಿಸಿದೆ. ಶಿಕ್ಷಣ ಟಿವಿ (ಕಲ್ವಿ ಥೋಲೈಕ್ಕಚಿ) ಚಾನೆಲ್‌ ಅನ್ನು ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿಯವರು ಆಗಸ್ಟ್ 26 ರಂದು ಚೆನ್ನೈನ ಅನ್ನಾ ಶತಮಾನೋತ್ಸವ ಗ್ರಂಥಾಲಯದಲ್ಲಿ ಲಾಂಚ್ ಮಾಡಿದ್ದಾರೆ. ಈ ಚಾನೆಲ್ ಮೂಲಕ 1 ರಿಂದ 12 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗು ಮಾಹಿತಿಯನ್ನು ನೀಡಲಾಗುವುದು.

ಶೈಕ್ಷಣಿಕ ಚಾನೆಲ್ ಪ್ರಾಥಮಿಕವಾಗಿ ಶಾಲಾ ಮಕ್ಕಳಿಗೆ ಸಂಬಂಧಿಸಿದ ಶಿಕ್ಷಣದ ಕುರಿತಾದ ಮಾಹಿತಿಗಳ ಮೇಲೆ ಕೇಂದ್ರೀಕರಿಸುತ್ತದೆ. ಶಾಲಾ ಮಕ್ಕಳಿಗೆ ಉದ್ಯೋಗ ಮತ್ತು ಶಿಕ್ಷಣ ಸಂಬಂಧಿತ ಮಾಹಿತಿಯನ್ನು ನೀಡುವ ಸದುದ್ದೇಶವನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಈ ಶಿಕ್ಷಣ ಚಾನೆಲ್‌ ಅನ್ನು ಉಚಿತವಾಗಿ ಹಾಗೂ ಮನೆಯಲ್ಲೇ ಕುಳಿತು ನೋಡಬಹುದಾಗಿದೆ.

ಶೈಕ್ಷಣಿಕ ಟಿವಿ ಚಾನೆಲ್ ಪ್ರಾಂಭಿಸಿದ ತಮಿಳು ನಾಡಿನ ಸರ್ಕಾರ

ದೇಶದಲ್ಲೇ ಇದು ಮೊದಲ ಪ್ರಯತ್ನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಾನೆಲ್‌ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳು, ಕೌಶಲ್ಯ ಅಭಿವೃದ್ಧಿ ಮತ್ತು ಶಾಲಾ ಶಿಕ್ಷಣ ಇಲಾಖೆಯು ಹೊರಡಿಸುವ ಯಾವುದೇ ಪ್ರಕಟಣೆಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಗುವುದು.

ಶಾಲಾ ಶಿಕ್ಷಣ ಸಚಿವ ಕೆ ಎ ಸೆಂಗೊಟ್ಟೈಯಾನ್ ಅನೇಕ ಶಿಕ್ಷಣ ತಜ್ಞರೊಂದಿಗೆ ಈ ಸಂದರ್ಭದಲ್ಲಿ ಭಾಗವಹಿಸಿದರು.

For Quick Alerts
ALLOW NOTIFICATIONS  
For Daily Alerts

English summary
Tamil nadu government launches education tv channel for school students in tamil language
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X